ಗೋಡಂಬಿ ಹಲ್ವಾ ಮಾಡಿ ಪ್ರತಿದಿನವೂ ಎರಡು ಬಾರಿ ಸೇವಿಸಿ ಹಾಲು ಕುಡಿದರೆ ತೂಕ ಹೆಚ್ಚಾಗುತ್ತದೆ. ಹಸುವಿನ ಹಾಲಿನಲ್ಲಿ ಬಾಳೆಹಣ್ಣು ಕೂರು ಮಾಡಿ ಸಕ್ಕರೆ ಬೆರಸಿ ಮಿಕ್ಸಿಯಲ್ಲಿ ಹಾಕಿ ತೆಗೆದುಕೊಂಡು ಕುಡಿದರೆ ತೂಕ ಹೆಚ್ಚುತ್ತಾ ಹೋಗುತ್ತದೆ.
ಬಾಳೆಹಣ್ಣನ್ನು ರಸ ಮಾಡಿಕೊಂಡು ಅದನ್ನು ಹಾಲಿನಲ್ಲಿ ಬೆರಸಿ ಪ್ರತಿ ದಿನ ಕುಡಿಯುವುದರಿಂದ ದೇಹದ ತೂಕ ಹೆಚ್ಚುತ್ತಾ ಹೋಗುತ್ತದೆ ಅಶ್ವಗಂಧ ಲೇಹ್ಯ ಒಂದು ಗ್ರಾಂ ನಂತೆ ತಿನ್ನುತ್ತಾ ಹಾಲು ಕುಡಿದರೆ ತೂಕ ಹೆಚ್ಚಾಗುವುದು
ಮೇಕೆಯ ಹಾಲನ್ನು ಪ್ರತಿದಿನವೂ ಕುಡಿಯುತ್ತ ಬಂದರೆ ಶರೀರದ ತೂಕ ಹೆಚ್ಚುವುದು. ಉದ್ದಿನಹಿಟ್ಟು, ಅಕ್ಕಿಹಿಟ್ಟು, ಗೋದಿ ಹಿಟ್ಟು ಬಾಳೆಹಣ್ಣು, ಸೀಬೆಹಣ್ಣು, ಸಪೋಟ, ಸೇಬಿನಹಣ್ಣು, ದ್ರಾಕ್ಷಿ, ಗೋಡಂಬಿ, ಬಾದಾಮಿಗಳನ್ನು ಸೇರಿಸಿ ಹಾಲನ್ನು ಹಾಕಿ ಉಂಡೆಗಳನ್ನು ಮಾಡಿಕೊಂಡು ಆಹಾರವಾಗಿ ಸೇವಿಸುತ್ತಾ ಬಂದರೆ ಶರೀರದ ತೂಕ ಹೆಚ್ಚಾಗುತ್ತಾ ಬರುತ್ತದೆ.
ಹಾಲು, ಮೊಸರು, ಹೆಚ್ಚು ಹೆಚ್ಚು ತಿನ್ನುತ್ತಾ ಬಂದರೆ ಶರೀರದ ತೂಕ ಹೆಚ್ಚುವುದು. ಹಾಗು ನಾಲ್ಕು ಮೊಟ್ಟೆಗಳನ್ನು ತಿನ್ನಬೇಕು ದಿನಕ್ಕೆ ಮೂರು ಬಾರಿ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಮತ್ತು ಬಾಯಾರಿಕೆ ಆದಾಗೆಲ್ಲ ನೀರು ಕುಡಿಯಬೇಕು ಅಲ್ಲದೆ ವಾರಕ್ಕೆ ಎರಡು ಬಾರಿ ಮಾಂಸ ಸೇವನೆ ಮಾಡಬೇಕು.