ನಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಲಿಂಬೆರಸವನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ.
ನಿಂಬೆಯಲ್ಲಿ ನೈಸರ್ಗಿಕದತ್ತವಾಗಿರುವ ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಸಿ ಇದೆ. ವಿಟಮಿನ್ ಸಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಶೀತ ಹಾಗೂ ಜ್ವರದಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಲಿಂಬೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಮತ್ತು ದೇಹಕ್ಕೆ ಶಮನ ನೀಡುವುದು.
ಜೀರ್ಣಕ್ರಿಯೆ ಹೆಚ್ಚಿಸುವುದು:ಹೊಟ್ಟೆಯಲ್ಲಿ ಕಂಡುಬರುವಂತಹ ಜೀರ್ಣರಸವು ಲಿಂಬೆರಸಕ್ಕೆ ಸಮಾನವಾಗಿದೆ. ಇದರಿಂದ ಲಿಂಬೆನೀರನ್ನು ಕುಡಿದರೆ ಯಕೃತ್ ಬೈಲೆಯನ್ನು ಬಿಡುಗಡೆ ಮಾಡಲು ಪ್ರೋತ್ಸಾಹಿಸುತ್ತದೆ. ಇದರಿಂದ ಅಜೀರ್ಣ ನಿವಾರಣೆಯಾಗಿ ಹೊಟ್ಟೆಯ ತಳಮಳ ದೂರವಾಗುವುದು.
ಆಮ್ಲೀಯ ಪರಿಸ್ಥಿತಿಯಲ್ಲಿ ಉರಿಯೂತವು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಲಿಂಬೆಯು ದೇಹದಲ್ಲಿ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ. ಇದರಿಂದ ಊತ ಕಡಿಮೆಯಾಗುವುದು. ಸಂಧಿವಾತದಂತಹ ಉರಿಯೂತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ಲಿಂಬೆಯ ನೀರನ್ನು ಬಳಸಿಕೊಳ್ಳಬಹುದು.