ಕರಿಬೇವು ಯಾರಿಗೆ ತಾನೇ ಗೊತ್ತಿಲ್ಲ. ಒಗ್ಗರಣೆಗೆ ಕರಿಬೇವು ಇಲ್ಲದೆ ಅಡುಗೆಯೇ ಪರಿಪೂರ್ಣವಾಗೋದಿಲ್ಲ. ಅದರಲ್ಲೂ ಕೆಲವೊಂದಿಷ್ಟು ಭಾಗದ ಮಂದಿಗೆ ಕರಿಬೇವು ತುಂಬಾ ಮುಖ್ಯವಾದಂತಹ ಅಡುಗೆ ಪದಾರ್ಥವೇ. ಸದ್ಯ ಈ ಅಡುಗೆ ಪದಾರ್ಥದಿಂದ ಆರೋಗ್ಯಕ್ಕೆ ಹಾಗೂ ಕೂದಲಿಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ..?
ಹೌದು, ಕರಿಬೇವು ಎಲೆ ಚಿಕ್ಕದಾದರೂ ಅದರ ಕೆಲಸ ಮಾತ್ರ ಅಘಾದವಾದದ್ದು. ಕರಿಬೇವಿನ ಪ್ರೋಜನಗಳು ಸಾಕಷ್ಟಿವೆ. ಆದರೆ ಕೆಲವೊಮ್ಮೆ ನಾವೆ ಈ ಕರಿಬೇವನ್ನು ಊಟದಿಂತ ಬೇರ್ಪಡಿಸಿ ತಿನ್ನೋದುಂಟು. ಹಾಗಾಗಿ ಈ ಕರಿಬೇವು ಬೇರ್ಪಡಿಸೋದರಿಂದ ನಷ್ಟ ನಮಗೇನೆ.
ಕರಿಬೇವಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ಈ ಕರಿಬೇವನ್ನು ತಿನ್ನುವುದರಿಂದ ಐರನ್ ಕಂಟೆಂಟ್ ಹೆಚ್ಚಾಗುತ್ತದೆ. ಐರನ್ ಕಂಟೆಂಟ್ ಹೆಚ್ಚಾದಂತೆ ರಕ್ತ ಹೀನತೆ ಇದ್ದರೆ ಸರಿಹೋಗುತ್ತೆ. ಹಾಗಾಗಿ ಅಡುಗೆಯಲ್ಲಿ ಕರಿಬೇವು ಸಿಕ್ಕರೆ ಎಸೆಯಬೇಡಿ ಇಂದರೆ ಉತ್ತಮ
ಇನ್ನು ಹೆಚ್ಚು ಆಲ್ಕೋಹಾಲ್ ಸೇವಿಸುವವರು ಕರಿಬೇವನ್ನು ತಿನ್ನೋದರಿಂದ ಲಿವರ್ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಅಧ್ಯನಗಳ ವರದಿ. ಕರಿಬೇಕು ವಿವರ್ಗೂ ಕೂಡ ಉತ್ತಮವಾದಂತಹ ಅಂಶವಾಗಿದೆ. ಇನ್ನು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಕರಿಬೇವು.
ಜೀರ್ಣಶಕ್ತಿಗೂ ಕರಿಬೇವು ಉತ್ತಮ ಔಷಧವಾಗಿದೆ. ಅಂದರೆ ಕರಿಬೇವು ತಿನ್ನುವುದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ. ಹೊಟ್ಟೆಯೊಳಗಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ ಜೀರ್ಣ ಕ್ರಿಯೆಗೆ ಸಹಾಕಾರಿಯಾಗುತ್ತದೆ.
ಆರೋಗ್ಯದ ಜೊತೆ ಕೂದಲಿಗೂ ಕೂಡ ಉತ್ತಮ ಔಷಧ ಈ ಕರಿಬೇಕು. ಈ ಕರಿಬೇವು ತಿನ್ನೋದರಿಂದ ಬಿಳಿ ಕೂದಲಾಗುವುದು ಕಡಿಮೆಯಾಗುತ್ತದೆ. ಅಷ್ಟೆ ಅಲ್ಲ ಕೊಬ್ಬರಿ ಎಣ್ಣೆ ಜೊತೆ ಕರಿಬೇವನ್ನು ಹಾಕಿ ಕುತ್ತಿಸಿ ತಲೆಗೆ ಹಚ್ಚುವುದರಿಂದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.