ಗ್ರೀನ್ ಟೀ ಸೇವನೆಯಿಂದ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೇದು ಮತ್ತು ಆ ಗ್ರೀನ್ ಟೀ ಯಿಂದ ನಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಬಹುದು ಹೇಗೆ ಅಂತೀರಾ ಇಲ್ಲಿ ನೋಡಿ. ನೀವು ದಿನ ಗ್ರೀನ್ ಟೀ ಸೇವನೆ ಮಾಡಿದ್ರೆ ನಿಮ್ಮ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಮತ್ತು ಶರೀರದಲ್ಲಿ ಕೆಲವೊಂದು ಬದಲಾವಣೆಯಾಗಿ ನಿಮ್ಮ ಚರ್ಮಕ್ಕೆ ಸಹ ಲಾಭವಾಗಲಿದೆ.

ಮೊಡವೆ ಗುಳ್ಳೆಗಳಿಗೆ; ಹೌದು ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಈ ಗ್ರೀನ್ ಟೀ ಸಹಾಯ ಮಾಡುತ್ತದೆ. ನಿಮ್ಮ ಮುಖದ ಭಾಗಕ್ಕೆ ಅಂದ್ರೆ ಮೊಡವೆ ಆಗಿರುವ ಜಾಗಕ್ಕೆ ಈ ಗ್ರೀನ್ ಟೀ ಯನ್ನು ಲೇಪಿಸಿಕೊಳ್ಳಿ ಇದರಿಂದ ನಿಮ್ಮ ಮೊಡವೆ ಜೊತೆಗೆ ಅದರ ಕಲೆಗಳು ಸಹ ಮಾಯವಾಗಲಿವೆ.

ಕ್ಯಾನ್ಸರ್ ತಡೆಯುವುದು : ಪ್ರತಿ ದಿನ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಕ್ಯಾನ್ಸರ್ ಗಡ್ಡೆಗಳನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು ಕ್ಯಾನ್ಸರ್ ಕಣಗಳನ್ನು ನಿರ್ನಾಮಗೊಳಿಸುವುದು.

ಕೂದಲ ಸೌಂದರ್ಯಕ್ಕಾಗಿ: ಹೌದು, ನಿಮ್ಮ ಕೇಶಕ್ಕೆ ಗ್ರೀನ್‌ ಟೀ ತುಂಬಾ ಒಳ್ಳೆಯದು. ಅದು ನಿಮ್ಮ ಹೇರ್‌ ರಿನ್ಸ್‌ ಮಾಡಿ ಹೊಳಪು ನೀಡುತ್ತದೆ. ಕುದಿಯುವ ನೀರಿನಲ್ಲಿ ಕೆಲವು ಟೀ ಬ್ಯಾಗ್‌ಗಳನ್ನು ಹಾಕಿ. ಆ ನೀರಿನಿಂದ ಕೂದಲನ್ನು 10 ನಿಮಿಷ ಮಸಾಜ್‌ ಮಾಡಿ. ಚೆನ್ನಾಗಿ ರಿನ್ಸ್‌ ಆದ ಮೇಲೆ ಎಂದಿನಂತೆ ಶ್ಯಾಂಪೂವಿನಿಂದ ವಾಷ್‌ ಮಾಡಿ.

ಹೃದಯಘಾತ ಮತ್ತು ಪಾಶ್ವವಾಯು ಕಾಯಿಲೆ ನಿಯಂತ್ರಕ : ದೇಹದಲ್ಲಿನ ರಕ್ತ ಸಂಚಲನವು ಸಮರ್ಪಕವಾಗಿ ಸಂಚಲನವಾಗದಿದ್ದರೆ ಪಾರ್ಶ್ವವಾಯು ಮತ್ತು ಹೃದಯಾಘಾತ ವುಂಟಾಗುವುದು. ಇದನ್ನು ತಡೆಯಲು ಗ್ರೀನ್ ಟೀ ರಾಮಬಾಣವಾಗಿದ್ದು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಸಿ ರಕ್ತನಾಳಗಳನ್ನು ಹೆಪ್ಪುಗಟ್ಟುವಿಕೆಯನ್ನು ತಡೆಯುವುದು ಇದರಿಂದ ಹೃದಯಾಘಾತ ಸಂಭವನ್ನು ಕುಂಠಿತಗೊಳಿಸುವುದು.

ಕಣ್ಣಿನ ಸೌಂದರ್ಯಕ್ಕಾಗಿ: ಬಳಸಿದ ಟೀ ಬ್ಯಾಗ್‌ಗಳು ತಣ್ಣಗಾದ ಮೇಲೆ ನಿಮ್ಮ ಕಣ್ಣಿಗಳ ರಿಲೀಫ್‌ಗಾಗಿ ಕಣ್ಣಿನ ರೆಪ್ಪೆಗಳ ಮೇಲಿಡಿ. ಗ್ರೀನ್‌ಟೀಯಲ್ಲಿರುವ ಟ್ಯಾನಿನ್‌, ನಿಮ್ಮ ಚರ್ಮವನ್ನು ಅದ್ಭುತವಾಗಿ ಶ್ರಿಂಕ್‌ ಮಾಡುತ್ತದೆ. ನಿಮ್ಮ ಕಣ್ಣಿನ ಸುತ್ತ ಇರುವ ಸ್ವೆಲ್ಲಿಂಗನ್ನು ಕೂಲ್‌ ಟೀ ಬ್ಯಾಗ್‌ ರೆಡ್ಯೂಸ್‌ ಮಾಡಿ ಸ್ಕಿನ್‌ ಟೈಟ್‌ ಆಗುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *