WhatsApp Group Join Now

ಮನುಷ್ಯನಿಗೆ ಸಾದಿಸುವ ಛಲಬೇಕು ಆಗಲೇ ಮನುಷ್ಯ ಏನಾದರು ಸಾದಿಸಲು ಸಾಧ್ಯ. ಹಾಗೆಯೆ ಸಾಧಿಸಿರುವ ಒಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ನಾವು ಮೆಚ್ಚಲೇ ಬೇಕು. ಈ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದಿರುವ ವ್ಯಕ್ತಿ. ಇವರ ಸಾಧನೆ ಹಲವು ಮಂದಿಗೆ ಸ್ಫೂರ್ತಿಯಾಗಬೇಕು. ಯಾಕೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಾರಾಯಣ್ ಮಜುಂದಾರ್ ಎನ್ನುವ ಈ ವ್ಯಕ್ತಿ ಸುಮಾರು ವರ್ಷಗಳ ಹಿಂದೆ ಒಂದು ಚಿಕ್ಕ ಕಾಯಕವನ್ನು ಪ್ರಾಂಭಿಸಿದರು. ಒಂದು ಎರಡು ಹಸುಗಳನ್ನು ತೆಗೆದುಕೊಂಡು ಅವುಗಳಿಂದ ಹಾಲು ಸಂಗ್ರಹಿಸಿ ಪ್ರತಿದಿನ ಅವರ ಗ್ರಾಮದಲ್ಲಿ ಮತ್ತು ಪಕ್ಕದ ಗ್ರಾಮಗಳಿಗೆ ಸೈಕಲ್ ನಲ್ಲಿ ಹಾಲು ಹಾಕುವ ಕಾಯಕವನ್ನು ಶುರುಮಾಡಿದರು.

ಹೀಗೆ ತನ್ನ ಕಾಯಕವನ್ನು ಮುಂದವರಿಸಿದ ಇವರು ಒಂದು ದಿನ ಯೋಚನೆ ಮಾಡಿದರು. ನಾನು ಜೀವನದಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯಾಗಬೇಕು. ಹತ್ತು ಮಂದಿಗೆ ನನ್ನ ಕೈಲಾದ ಸಹಾಯವನ್ನು ಮಾಡಬೇಕು ಅನ್ನೋದನ್ನ ಯೋಚನೆ ಮಾಡುತಿದ್ದರು. ಹೀಗೆ ಇವರ ಯೋಚನೆ ಒಂದು ದಿನ ಒಂದು ಕೆಲಸವನ್ನು ಮಾಡಲು ಪ್ರೇರೇಪಿಸಿತು. ತನ್ನ ಗ್ರಾಮದಲ್ಲಿ ಇವರಂತೆ ಹಾಲು ಸಂಗ್ರಹಾಯಿಸುವಂತ ವ್ಯಕ್ತಿಯ ಬಳಿ ಹೋಗಿ ಅವರ ಹಾಲನ್ನು ಇವರೇ ತೆಗೆದುಕೊಂಡು. ಮತ್ತು ಇವರ ಹಾಲಿನೊಂದಿ ಸೇರಿಸಿಕೊಂಡು ಒಂದು ಚಿಕ್ಕ ಹಾಲಿನ ಡೈರಿಯನ್ನು ಪ್ರಾಂಭಿಸಿದರು.

ಆದರೆ ಈ ದಿನಗಳು ಅವರಿಗೆ ಸುಲಭವಾಗಿರಲಿಲ್ಲ ಯಾಕೆ ಅಂದರೆ ಆ ವ್ಯಕ್ತಿ ತುಂಬ ಬಡತನದಲ್ಲಿ ಇದ್ದ ವ್ಯಕ್ತಿ ಹಾಗಾಗಿ ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸುತ್ತ ಮುಂದೆ ಸಾಗಿದರು.

ನಾರಾಯಣ್ ಮಜುಂದಾರ್ ಬೈಸಿಕಲ್ನಲ್ಲಿ ತನ್ನ ಗ್ರಾಮದಲ್ಲಿ ರೈತರಿಂದ ಹಾಲು ಸಂಗ್ರಹಿಸಿ ತನ್ನ ಡೈರಿ ವ್ಯವಹಾರ ಆರಂಭಿಸಿದರು. ಇವರ ಡೈರಿ ತುಂಬ ಉತ್ತಮ ರೀತಿಯಲ್ಲಿ ಆದಾಯವನ್ನು ತರುವಂತ ಕೆಲಸ ಮಾಡಿತು. ಹೀಗೆ ಅವರು ತಮ್ಮ ಡೈರಿಯನ್ನು ಒಂದರಿಂದ ಎರಡಕ್ಕೆ ಹೆಚ್ಚುಗೆ ಮಾಡಿಕೊಂಡು ತಮ್ಮ ಕಾಯಕವನ್ನು ಮುಂದುವರಿಸಿದರು.

ಎರಡು ದಶಕಗಳ ನಂತರ ಮತ್ತು ಅನೇಕ ವರ್ಷಗಳ ಹೋರಾಟದ ನಂತರ, ಅವರು ಪಶ್ಚಿಮ ಬಂಗಾಳದ ಎಂಟು ಜಿಲ್ಲೆಗಳಲ್ಲಿ ತಮ್ಮ ಹಾಲಿನ ಡೈರಿಗಳನ್ನು ಪ್ರಾಂಭಿಸಿ ತಮ್ಮ ವಾರ್ಷಿಕ ವಹಿವಾಟು 255 ಕೋಟಿ ಆಗಿದೆ.

ಇವರ ಕಂಪನಿ ಮೂರು ಹಾಲು ಸಂಸ್ಕರಣ ಘಟಕಗಳು ಮತ್ತು 22 ಹಾಲಿನ ಚಿಲ್ಲಿಂಗ್ ಸಸ್ಯಗಳನ್ನು ಹೊಂದಿದ್ದು ಇದೀಗ ಪೂರ್ವ ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಇವರು ಒಬ್ಬರಾಗಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *