ಇದರ ಸೇವನೆಯಿಂದ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಾರಣ ಇದರಲ್ಲಿ ನಾರಿನಂಶ ಹೆಚ್ಚಿದ್ದು , ಕ್ಯಾಲೋರಿ ಕಡಿಮೆ ಇದೆ. ಒಂದು ಕೆಂಪು ಬಾಳೆಹಣ್ಣಿನಲ್ಲಿ 90 ಕ್ಯಾಲೊರಿ ಇರುತ್ತದೆ.
ಪೌಷ್ಟಿಕಾಂಶ ಪ್ರಮಾಣ ಹೆಚ್ಚಿರುತ್ತದೆ. ಆದರೆ ಇದನ್ನು ಹಣ್ಣಾದ ಮೇಲೆಯೇ ತಿನ್ನಬೇಕು. ಇದರ ಸೇವನೆಯಿಂದ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಾರಣ ಇದರಲ್ಲಿ ನಾರಿನಂಶ ಹೆಚ್ಚಿದ್ದು , ಕ್ಯಾಲೋರಿ ಕಡಿಮೆ ಇದೆ. ಒಂದು ಕೆಂಪು ಬಾಳೆಹಣ್ಣಿನಲ್ಲಿ 90 ಕ್ಯಾಲೊರಿ ಇರುತ್ತದೆ.
ಈ ನಾರಿನಲ್ಲಿ ಕಾರ್ಬೊಹೈಡ್ರೇಟ್ ಹೇರಳವಾಗಿರುತ್ತದೆ. ಆದ್ದರಿಂದ ಅಜೀರ್ಣ, ವಾಯುಪ್ರಕೋಪ ಮುಂತಾದ ತೊಂದರೆ ಇರುವವರಿಗೆ ನಾರಿನಂಶದಿಂದ ಸಮೃದ್ಧವಾಗಿರುವ ಕೆಂಪು ಬಾಳೆಹಣ್ಣು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ನಾವು ತಿನ್ನುವ ಆಹಾರದಿಂದ ನಮ್ಮ ದೇಹಕ್ಕೆ ದಿನಕ್ಕೆ ಶೇಕಡ 16 ರಷ್ಟು ನಾರಿನಂಶ ಬೇಕು. ಆದರೆ, ಒಂದು ಕೆಂಪು ಬಾಳೆಹಣ್ಣೊಂದರಲ್ಲೇ ನಮಗೆ 4 ಗ್ರಾಂ ನಾರಿನಂಶ ಸಿಗುತ್ತದೆ.
ಪೊಟಾಷಿಯಂ ಜಾಸ್ತಿ ಇದ್ದು, ಇದರ ನಿಯಮಿತ ಸೇವನೆ ಕಿಡ್ನಿ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕಿಡ್ನಿ ಕಲ್ಲಾಗದಂತೆ ಇದು ತಡೆಯುತ್ತದೆ. ಕ್ಯಾನ್ಸರ್ ಬರುವುದನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ತೂಕ ನಷ್ಟ ಮಾಡಿಕೊಳ್ಳಲು ಬಯಸುವವರಿಗೆ ಪರಿಣಾಮಕಾರಿ. ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಿಸಲು ಮತ್ತು ರಕ್ತ ಶುದ್ಧಿಗೆ ಸಹಾಯಕಾರಿ ಕ್ಯಾಲ್ಸಿಯಂನ ಆಗರವಾಗಿರುವ ಇದು ಮೂಳೆಗಳನ್ನು ಸದೃಢಗೊಳಿಸುತ್ತದೆ. ಮಕ್ಕಳು ಹಾಗು ವಯಸ್ಕರು ಇದನ್ನು ತಿಂದರೆ ಮೂಳೆಗಳು ಗಟ್ಟಿಯಾಗುತ್ತವೆ.
ಇದು ವಿಟಮಿನ್ ಸಿ, ಬಿ-6, ಪೊಟಾಷಿಯಂ ಮತ್ತು ಮೆಗ್ನೀಷಿಯಂ ಅಂಶಗಳನ್ನು ಹೊಂದಿದ್ದು, ನಿಕೋಟಿನ್‌ನ ದಿಢೀರ್ ಕೊರತೆಯಿಂದ ದೇಹವನ್ನು ಪುನಶ್ಚೇತನಗೊಳಿಸಲು ನೆರವಾಗುತ್ತದೆ. ಜೀರ್ಣಕ್ರಿಯೆಗೆ ಸಹಾಯಕವಾಗಿರುವುದರಿಂದ ಮೂಲವ್ಯಾಧಿಯನ್ನು ತಡೆಯುವ ಶಕ್ತಿ ಹೊಂದಿದೆ.