ಉಪ್ಪಿಗಿಂತ ರುಚಿ ಬೇರೆ ಇರುವುದಿಲ್ಲ. ಸಾಮಾನ್ಯವಾಗಿ ನಮ್ಮ ಆಹಾರ ಪದ್ದತಿಯಲ್ಲಿ ಉಪ್ಪು ಅನ್ನೋದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉಪ್ಪಿನ ರುಚಿ ಎಲ್ಲದಕ್ಕೂ ಮಿಗಿಲಾದದ್ದು ಅನ್ನೋದು ಗೊತ್ತಿರುವ ವಿಚಾರವೇ. ಆದರೆ ಈ ಉಪ್ಪು ಆಹಾರಕ್ಕೆ ಮಾತ್ರವಲ್ಲದೆ ದೇಹದ ತ್ವಚೆಗೂ ಅತ್ಯತ್ತಮ ರಾಮಬಾಣ ಅನ್ನೋದು ಹಲವಾರು ತಿಳಿದಿದೆ. ಹಾಗಾದ್ರೆ ಈ ಉಪ್ಪಿನಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿಗೆ ಅನ್ನೋದನ್ನು ನೀವೇ ಓದಿ..

ಹೌದು, ತಮ್ಮ ಮೂಖದ ಕಾಂತಿ ಹೆಚ್ಚಿಸಲು ಅಲವಾರು ವಿಧಾನಗಳನ್ನು ಅನೇಕ ಕೆಮಿಕಲ್‌ಗಳನ್ನು ನಾವು ಉಪಯೋಗಿಸುತ್ತೇವೆ. ಆದರೆ ಯಾವುದೇ ಕೆಮಿಕಲ್ ಇಲ್ಲದೆ. ಪರಿಸರದಿಂದ ಬಂದ ಅನೇಕ ವಸ್ತುಗಳನ್ನು ನಾವು ದೂರ ತಳ್ಳೋದು ಇದೆ. ಅಂಥಹ ವಸ್ತುಗಳಲ್ಲಿ ಉಪ್ಪು ಕೂಡ ಒಂದು. ಉಪ್ಪು ತ್ವಚೆಯ ಕಾಂತಿ ಹೆಚ್ಚಿಸಲು ಅತ್ಯತ್ತಮ ವಸ್ತುವಾಗಿದೆ.

ಎಣ್ಣೆಯುಕ್ತ ಚರ್ಮದವರು ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಹಾಕಿ ಮುಖದ ಮೇಲೆ ಚುಮುಕಿಸಿ ಅಂತ ಅದರ ಹಾವಿಯನ್ನು ಪಡೆಯೋದರಿಂದ ಹೆಚ್ಚಿನ ಕಾಂತಿಯುಕ್ತ ಪಡೆಯಬಹುದಾಗಿದೆ. ಇನ್ನು ಹಿಮಾಲಯದ ಕೆಂಪು ಉಪ್ಪನ್ನು ಬಳಸುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಹಾಗೂ ಮೊಡವೆಗಳು ಮೂಡಲು ಕಾರಣವಾದ ಬ್ಯಾಕ್ಟೀರಿಯಾವನ್ನು ಈ ಹಿಮಾಲಯ ಉಪ್ಪು ತಡೆಯುತ್ತದೆ. ಇನ್ನು ಆಲೀವ್ ಆಯಿಲ್ ಜೊತೆ ಒಂದು ಚಿಟಿಗೆ ಉಪ್ಪು ಬೆರಸಿ ಬೆರಳ ತುದಿಯಿಂದ ಮಜಾಸ್ ಮಾಡುತ್ತಾ ಬಂದರೆ ಮುಖದ ಮೇಲಿನ ನೀರು ಗುಳ್ಳೆ ಅಥವಾ ಕೀವು ಗುಳ್ಳೆ ಮಾಯವಾಗುತ್ತವೆ.

ಇನ್ನು ತ್ವಚೆಗೆ ಅಷ್ಟೆ ಅಲ್ಲ ಮನುಷ್ಯನ ದೇಹಕ್ಕೂ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಈ ಉಪ್ಪುನ್ನು ಬಿಸಿನೀರಿನಲ್ಲಿ ಹಾಕಿ ಕಾಲನ್ನು ಅದರಲ್ಲಿ ಇಟ್ಟುಕೊಳ್ಳುವುದರಿಂದ ಕಾಲು ಊತ ಹಾಗೂ ನೋವು ಕಡಿಮೆಯಾಗುತ್ತದೆ. ಇನ್ನು ಕಣ್ಣಿನ ಭಾಗಕ್ಕೂ ಉಪ್ಪು ರಾಮಭಾಣವಾಗಿದೆ. ಹೀಗೆ ಸಾಕಷ್ಟು ರೀತಿಯಲ್ಲಿ ಉಪ್ಪು ಮನುಷ್ಯನ ದೇಹಕ್ಕೆ ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *