ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ ಒಂದು ಭಾಗದಲ್ಲಿ ಅತಿಯಾದ ನೋವು ಈ ಮೈಗ್ರೇನ್‌ನಿಂದಾಗುತ್ತದೆ. ಮೈಗ್ರೇನ್‌ನನ್ನು ಪೇನ್‌ಕಿಲ್ಲರ್ ಅಥವಾ ತಲೆನೋವಿನ ಮಾತ್ರೆಗಳಿಂದ ನಿವಾರಿಸುವುದು ಕಷ್ಟಕರ. ಇದಕ್ಕೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಾಗುತ್ತದೆ.
ಮೈಗ್ರೇನ್‌ಗೆ ಏನು ಕಾರಣ: ಪ್ರಮುಖವಾಗಿ ಅತಿಯಾದ ಕೆಲಸದ ಒತ್ತಡ, ಕಣ್ಣಿನ ಸಮಸ್ಯೆ, ವಿಟಮಿನ್ ಕೊರತೆ, ನಿದ್ರಾಹೀನತೆ, ಎಸಿಡಿಟಿ, ನೀರಿನ ಅಂಶ ಕಡಿಮೆಯಾಗುವುದು ಮೈಗ್ರೇನ್ ಬಾಧಿಸಲು ಸಹಕಾರಿ.
ಅಡುಗೆಯಲ್ಲಿ ಕರಿಮೆಣಸು ಬಳಸಿದರೆ ಏನುಗುತ್ತೆ ಅನ್ನೋದು ಇಲ್ಲಿದೆ ನೋಡಿ: ಮನೆಯಲ್ಲಿ ಮಾಡುವ ವಿವಿಧ ಬಗೆಯ ಅಡುಗೆಯಲ್ಲಿ ಕರಿಮೆಣಸು ಬಳಸುವ ಅಭ್ಯಾಸ ಕರಗತಮಾಡಿಕೊಳ್ಳಿ. ವಿಟಮಿನ್ ಹಾಗೂ ಖನಿಜಾಂಶಗಳಿಂದ ಕೂಡಿರುವ ಕರಿಮೆಣಸುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನುನೀಡುತ್ತದೆ.
ಕರಿಮೆಣಸಿನ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಕುಡಿಯುವುದು ಅಥವಾ ತುಪ್ಪದಲ್ಲಿ ಬಿಸಿ ಮಾಡಿ ತೆಗೆದುಕೊಳ್ಳುವುದು ಮೈಗ್ರೇನ್ ಅಥವಾ ಇನ್ನಿತರ ತಲೆನೋವನ ಬಾಧೆಯನ್ನು ಹೋಗಲಾಡಿಸುತ್ತದೆ. ಕರಿಮೆಣಸಿನಲ್ಲಿರುವ ಖಾರದ ಅಂಶ ನೋವಿನ ಬಾಧೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಅಥವಾ ನೆನೆಸಿಟ್ಟ ಕರಿಮೆಣಸನ್ನು ಹುಡಿ ಮಾಡಿಯೂ ಸೇವಿಸಬಹುದು.
ವಿಟಮಿನ್ ಎ, ಸಿ ಹಾಗೂ ಕೆಗಳನ್ನು ಹೊಂದಿರುವ ಕರಿಮೆಣಸಿನ ಕಾಳುಗಳಲ್ಲಿ, ಅತ್ಯಧಿಕ ಪ್ರಮಾಣದ ಖನಿಜಾಂಶಗಳೂ ಇವೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಇವುಗಳು ಹೊಂದಿವೆ.