ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಬಳಸುವವರಾಗಿದ್ದಾರೆ, ತಮಗೆ ಏನು ಬೇಕು ಅವುಗಳನ್ನು ಫೋನ್ ಮೂಲಕವೇ ಪಡೆಯುವ ವಾತಾವರಣ ಸೃಷ್ಟಿಯಾಗಿದೆ. ಹೀಗಿರುವಾಗ ಫೋನ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ ಬರಿ ಪುರುಷರು ಅಷ್ಟೇ ಅಲ್ಲದೆ ಮಹಿಳೆಯರು ಕೂಡ ಇಂತಹ ವಿಡಿಯೋಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದಾಗಿ ಸಂಶೋಧನೆಯ ಮೂಲಕ ತಿಳಿಯಲಾಗಿದೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವೊಂದು ನಡೆಸಿದ ಸಂಶೋಧನೆಯಿಂದ ‘ಇನ್ಕಾಗ್ನಿಟೋ ಮೋಡ್‘ನಲ್ಲಿ ಬ್ರೌಸ್ ಮಾಡಿದ ಎಲ್ಲಾ ಪೋರ್ನ್ ವೆಬ್ಸೈಟ್ಗಳು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತವೆ ಎಂಬ ವಿಚಾರವನ್ನು ಬೆಳಕಿಗೆ ತಂದಿದೆ.
ಯಾರಿಗೂ ತಿಳಿಯದೇ ಇನ್ಕಾಗ್ನಿಟೊ ಮೋಡ್ನಲ್ಲಿ ಅಶ್ಲೀಲ ವಿಡಿಯೋ ನೋಡಿದರೆ ಬಳಕೆದಾರರ ಐಪಿ ವಿಳಾಸ ಮತ್ತು ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಂತೆಯೇ, ಪೋರ್ನ್ ವೆಬ್ಸೈಟ್ಗಳು ಮಾಹಿತಿಯನ್ನು ಹೇಗೆ ಸೋರಿಕೆ ಮಾಡುತ್ತಿವೆ ಎಂಬುದನ್ನು ಕಂಡುಹಿಡಿಯಲು ವೆಬ್ಎಕ್ಸ್ರೇ ಎಂಬ ಟೂಲ್ ಬಳಸಿ ಈ ಸತ್ಯಾಂಶವನ್ನು ಬೆಳಕಿಗೆ ತಂದಿದ್ದಾರೆ . ಈ ಮೂಲಕ ಬಳಕೆದಾರನ ಮಾಹಿತಿಯನ್ನು ಸಂಗ್ರಹಿಸುತ್ತಿರುವ 22,484 ಪೋರ್ನ್ ವೆಬ್ಸೈಟ್ಗಳ ಮಾಹಿತಿಯನ್ನು ಕಲೆಹಾಕಿದ್ದಾರೆ.
ಸಂಶೋಧಕರ ಪ್ರಕಾರ ಶೇ.93 ರಷ್ಟು ವೆಬ್ಸೈಟ್ಗಳು ಬಳಕೆದಾರರ ಮಾಹಿತಿಯನ್ನು ಥರ್ಡ್ ಪಾರ್ಟಿಗೆ ಸೋರಿಕೆ ಮಾಡುತ್ತಿವೆ ಎಂದು ತಿಳಿಸಿದೆ. ಅದರಲ್ಲಿ ಗೂಗಲ್ ಮತ್ತು ಅದರ ಅಂಗ ಸಂಸ್ಥೆಯಿಂದಲೆ ಹೆಚ್ಚಿನ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಹೇಳಿದೆ.