ನಮ್ಮ ಹಿರಿಯರ ಕಾಲದಿಂದಲೂ ನಾವು ಮಾಡಿಕೊಂಡಿರೋ ಅಭ್ಯಾಸ ವೆಂದರು ಅದು ಬೆಳಗ್ಗೆ ಎದ್ದ ತಕ್ಷಣ ನಮ್ಮ ಕೈ ಅಥವಾ ದೇವರ ಫೋಟೋವನ್ನು ನೋಡುವುದು, ಕಾರಣ ನಮ್ಮ ಇಡೀ ದಿನ ಯಾವುದೇ ತೊಂದರೆಗಳಿಲ್ಲದೆ, ಮಾಡಿದ ಕಾರ್ಯ ಫಲಿಸಿ, ಕೀರ್ತಿ ನಮ್ಮ ಪಾಲಾಗಲಿ ಅಂತ ಅಲ್ಲವೇ ಆದರೆ ನಾವು ತಿಳಿಸುವ ಇವುಗಳನ್ನ ನೀವು ಬೆಳಗ್ಗೆ ಎದ್ದ ತಕ್ಷಣ ನೋಡಿದ್ದಲ್ಲಿ ನಿಮಗೆ ಅನೇಕ ಕೆಟ್ಟ ಪರಿಣಾಮಗಳನ್ನ ನೀವು ಇಡೀ ದಿನ ಹೆದುರಿಸ ಬೇಕಾಗುತ್ತದೆ.
ನಿಮ್ಮನು ನೀವೇ ನೋಡುವುದು : ಬಹಳ ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಎಚ್ಚರ ವಾಗಿದ್ದೆ ತಡ ಒಮ್ಮೆ ಯಾದರು ಕನ್ನಡಿಯನ್ನು ನೋಡಿ ನಂತರವೇ ಮುಂದಿನ ಕೆಲಸದ ಬಗ್ಗೆ ಯೋಚನೆ ಮಾಡುವುದು, ಈ ಅಭ್ಯಾಸ ನಿಮಗೇನಾದರೂ ಇದ್ದರೆ ಮೊದಲು ಅದನ್ನು ಇಂದೇ ಬಿಟ್ಟು ಬಿಡಿ, ಹೀಗೆ ಮಾಡುವುದರಿಂದ ನಕಾರಾತ್ಮಕ ಯೋಚನೆಗಳು ಶುರುವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಬಿಂಬವನ್ನು ನೋಡುವುದು : ನಿದ್ರೆ ಮುಗಿಸಿ ಎದ್ದಾಗ ನಿಮ್ಮ ದಿನ ಪ್ರಾರಂಭವಾದಂತೆ ಅಲ್ಲವೇ ಹಾಗಾಗಿ ದಿನದ ಪ್ರಾರಂಭವನ್ನು ಶುಭವಾಗಿ ನಿಮ್ಮ ಹಸ್ತವನ್ನ ನೋಡುವುದರ ಮುಕಾಂತರ ಶುರು ಮಾಡಿ ಯಾವ ಕಾರಣಕ್ಕೂ ಎದ್ದ ಕೂಡಲೇ ನಿಮ್ಮ ಅಥವಾ ಯಾವುದೇ ಮನುಷ್ಯನ ನೆರಳನ್ನು ನೋಡಬಾರದು ಹೀಗೆ ಮಾಡಿದರೆ ನಿಮ್ಮ ಮನಸ್ಥಿತಿ ಕೆಡುತ್ತದೆ ಎಂದು ನಂಬಲಾಗಿದೆ.
ಪ್ರಾಣಿಗಳ ಫೋಟೋ : ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನ ನೋಡುವುದರಿಂದ ಮನಸ್ಸಿಗೆ ಕೆಟ್ಟ ಯೋಚನೆಗಳು ಬರಲು ಶುರು ಮಾಡುತ್ತದೆ, ಇದರಿಂದ ಇನ್ನೊಬ್ಬರ ಕೆಲವರ ವರ್ತನೆಯು ಸಹಿಸಲಾಗದೆ ಜಗಳವಾಡುವ ಸಂಭವ ಹೆಚ್ಚು.
ಮೊಬೈಲ್ ಫೋನ್ : ಇದು ಯಾವುದು ಧಾರ್ಮಿಕ ನಂಬಿಕೆಗೆ ಸಂಭಂದ ಪಟ್ಟಿದ್ದಲ್ಲಾ ಇದು ವೈಜ್ಞಾನಿಕ ಚಿಂತನೆಗೆ ಸಂಭಂದ ಪಟ್ಟಿದ್ದು, ನಿಮ್ಮ ದೈನಂದಿನ ಕೆಲಸದ ಒತ್ತಡವನ್ನ ನೆನಪು ಮಾಡುವು ನಿಮ್ಮ ಕೆಲಸದ ಯಾವುದೇ ವಸ್ತುವನ್ನಾಗಲಿ ಲ್ಯಾಪ್ ಟಪ್, ಮೊಬೈಲ್ ಹೀಗೆ ಇವುಗಳನ್ನು ಬೆಳಗ್ಗೆ ಎದ್ದು ನೋಡಿದ ತಕ್ಷಣವೇ ನಿಮ್ಮ ಮೂಡ್ ಆಫ್ ಆಗುವುದು ಖಂಡಿತ.