ಹೌದು ಮಾನವನ ದೇಹಕ್ಕೆ ನರಗಳು ತುಂಬಾನೇ ಮುಖ್ಯ, ದೇಹದ ಯಾವುದೇ ಭಾಗದಲ್ಲಿನ ನರಗಳಲ್ಲಿ ಏನಾದ್ರು ತೊಂದ್ರೆ ಆದರೆ ಹಲವು ಸಮಸ್ಯೆಗಳು ಕಂಡುಬರುತ್ತವೆ, ಹಾಗಾಗಿ ನಿಮ್ಮ ದೇಹದಲ್ಲಿನ ನರಗಳ ದೌರ್ಬಲ್ಯ ಸಮಸ್ಯೆಗೆ ಸೂಕ್ತ ಮನೆಮದ್ದುಗಳು ಇಲ್ಲಿವೆ ನೋಡಿ.
ಒಂದು ಲೋಟ ಬಿಸಿಯಾದ ಹಾಲಿಗೆ ಒಂದು ಬೆಳ್ಳುಳ್ಳಿ ಅರೆದು ಹಾಲಿನಲ್ಲಿ ಮಿಶ್ರಣಮಾಡಿ ಮಲಗುವ ಮುಂಚೆ ಕುಡಿದು ಮಲಗಿದರೆ ನರಗಳ ದೌರ್ಬಲ್ಯ ಹೆಸರಿಲ್ಲದಂತೆ ಮಾಯವಾಗುತ್ತದೆ. ನರಗಳ ಉದ್ರೇಕ ಶಮನ ಮಾಡಲು ಬಿಸಿನೀರಿಗೆ ಬಾದಾಮಿ ಬೀಜ, ಸೋಮಪುಕಾಳು ಸಕ್ಕರೆ ಸಮಪ್ರಮಾಣದಲ್ಲಿ ಅರೆದು ಸೇರಿಸದಿ ರಾತ್ರಿ ಮಲಗುವಾಗ ಸೇವಿಸುತ್ತಾ ಬರಬೇಕು.
ಪ್ರತಿದಿನವೂ ಊಟದಲ್ಲಿ ಹಸಿ ಈರುಳ್ಳಿಯನ್ನು ತಿನ್ನುತ್ತಾ ಬಂದರೆ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ ಮತ್ತು ನುಗ್ಗೆಸೊಪ್ಪಿನ ಪಲ್ಯ ಅಗಸೆಸೊಪ್ಪಿನ ಪಲ್ಯ ಬಿಡದೆ 8 ದಿನ ಸೇವಿಸುವುದರಿಂದ ನರಗಳ ಅಸಕ್ತಿ ಕಡಿಮೆಯಾಗುತ್ತದೆ.
ದ್ರಾಕ್ಷಿಹಣ್ಣು, ಸೇಬಿನಹಣ್ಣು ಪರಂಗಿ ಹಣ್ಣು,ಬಾಳೆಹಣ್ಣುಗಳನ್ನು ಸೇವಿಸುವುದರಿಂದ ನರದ ಉದ್ರೇಕ ಕಡಿಮೆಯಾಗುವುದು. ಪ್ರದಿದಿನದ ಅಡುಗೆಯಲ್ಲಿ ನುಗ್ಗೆಕಾಯಿ ಸೇವಿಸುವುದರಿಂದ ನರದೌರ್ಬಲ್ಯ ಕಡಿಮೆಯಾಗುವುದು. ಬಾಳೆದಿಂಡನ್ನು ತಂದು ತೊಳೆದು ತುರಿ ಮಾಡಿಕೊಂಡು ರಸ ಹಿಂದಿ ಒಂದು ಬಟ್ಟಲಿನಷ್ಟು ರಸಕ್ಕೆ ಎಳೆನೀರು ಸೇರಿಸಿ ಕುಡಿಯುತ್ತ ಬಂದರೆ ನರಗಳ ದೌರ್ಬಲ್ಯ ಕಂಡುಬರುವುದಿಲ್ಲ.