ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ದಣಿವು, ಮತ್ತು ಮೈ ಕೈ ನೋವು ಕಡಿಮೆಯಾಗುತ್ತದೆ. ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಾಲಿಶ್ ಮಾಡಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಮೆದುಳು ಶಾಂತಿಯನ್ನು ಹೊಂದಿ ಸುಖ ನಿದ್ರೆ ಬರುತ್ತದೆ.
ಮಂಡಿನೋವು, ಸೊಂಟನೋವು, ಬೆನ್ನುನೋವು, ಕಟ್ಟು ನೋವು ಇರುವವರಿಗೆ ನೋವು ಏರುವ ಬಾಗಕ್ಕೆ ಬಿಸಿನೀರಿನ ಕಾವು ಆಗಾಗ ಕೊಡುವುದರಿಂದನೋವು ಕಡಿಮೆಯಾಗುತ್ತದೆ. ಬಿಸಿನೀರಿಗೆ ಉಪ್ಪನ್ನು ಹಾಕಿ ಕಲಸಿ ನಾಯಿಗೆ ಹಾಕಿ ಮುಕ್ಕಳಿಸುವುದರಿಂದ ಗಂಟಲು ನೋವು ಹಲ್ಲು ನೋವುಗಳು ನಿವಾರಣೆ ಆಗುತ್ತವೆ.
ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವ ಮೊದಲು ಒಂದೂ ಕಾಲು ಲೀಟರ್ ನೀರು ಕುಡಿಯಬೇಕು. ಅನಂತರ 45 ನಿಮಿಷಗಳವರೆಗೆ ಏನನ್ನು ತಿನ್ನಬಾರದು ಹಾಗು ಕುಡಿಯಬಾರದು.೪೫ ನಿಮಿಷಗಳ ನಂತರ ಹಲ್ಲುಜ್ಜಿ ಲಘು ಉಪಹಾರವನ್ನು ಮಾಡಬೇಕು. ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮಾಡಿ ಎರಡು ಗಂಟೆಗಳ ನಂತರ ನೀರನ್ನು ಕುಡಿಯಬೇಕು.
ರಾತ್ರಿ ಮಲಗುವ ಮುನ್ನ ಏನನ್ನು ತಿನ್ನಬಾರದು. ಈ ರೀತಿ ಜಲಪ್ರಯೋಗವನ್ನು ಅನುಸರಿಸುವುದರಿಂದ ಮಧುಮೇಹ, ತಲೆನೋವು, ರಕ್ತದೊತ್ತಡ, ಎನಿಮೀಯ, ಸಂದುನೋವು ಪಾರ್ಶ್ವವಾಯು, ಸ್ತೂಲ ಕಾಯ, ಹೃದಯ ಮಿಡಿತ, ಮೂರ್ಛೆ, ಕಫ , ಕೆಮ್ಮು, ದಮ್ಮು, ಟಿ ಬಿ , ಕರಳುಬೇನೆ,ಮೂತ್ರ ರೋಗ, ಗ್ಯಾಸ್ ಟ್ರಬಲ್ ಮೊದಲಾದ ಅನೇಕ ರೋಗಗಳು ನಿವಾರಣೆ ಆಗುತ್ತವೆ.
ಶುಂಠಿಯನ್ನು ಕುಡಿಸಿ ಶೋಧಿಸಿದ ನೀರನ್ನು ಕುಡಿಯುವುದರಿಂದ ನೆಗಡಿ, ಕೆಮ್ಮು, ದಮ್ಮು, ಟಿ ಬಿ, ಶ್ವಾಶಕೋಶದ ರೋಗಗಳು ತೇಗು ಆಮದೇಶ ಬಹುಮೂತ್ರ ದೋಷ, ಮಧುಮೇಹ, ಲೋ ಬ್ಲಡ್ ಪ್ರೆಶರ್, ದೇಹದ ಶೀತತ್ವ, ತಲೆನೋವು ದೋಷ ಮಧುಮೇಹ, ಲೋ ಬ್ಲಡ್ ಪ್ರೆಶರ್, ದೇಹದ ಶೀತತ್ವ, ತಲೆನೋವು ರೋಗಗಳು ನಿವಾರಣೆಯಾಗುತ್ತವೆ.
ಒಂದು ಲೀಟರ್ ನೀರಿನಲ್ಲಿ ಒಂದು ಚಮಚ ಓಮವನ್ನು ಹಾಕಿ ಕುದಿಸಿ ಅರ್ಧದಷ್ಟು ಆದ ಮೇಲೆ ಶೋಧಿಸಿ ಕುಡಿಯಿರಿ. ಅದರಿಂದ ಹೃದಯಶೂಲೆ, ವಾಯು ಪೀಡೆ ಹೊಟ್ಟೆಯ ಗುಡುಗುಡು, ಬಿಕ್ಕಳಿಕೆ, ಅರುಚಿ, ಮಂದಾಗ್ನಿ, ಜಂತು ಹುಳು, ಬೆನ್ನು ನೋವು ಅಜೀರ್ಣ ಬೇಧಿ ಕಾಲರಾ ನೆಗಡಿ ಬಹುಮೂತ್ರ, ಸಿಹಿಮೂತ್ರ, ರೋಗಗಳು ನಿವಾರಣೆಯಾಗುತ್ತವೆ.
ಒಂದು ಲೀಟರ್ ನೀರಿನಲ್ಲಿ ಒಂದೂವರೆ ಚಮಚ ಜೀರಿಗೆ ಹಾಕಿ ಕುದಿಸಿ 750 ಗ್ರಾಮ್ಗೆ ಇಳಿದಾದ ಅದನ್ನು ಇಳಿಸಿ ಆರಿಸಿ ಶೋಧಿಸಿ ಕುಡಿಯಬೇಕು. ಅದರಿಂದ ಗರ್ಭಕೋಶದ ಉಷ್ಣತೆ ದಿನ ಬಿಟ್ಟು ದಿನ ಬರುವ ಚಳಿ ಜ್ವರ, ಮಲೇರಿಯಾ ಜ್ವರ ಉಷ್ಣದಿಂದ ಆಗುವ ಕಣ್ಣು ಕೆಂಪು ಕೈ ಕಾಲು ಉರಿತ ವಾಯು ಅಥವಾ ಪಿತ್ತದ ವಾಂತಿ, ಉಷ್ಣದಿಂದ ಉಂಟಾಗುವ ಭೇದಿ ಮೊದಲಾದ ರೋಗಗಳು ನಿವಾರಣೆಯಾಗುತ್ತವೆ.
ಒಂದು ಅಗಲವಾದ ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಮುಖವನ್ನು ಎತ್ತು ಕಣ್ಣುಗಳನ್ನು ಮುಚ್ಚಿ ಮಚ್ಚಿ ತೆಗಿಯುತ್ತಿದ್ದರೆ ಕಣ್ಣಿನಲ್ಲಿ ಬಿದ್ದಿರುವ ಕಸಗಳು ಹೊರಗೆ ಬರುತ್ತವೆ.