ಮನೆಯ ನಿರ್ಮಾಣಕ್ಕೆ ತಕ್ಕಂತೆ ಅದರಲ್ಲಿ ವಾಸಿಸುವವರ ಭವಿಷ್ಯ ಆಧಾರಪಟ್ಟಿರುತ್ತದೆಂದು ಹೇಳುತ್ತದೆ ವಾಸ್ತುಶಾಸ್ತ್ರ. ಮನೆಯಲ್ಲಿನ ಆಯಾ ಕೋಣೆಗಳ ರೀತಿಯಲ್ಲೇ ಪೂಜಾಕೋಣೆ ವಿಷಯದಲ್ಲೂ ಕೆಲವು ನಿರ್ದಿಷ್ಟ ಸೂಚನೆಗಳಿವೆ. ಇದರ ಪ್ರಕಾರ ಪೂಜಾಮಂದಿರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಬೇಕು. ಪೂರ್ವ, ಉತ್ತರ ದಿಕ್ಕುಗಳ ನಡುವೆ ಇರುವ ಪ್ರದೇಶವೇ ಈಶಾನ್ಯ. ಪೂಜಾಕೋಣೆ ನಿರ್ಮಾಣಕ್ಕೆ ಇದೇ ಅತ್ಯತ್ತಮವಾದ ಜಾಗ.
ಈ ಕೋಣೆಯಲ್ಲಿ ಬೆಳಗ್ಗೆ ಸೂರ್ಯಕಿರಣಗಳು ಪಸರಿಸುವ ಕಾರಣ ಅಲ್ಲಿ ಮಾಡುವ ಧ್ಯಾನ, ಪೂಜೆಗಳು ಶಾಂತವಾಗಿ ಸಾಗುತ್ತವೆ. ಈ ಕೋಣೆಯಲ್ಲಿ ಪೂಜೆ ಮಾಡಿಕೊಳ್ಳುವವರು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಕುಳಿತುಕೊಳ್ಳುವುದು ಒಳಿತು. ಅಂದರೆ ದೇವರನ್ನು ಪಶ್ಚಿಮದ ಕಡೆ ಆಗಲಿ, ದಕ್ಷಿಣದ ಕಡೆ ಆಗಲಿ ಪ್ರತಿಷ್ಠಾಪಿಸಬೇಕು. ಮನೆಯ ವಿಸ್ತೀರ್ಣಕ್ಕೆ ತಕ್ಕಂತೆ ಅಥವಾ ಅಲ್ಮೆರಾದಂತಹವು ಇಟ್ಟುಕೊಳ್ಳಬಹುದು. ಆದರೆ ಕನಿಷ್ಠ ಒಂದು ಪ್ರತಿಮೆ ಅಥವಾ ಫೋಟೋ ಆದರೂ ಈಶಾನ್ಯ ದಿಕ್ಕಿಗೆ ಕಡೆಗೆ ಇಡಬೇಕು.
ಇನ್ನು ಪೂಜಾಕೋಣೆಗೆ ಕಡ್ಡಾಯವಾಗಿ ಹೊಸಿಲು ಇರಬೇಕು. ಗಂಟೆಗಳುಳ್ಳ ಬಾಗಿಲನ್ನು ವ್ಯವಸ್ಥೆ ಮಾಡಿದರೆ ಒಳಿತು. ನೈರುತ್ಯ, ಆಗ್ನೇಯ ಮೂಲೆಗಳಲ್ಲಿ ಪೂಜಾಕೋಣೆಯನ್ನು ಯಾವುದೆ ಕಾರಣಕ್ಕೂ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಅದೇ ರೀತಿ ಬೆಡ್ ರೂಮ್‌ನಲ್ಲೂ ಪೂಜಾ ಕೋಣೆಯನ್ನು ಇಟ್ಟುಕೊಳ್ಳಬಾರದು.