ದಿನಕ್ಕೆ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆಯನ್ನು ಕೊಟ್ಟು ಬಂದಂತ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಅಷ್ಟಕ್ಕೂ ಈ ವೈದ್ಯರು ಯಾರು ಇದು ಇಲ್ಲಿ ಹಾಗೂ ಇವರ ಸಮಾಜ ಸೇವೆಯ ಬಗ್ಗೆ ತಿಳಿಯಲು ಮುಂದೆ ನೋಡಿ.
ಇವರ ಹೆಸರು ಡಾ. ರಮಣ್ ರಾವ್ ಎಂಬುದಾಗಿ 1974 ರಲ್ಲೇ ಇವರು ಹಳ್ಳಿಯ ಜನಕ್ಕೆ ಅಂದರೆ ಬಡವರಿಗಾಗೇ ಒಂದು ಉಚಿತ ಚಿಕಿತ್ಸೆಯನ್ನು ಕೊಡುವಂತ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 45 ವರ್ಷಗಳ ಕಾಲ ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ.
ಪ್ರತಿ ಭಾನುವಾರದಂದು ಇವರು ರೋಗಿಗಳಿಗೆ ಉಚಿತ ಟ್ರೆಟ್ಮೆಂಟ್ ಕೊಡುತ್ತಾರೆ, ದಿನಕ್ಕೆ 900 ರಿಂದ 1100 ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಈ ಕ್ಲಿನಿಕ್ ಇರೋದು ಬೆಂಗಳೂರಿನ ಬೆಗುರ್ ನಲ್ಲಿ, ಅಲ್ಲಿ ಇದರ ಬಗ್ಗೆ ಕೇಳಿದರೆ ಸಂಪೂರ್ಣ ಮಾಹಿತಿಯನ್ನು ಕೊಡಲಾಗುವುದು.
ಈ ವೈದ್ಯರು ಉಚಿತ ಚಿಕಿತ್ಸೆಯನ್ನು ನೀಡಲು ವಾರಕ್ಕೆ 2 ಲಕ್ಷ ರೂ ಖರ್ಚು ಮಾಡುತ್ತಾರೆ, ಇವರ ಪುತ್ರರಾದ ಡಾ.ಚರಿತ್ ಭೋಜರಾಜ್ ಮತ್ತು ಡಾ.ಅಭಿಜಿತ್ ಭೋಜರಾಜ್ ಕೂಡಾ ಗ್ರಾಮೀಣ ಜನರ ಸೇವೆ ಮಾಡುತ್ತಿದ್ದಾರೆ. ಈ ಉಚಿತ ಕ್ಲಿನಿಕ್ ನಲ್ಲಿ 10 ಜನ ಡೆಂಟಿಸ್ಟ್, ಚರ್ಮ ರೋಗ ತಜ್ಞರು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಯಿದ್ದಾರೆ.
ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡೋದು ಅಷ್ಟೇ ಅಲ್ಲ ಇನ್ನು ಹಲವು ಕೆಲಸಗಳನ್ನು ಮಾಡಿದ್ದಾರೆ, ತಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯದ ಕಾಳಜಿ ವಹಿಸಿ ಬಡವರಿಗಾಗಿ 7000 ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿದ್ದಾರೆ. ಕುಡಿಯುವ ನೀರಿನ ತೊಂದರೆ ಆಗದಿರಲಿ ಅನ್ನೋ ಕಾರಣಕ್ಕೆ 4ರಿಂದ 5 ಬೋರವೆಲ್ ಗಳನ್ನೂ ಕೊರೆಸಿದ್ದಾರೆ, ಅಷ್ಟೇ ಅಲ್ಲದೆ 50 ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಮುಂತಾದವುಗಳನ್ನು ನೀಡುತ್ತಿದ್ದಾರೆ. ಇವರ ಕಾರ್ಯ ಸಾಧನೆಗೆ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.