WhatsApp Group Join Now

ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಇತರರಿಗೆ ಮಾದರಿಯಾಗಿದ್ದಾರೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಅದರಲ್ಲೂ 40 ಬೊರ್‍ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ. ಇಂಥ ಹೊತ್ತಲ್ಲಿ ಮಗನಿಗೆ ಧೈರ್ಯ ತುಂಬಿದ್ದು ಕೆಇಬಿ ನಿವೃತ್ತ ಎಂಜಿನಿಯರ್ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್‍ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.

ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ತಾಯಿ ಲಲಿತಮ್ಮ, ಎಂಟೆಕ್ ಪದವೀಧರೆಯಾಗಿರೋ ಪತ್ನಿ ಅಕ್ಷತಾ ಸಹ ಗಿರೀಶ್‍ಗೆ ಸಾಥ್ ನೀಡುತ್ತಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *