ಏಲಕ್ಕಿ ಅಂಥಾಕ್ಷಣ ಥಟ್ ಅಂತಾ ನೆನಪಾಗೋದು ಸುವಾಸನೆಯ ಪರಿಮಳ. ಸಾಕಷ್ಟು ಮಂದಿ ಏಲಕ್ಕಿಯನ್ನು ಅಡುಗೆಗೆ ಬಳಸೋದು ಸುವಾಸನೆಗೆ. ಏಲಕ್ಕಿ ಚಿಕ್ಕದಾದರೂ ಅದರ ಕೆಲಸ ದೊಡ್ಡದು. ಊಟ ಆದ ನಂತರ ಎಷ್ಟೋ ಮಂದಿ ಏಲಕ್ಕಿಯನ್ನು ತಿನ್ನುತ್ತಾರೆ. ಅದೇ ರೀತಿ ಏಲಕ್ಕಿಯ ನೀರು ಕೂಡ ಮನುಷ್ಯನ ದೇಹಕ್ಕೆ ಹಾಗೂ ಹಲವು ರೋಗಗಳಿಗೆ ರಾಮಭಾಣ.
ಸಾಮಾನ್ಯವಾಗಿ ಏಲಕ್ಕಿ ತಿನ್ನೋದ್ರಿಂದ ಅಜೀರ್ಣತೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಊಟದ ನಂತರ ಎಲೆ ಅಡಿಕೆ ಜೊತೆಯಲ್ಲಿ ಏಲಕ್ಕಿಯನ್ನು ತಿನ್ನುತ್ತಿದ್ದರು. ಇನ್ನು ಏಲಕ್ಕಿ ಕ್ಯಾನರ್ ರೋಗ ತಡೆಗಟ್ಟುವಲ್ಲಿ ಉಪಕಾರಿಯಾಗುತ್ತದೆ. ಇನ್ನು ಏಲಕ್ಕಿ ರೋಗನಿರೋಧಕ ಶಕ್ತಿಯನ್ನು ಹೆಚ್ವು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೆ ಅಲ್ಲ ಆಸಿಡಿಟಿಗೂ ಏಲಕ್ಕಿ ರಾಮಬಾಣ.
ಇನ್ನು ಏಲಕ್ಕಿ ನೀರು ಕೂಡ ಮನುಷ್ಯನ ದೇಹಕ್ಕೆ ತುಂಬಾ ಮುಖ್ಯ. ಏಲಕ್ಕಿಯ ನೀರು ತಯಾರಿಸೋದು ಸುಲಭ ವಿಧಾನ. ಏಲಕ್ಕಿಯನ್ನು ಕುದಿಯುವ ನೀರಲ್ಲಿ ಹಾಕಿ ಸ್ವಲ್ಪ ಕುದಿಸಿದರೆ ಸಾಕು. ಏಲಕ್ಕಿ ನೀರು ರೆಡಿ. ಸದ್ಯ ಈ ನೀರು ಕುಡಿಯೋದರಿಂದ ಗಂಟಲ್ಲಿ ಆಗುವ ಕಿರಿಕಿರಿ ನಿವಾರಣೆಯಾಗುತ್ತೆ. ಇನ್ನು ಈ ನೀರು ಕುಡಿಯೋದರಿಂದ ಮಲಬದ್ಧತೆ ಬಗೆಹರಿಯುತ್ತದೆ. ಇನ್ನು ಈ ನೀರನ್ನು ಬೆಳಗ್ಗೆ ಕುಡಿಯೋದರಿಂದ ದಿನ ಪೂರ್ತಿ ಉಲ್ಲಾಸದಿಂದ ಇರಬಹುದು. ಇನ್ನು ಬಾಯಲ್ಲಿ ಪದೇ ಪದೇ ಉಣ್ಣು ಆಗುವವರಿಗೆ ಏಲಕ್ಕಿ ರಾಮಬಾಣ. ಹೀಗೆ ಏಲಕ್ಕಿಯಿಂದ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.