ನಾವು ಈರುಳ್ಳಿಯನ್ನ ಬಳಸಿ ಅದರ ಸಿಪ್ಪೆಯನ್ನ ತೆಗೆದು ಕಸಕ್ಕೆ ಹಾಕುತ್ತೆವೆ. ಆದರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಆರೋಗ್ಯಕರ ಗುಣಗಳಿವೆ ಎಂಬುದು ನಿಮಗೆ ತಿಳಿದಿಲ್ಲ.ನೀವು ಈರುಳ್ಳಿ ಸಿಪ್ಪೆ ಬಿಸಾಡುತ್ತಿರ ಅನ್ಸುತ್ತೆ ಆದ್ರೆ ಇನ್ಮೇಲೆ ಬಿಸಾಡೋಕೆ ಚಾನ್ಸೇ ಇಲ್ಲ ಅನ್ಸುತ್ತೆ ಇಲ್ಲಿ ನೋಡಿದ್ರೆ.
ಈರುಳ್ಳಿ ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ. ಟೀ ಅಥವಾ ಸೂಪ್ ಮಾಡುವ ವೇಳೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಬೇಕು. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮ ಹಾಗೂ ದೇಹದ ಒಳ ಭಾಗವನ್ನ ಸ್ವಚ್ಛಗೊಳಿಸುತ್ತದೆ. ರೋಗ-ಪ್ರತಿರೋದಕವನ್ನ ಹೆಚ್ಚಿಸುತ್ತದೆ.
ಈರುಳ್ಳಿ ಸಿಪ್ಪೆ ಗಂಟಲು ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ನೀರಿಗೆ ಈರುಳ್ಳಿ ಸಿಪ್ಪೆಯನ್ನ ಹಾಕಿ ಕುಡಿಸಿ ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಈರುಳ್ಳಿ ಸಿಪ್ಪೆ ಮುಖದ ಮೇಲಿನ ಕಲೆಗಳನ್ನ ಹೋಗಲಾಡಿಸುತ್ತದೆ. ಸ್ವಲ್ಪ ರಸವಿರುವ ಈರುಳ್ಳಿ ಸಿಪ್ಪೆಯನ್ನು ತೆಗೆದು ಅದಕ್ಕೆ ಸ್ವಲ್ಪ ಅರಿಶಿಣವನ್ನ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಒಣಗಿದ ಕೈನಲ್ಲಿ ನಿದಾನವಾಗಿ ಮಸಾಜ್ ಮಾಡಿ. ಹೀಗೆ ವಾರಕ್ಕೊಮ್ಮೆ ಮಾಡಿದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.