ಈ ಕಿವಿ ಹಣ್ಣಿನಲ್ಲಿ ಅಮೇರಿಕ ಕೃಷಿ ಇಲಾಖೆಯ ಪ್ರಕಾರ 100 ಗ್ರಾಂ ಕೀವಿ ಹಣ್ಣಿನಲ್ಲಿ 61 ಗ್ರಾಂ ಕ್ಯಾಲರಿ, 14.66 ಗ್ರಾಂ ಕಾರ್ಬೋಹೈಡ್ರೇಟ್. 1.14 ಗ್ರಾಂ ಪ್ರೊಟೀನ್, 0.52 ಗ್ರಾಂ ಫ್ಯಾಟ್ ಮತ್ತು 3 ಗ್ರಾಂ ಫ್ಯಾಟ್ ಅಂಶವನ್ನು ಹೊಂದಿದೆ ಹಾಗಾಗಿ ಈ ಹಣ್ಣನ್ನು ದಿನಕ್ಕೊಂದು ತಿಂದರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ವಿಟಮಿನ್ ಸಿ ಸಿಗುತ್ತದೆ: ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಸಿದರೆ ಕೀವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದೆ. ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್. ಹಾಗೆ ಇದು ಫ್ರೀ ರಾಡಿಕಲ್ಸ್ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ: ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ. ಇದರಲ್ಲಿರುವ ಡಯೆಟ್ರಿ ಫೈಬರ್ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ನಿದ್ದೆ ಸಮಸ್ಯೆಗೆ ಪರಿಹಾರ ನೀಡುತ್ತದೆ: ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಸೆರೊಟೊನಿನ್ ಅಂಶ ನಿದ್ದೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.
ತ್ವಚೆಯ ಕಾಂತಿಗೂ ಉತ್ತಮ: ಕೀವಿ ಹಣ್ಣು, ಜಂಕ್ಫುಡ್ಸ್ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣವಿರುವುದರಿಂದ ತ್ವಚೆಯ ಏಜಿಂಗ್ನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ.