WhatsApp Group Join Now

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆ ಹೆಚ್ಚಾಗಿದೆ, ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ ಆದರೆ ಇದನ್ನು ನಿರಂತರವಾಗಿ ಬಳಸಿದರೆ ಆಪಾಯ ಎಂಬುದು ವೈದ್ಯರು ನೀಡುವ ಸಲಹೆ.

ಇದಿಷ್ಟೇ ಅಲ್ಲ ಒಬ್ಬರು ಉಪಯೋಗಿಸಿದ ಇಯರ್ ಫೋನನ್ನು ಮತ್ತೊಬ್ಬರು ಬಳಸಿದರೆ ನಿಮ್ಮಲ್ಲಿ ಬ್ಯಾಕ್ಟೀರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ ಎನ್ನುತ್ತಾರೆ ವೈದ್ಯರು ಹಾಗಾಗಿ ಒಬ್ಬರು ಬಳಸುವ ಇಯರ್ ಫೋನನ್ನು ಮತ್ತೊಬ್ಬರು ಬಳಸುವುದು ಸೂಕ್ತವಲ್ಲ.

ಇಯರ್ ಫೋನ್ ಅಥವಾ ಹೆಡ್ ಫೋನುಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳನ್ನು ಸೂಸುವ ಕಾರಣ, ಮೆದುಳಿನ ಮೇಲೂ ಇದು ಪ್ರಭಾವ ಬೀರುತ್ತದೆ ಎನ್ನಲಾಗಿದೆ ಮನುಷ್ಯನಿಗೆ ಕಣ್ಣು, ಮೂಗಿನಷ್ಟೇ ಕಿವಿಯೂ ಮುಖ್ಯ ಕಿವಿ ಮಂದವಾಗಿ ಕೇಳಿಸುವುದು, ಕಿವಿ ನೋವು ಮೊದಲಾದವು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ.

WhatsApp Group Join Now

Leave a Reply

Your email address will not be published. Required fields are marked *