ಮನೆಯಲ್ಲಿರುವ ಹೆಂಗಸರು ಮಹಾಲಕ್ಷ್ಮಿಯ ಸ್ವರೂಪ, ಪ್ರತಿದಿನ ಪ್ರತಿಕ್ಷಣ ಮನೆಯಲ್ಲಿಯೇ ಇದ್ದು ಮನೆಯ ಏಳಿಗೆಯನ್ನು ಬಯಸುವ ಮುಖ್ಯವಾದ ಪಾತ್ರವನ್ನು ಮನೆಯ ಹೆಂಗಸು ವಹಿಸುತ್ತಾಳೆ, ಆದರೆ ಇಂದು ನಾವು ತಿಳಿಸುವ ಗುಣಗಳನ್ನು ಹೊಂದಿರುವ ಮಹಿಳೆಯರು ಮನೆಯಲ್ಲಿ ಇದ್ದರೆ ಮನೆಯ ಲಕ್ಷ್ಮಿಯೂ ಒಂದು ಕ್ಷಣವೂ ಮನೆಯಲ್ಲಿ ಇರುವುದಿಲ್ಲ ಎಂದು ಮನೆಯ ಹಿರಿಯರು ಹೇಳುತ್ತಾರೆ, ಹಾಗಾದರೆ ಆ ಗುಣಗಳು ಯಾವುದು ಮುಂದೆ ಓದಿ.
ಬಹುಮುಖ್ಯವಾಗಿ ಮನೆಯ ಹೆಣ್ಣುಮಕ್ಕಳು ಮನೆಯ ಮುಖ್ಯದ್ವಾರವನ್ನು ಅಥವಾ ಯಾವುದೇ ಬಾಗಿಲನ್ನು ತಮ್ಮ ಕಾಲಿನಿಂದ ತೆರೆಯಬಾರದು, ಅಥವಾ ಕಾಲಿನಿಂದ ಹೊದಿಯಬಾರದು, ಕಾರಣ ಮನೆಯ ಬಾಗಿಲು ದೇವರ ಸಂಕೇತ, ದೇವರನ್ನು ಕಾಲಿನಿಂದ ತುಳಿದು ಅವಮಾನಿಸಿದರೆ ದಾರಿದ್ರ್ಯ ಖಂಡಿತ ಎಂಬುದು ಹಿರಿಯರ ನಂಬಿಕೆ, ಅಷ್ಟೇ ಅಲ್ಲದೆ ಮನೆಯನ್ನು ಸ್ವಚ್ಛ ಮಾಡಲು ಬಳಸುವ ಪೊರಕೆಯನ್ನು ಕಾಲಿನಿಂದ ತಳ್ಳಬಾರದು ಅಥವಾ ತುಳಿಯಬಾರದು, ಈ ರೀತಿ ನಿಮಗೆ ಗೊತ್ತಿಲ್ಲದೆ ತಪ್ಪುಗಳನ್ನು ಮಾಡುತ್ತಿದ್ದರೆ ಈ ಕ್ಷಣವೇ ನಿಲ್ಲಿಸಿಬಿಡಿ, ಇದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾದರೂ ಶುರುವಾಗುತ್ತದೆ.
ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡಬಾರದು, ಊಟ ಮಾಡುವ ಮೂರು ಸಮಯಗಳನ್ನು ಬಿಟ್ಟು ಕೆಲವು ಬಾರಿ ಹೆಂಗಸರು ಮನೆಯಲ್ಲಿ ಸಂಜೆ ಸಮಯದಲ್ಲಿ ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಊಟ ಮಾಡುತ್ತಾರೆ, ಈ ರೀತಿ ಮಾಡಬಾರದು, ಹಾಗೂ ಎಂಜಲು ಕೈಯಲ್ಲಿ ಮನೆಯ ಇತರ ಮಾತ್ರೆಗಳನ್ನು ಮುಟ್ಟುತ್ತಾರೆ ಈ ರೀತಿಯ ಯಾವುದೇ ಕಾರಣಕ್ಕೂ ಮಾಡಬಾರದು, ಈ ರೀತಿಯ ಅಭ್ಯಾಸವನ್ನು ಮೊದಲು ಬಿಟ್ಟುಬಿಡಿ ಇದು ದರಿದ್ರದ ಸಂಖ್ಯೆತ, ಹಾಗೂ ರಾತ್ರಿ ಮಲಗುವ ಮುಂಚೆ ಪ್ರತಿಯೊಂದು ಎಂಜಿಲು ಪಾತ್ರೆಯನ್ನು ತೊಳೆದು ಇಡಬೇಕು, ಹಾಗೆ ಮಲಗಿದರೆ ಇದು ಲಕ್ಷ್ಮೀದೇವಿಗೆ ಇಷ್ಟವಿಲ್ಲದ ಕೆಲಸ ಎಂಬುದು ಹಿರಿಯರ ನಂಬಿಕೆ.
ಮನೆಯಲ್ಲಿನ ಹೆಣ್ಣುಮಕ್ಕಳು ಯಾವಾಗಲೂ ಜಗಳವಾಡುವುದು, ಇಲ್ಲದ ವಿಚಾರಗಳಿಗೆ ಕೊರಗುವುದು, ಅಲಂಕಾರವಿಲ್ಲದ ಓಡಾಡುವುದು, ಈ ಅಭ್ಯಾಸಗಳನ್ನು ಮೊದಲು ಬಿಡಿ ಕಾರಣ ಈ ರೀತಿಯ ಅಭ್ಯಾಸ ಗಳಿದ್ದರೆ ಮನೆಯಲ್ಲಿನ ಪುರುಷರಿಗೆ ಶುಭವಲ್ಲ, ಅವರ ಆಯಸ್ಸು ಇದರಿಂದ ಕಡಿಮೆಯಾಗುತ್ತದೆ, ಲಕ್ಷ್ಮಿ ಸಂಕೇತವಾದ ಮನೆಯ ಹೆಣ್ಣು ಮಕ್ಕಳು ಯಾವಾಗಲೂ ನಗುತ್ತಾ ಇರಬೇಕು, ತಾನು ಸ್ವಚ್ಛವಾಗಿದ್ದು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕೃಪೆ ಕರುನಾಡ ಸೊಗಡು.