ಕೆಲವರಿಗೆ ಮೊಣಕೈ ಹಾಗು ಮೊಣಕಾಲುಗಳ ಮೇಲೆ ಕಪ್ಪು ಕಲೆಗಳು ಹೆಚ್ಚಗಲಿ ಕಂಡುಬರುತ್ತವೆ ಅಂತಹ ಕಲೆಗಳನ್ನು ಹೋಗಲಾಡಿಸಲು ಇಲ್ಲಿವೆ ನೋಡಿ ಸರಳ ವಿಧಾನಗಳು..!
ಸಾಸಿವೆ ಎಣ್ಣೆಯಲ್ಲಿ ಇರುವ ಲಿನೋಲಿಕ್, ಎರುಸಿಸ್ ಮತ್ತು ಒಲೈಕ್ ಆಮ್ಲಗಳು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಯನ್ನು ತಿಳಿಯಾಗಿಸುವವು. ಆದ್ದರಿಂದ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ ಮಾಡಿ. ಬೆಳಗ್ಗೆ ಎದ್ದ ನಂತರ ಸೋಪಿನಿಂದ ತೊಳೆಯಿರಿ.
ಅಡುಗೆ ಸೋಡಾವು ಮೊಣಕಾಲು ಹಾಗೂ ಮೊಣಕೈಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮಕ್ಕೆ ತೇವಾಂಶ ನೀಡುತ್ತದೆ. ಅದಕ್ಕಾಗಿ ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲು ಹಾಕಿ ದಪ್ಪ ಪೇಸ್ಟ್ ಮಾಡಿ, ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ. ಇದು ಒಣಗಿದ ಬಳಿಕ ಸ್ಕ್ರಬ ಮಾಡಿ. ವಾರದಲ್ಲಿ ಎರಡು ಸಲ ಇದನ್ನು ಮಾಡಿ.
ಈರುಳ್ಳಿ ಹಾಗೂ ನಿಂಬೆ ರಸದ ಮಾಸ್ಕ್‌ನಲ್ಲಿರುವ ಸಲ್ಫರ್ ಮತ್ತು ಸಿಟ್ರಿಕ್ ಆಮ್ಲವು ಸತ್ತ ಚರ್ಮದ ಕೋಶಗಳ ಶೇಖರಣೆಯನ್ನು ತೆಗೆದು ಚರ್ಮದ ಬಣ್ಣವನ್ನು ತಿಳಿಯಾಗಿಸುವುದು. ಒಂದು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿ ತೆಳುವಾದ ಪೇಸ್ಟ್ ಮಾಡಿ. ಈ ಮಿಶ್ರಣಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಗ್ಲಿಸರಿನ್ ಹಾಕಿ. ಇದನ್ನು ಮೊಣಕೈಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಕಾಲ ಕುಳಿತುಕೊಳ್ಳಿ. ಬಳಿಕ ಸ್ಕ್ರಬ ಮಾಡಿ ತೊಳೆಯಿರಿ.
ಕಿತ್ತಳೆಯ ಸಿಪ್ಪೆಯಲ್ಲಿರುವ ವಿಟಿಮಿನ್ ಸಿ ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸಣ್ಣ ಬೌಲ್‌ಗೆ ಹಾಕಿ ಅದಕ್ಕೆ ರೋಸ್ ವಾಟರ್ ಬೆರೆಸಿ. ಈ ಮಿಶ್ರಣವನ್ನು ಮೊಣಕೈಗೆ ಹಚ್ಚಿ ಒಣಗಲು ಬಿಡಿ. ಬಳಿಕ ಸ್ಕ್ರಬ ಮಾಡಿ ತೊಳೆಯಿರಿ.