ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ” ಇವರು ಈಗ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಬೆಳೆದು ನಿಂತ್ತಿದ್ದಾರೆ. ಇವರು ‘ಒಂದು ಕಡೆ ಸ್ಲೇಟ್, ಮತ್ತೊಂದು ಕೈಯಲ್ಲಿ ಒಂದು ಪ್ಲೇಟ್’ ಮಾತನ್ನು ನೆನಪಿನಲ್ಲಿಟ್ಟುಕೊಂಡು ವಿಶ್ವದ ಅತಿದೊಡ್ಡ ಥೈರಾಯ್ಡ್ ಪರೀಕ್ಷಾ ಪ್ರಯೋಗಾಲಯವನ್ನು ಪ್ರಾರಂಭಿಸಿ 3,300 ಕೋಟಿ ರೂ ವಹಿವಾಟು ಮಾಡುತ್ತಿರುವ ವೇಲುಮಣಿ ಸ್ವತಹ ತಮ್ಮ ಸಾಧನೆಯ ಬಗ್ಗೆ ತಿಳಿಸಿದ್ದಾರೆ.
ಬಾಲ್ಯದಲ್ಲಿ ನಮಗೆ ತಿನ್ನಲು ಊಟದ ಸವಲತ್ತು ಕೂಡ ಇರಲಿಲ್ಲ ಎರಡು ಹೊತ್ತಿನ ಊಟವು ದುಬಾರಿಯಾದ ಕುಟುಂಬ ನಮ್ಮದು. ಮೈಮೇಲೆ ಹಾಕಲು ಬಟ್ಟೆಗಳು ಕೂಡ ಇರಲಿಲ್ಲ, ಎಂದು TEDx ಸಮಾವೇಶದಲ್ಲಿ ಮಾತನಾಡುತ್ತಾ, ನಾನು ಬಡತನದ ಯುದ್ದದಲ್ಲಿ ಬೇಸದು ಯಶಸ್ಸನ್ನು ಗಳಿಸಿದ್ದೇನೆ. ತಮಿಳು ನಾಡಿನ ಕೊಯಮತ್ತೂರಿನಲ್ಲಿ 7 ಜನರು ಇರುವ ಕುಟುಂಬದಲ್ಲಿ ಏಪ್ರಿಲ್ 1959 ರಲ್ಲಿ, ಭೂಮಿ ಇಲ್ಲದೆ ಇರುವ ರೈತರ ಮನೆಯಲ್ಲಿ ಜನಿಸಿದೆ. ಆಗ ನನ್ನ ತಂದೆಗೆ ಮನೆಯನ್ನು ನಿಭಾಯಿಸಲು ಕೂಡ ಕಷ್ಟವಾಗಿತ್ತು. ನನ್ನ ತಾಯಿ ಎರಡು ಎಮ್ಮೆಗಳನ್ನು ಸಾಕಿ ವಾರಕ್ಕೆ 50 ರೂ ಗಳಿಸುತ್ತಿದ್ದರು ಅದರಿಂದ ಮನೆ ನಡೆಯುತ್ತಿತ್ತು. ನನಗೆ ಒಂದು ಜೋಡಿ ಚಪಲ್ಲಿ ಕೊಡಿಸಲು ಸಹ ಆಗುತ್ತಿರಲಿಲ್ಲ ಅಷ್ಟೊಂದು ಕಡು ಬಡತನ ನಮ್ಮದು, ಶಾಲೆಯಲ್ಲಿ ಸಿಗುವ ಊಟದ ಆಸೆಗೆ ಶಾಲೆಯ ಮೆಟ್ಟಿಲು ಹತ್ತುತ್ತಿದೆ ಅದೇ ನನಗೆ ಜೀವನ ಕಳಿಸಿತು.
ನಂತರ ಬಿಎಸ್ಸಿ ಪದವಿ ಪಡೆದು ಕೊಯಮತ್ತೂರಿನಲ್ಲಿ ಸಣ್ಣ ಔಷಧೀಯ ಕಂಪೆನಿಯನ್ನು ಸೇರಿಕೊಂಡೆ ಆಗ ನನಗೆ 150 ರೂ ಸಂಬಳ ವಿತ್ತು, 3 ವರ್ಷದಲ್ಲಿ ಆ ಕಂಪನಿ ಮುಚ್ಚಿಕೊಂಡಿತು. ನಂತರ 3 ವರ್ಷಗಳು ಕೆಲಸವಿಲ್ಲದೇ ತಿರುಗುವ ಪರಿಸ್ಥಿತಿ ಬಂದಿತ್ತು. ನಂತರ ಪ್ರತಿಷ್ಠಿತ ಭಭಾ ಅಟಾಮಿಕ್ ಸಂಶೋಧನಾ ಕೇಂದ್ರದಲ್ಲಿ ಕೆಲಸ ದೊರೆಯಿತು. ಇಲ್ಲಿ ನನಗೆ ವೃತ್ತಿಯ ಜೊತೆಗೆ ಹೆಚ್ಚಿನ ಸಂಶೋಧನೆ ಮಾಡಲು ಸಾಧ್ಯವಾಗಿತು. ಇದರಿಂದ ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ P.HD ಪದವಿಯನ್ನು ಪಡೆದುಕೊಂಡೆ ನನ್ನ ಶ್ರದ್ಧೆ ಮತ್ತು ಗಮನದಿಂದ “1982 ರಲ್ಲಿ ಥೈರಾಯಿಡ್ ಗ್ರಂಥಿ ಎಲ್ಲಿದೆ ಎಂದು ನನಗೆ ತಿಳಿದಿರಲ್ಲಿಲ್ಲದ ನನಗೆ 1995 ರ ಹೊತ್ತಿಗೆ, ಥೈರಾಯ್ಡ್ ಜೀವರಸಾಯನಶಾಸ್ತ್ರದಲ್ಲಿ ಈ ಪದವಿಯನ್ನು ಪಡದೆ.
ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ಅವರನ್ನು ಮದುವೆಯಾದರು ಸ್ವಲ್ಪ ದಿನಗಳ ನಂತರ ಸ್ವಂತ ಥೈರಾಯಿಡ್ ಪ್ರಯೋಗಾಲಯವನ್ನು ಪ್ರಾರಂಭಿಸುವ ಯೋಚನೆಯಲ್ಲಿ ಸುಮತಿ ಕೆಲಸ ಬಿಡಲು ತಿಳಿಸಿದೆ. ಸುಮತಿ ಈಗಾಗಲೇ 14 ವರ್ಷಗಳು ಬ್ಯಾಂಕ್-ನಲ್ಲಿ ಕೆಲಸ ಮಾಡಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಪ್ರಾವಿಡೆಂಟ್ ನಿಧಿಯಿಂದ 2 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಅವರು ಥೈರೋರೆರ್ ಅನ್ನು ಪ್ರಾರಂಭಿಸಿದರು. ಆರಂಭದಲ್ಲಿ, ಈ ಕಂಪನಿ ಥೈರೊಡೈರ್ ಥೈರಾಯಿಡ್-ಸಂಬಂಧಿತ ಅಸ್ವಸ್ಥತೆಗಳ ರೋಗನಿರ್ಣಯದ ಮೇಲೆ ಗಮನ ಕೇಂದ್ರೀಕರಿಸಲ್ಪಟ್ಟಿತು.
ನಂತರ ಕಂಪನಿಯು ಬೆಳದಂತೆ ಡೊಮೇನ್ ಮಧುಮೇಹ, ಬಂಜೆತನ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಲೈಂಗಿಕವಾಗಿ ಹರಡುವ ರೋಗಗಳು ಪತ್ತೆಹಚ್ಚುವ ಪ್ರಯೋಗಾಲಯವನ್ನು ವಿಸ್ತರಿಸಿದರು. ಎರಡು ವರ್ಷಗಳ ಹಿಂದೆ ಕಂಪನಿ 3,415 ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆಗೆ ತಲುಪಿದೆ. ಇದು ಭಾರತದ ತುಂಬೆಲ್ಲ ನೇಪಾಳ, ಬಾಂಗ್ಲಾದೇಶ, ಮಧ್ಯಪ್ರದೇಶ ಸೇರಿದಂತೆ 1,250 ಕೇಂದ್ರಗಳನ್ನು ಹೊಂದಿದೆ. ಕಂಪನಿ ಒಂದು ವರ್ಷಕ್ಕೆ ಈಗ 30 ಮಿಲಿಯನ್ ರೋಗನಿರ್ಣಯ ಪರೀಕ್ಷೆಗಳನ್ನು ಮಾಡುತ್ತಿದೆ. ಈ ಸಾಧನೆಯಗೆ ಬೆನ್ನೆಲಬು ಆದ ವೇಲುಮಣಿ ಪತಿ ಸುಮತಿ ಫೆಬ್ರವರಿ 2016 ರಲ್ಲಿ ಕ್ಯಾನ್ಸರ್ ರೋಗಗಕ್ಕೆ ತುತ್ತಾಗಿ. ಮಕ್ಕಳ ಜೊತೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಸಂಗ್ರಹ ಮಾಹಿತಿ.