ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಈ ಯೋಜನೆ ಸಹ ಒಂದು ಅಟಲ್ ಪಿಂಚಣಿ ಯೋಜನೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.
ಅಸಂಘಟಿತ ವಲಯದ ಎಲ್ಲ ಪ್ರಜೆಗಳಿಗೆ ಎಪಿವೈ ಅನ್ವಯವಾಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರೂಪದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಇಆರ್‌ಡಿಎ) ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ.
ಎಪಿವೈ ಮುಖ್ಯಾಂಶಗಳು: ಎಪಿವೈ ಯೋಜನೆ ಮಾಡಿಸಿಕೊಂಡವರಿಗೆ 60 ವರ್ಷವಾದ ಬಳಿಕ ಮಾಸಿಕ ₨ 1 ಸಾವಿರದಿಂದ ₨ 5 ಸಾವಿರದವರೆಗೆ ಪಿಂಚಣಿ ಸಿಗುವುದು ನಿಶ್ಚಿತ.
ಅರ್ಹತೆ: 18ರಿಂದ 40 ವರ್ಷದೊಳಗಿನವರು ಮಾತ್ರ ಎಪಿವೈ ಅನ್ವಯವಾಗುತ್ತದೆ. ಬೇಕಾಗುವುದು ಆಧಾರ್ ಮತ್ತು ಮೊಬೈಲ್ ಸಂಖ್ಯೆ ಮಾತ್ರ. ಆಧಾರ್ ಸಂಖ್ಯೆ ದೊರೆತಿಲ್ಲವಾದರೆ ಮುಂದಿನ ದಿನಗಳಲ್ಲೂ ಅದನ್ನು ನೀಡಬಹುದು.
ಪಿಂಚಣಿ ಪಡೆಯುವ ಬಗೆ: ವ್ಯಕ್ತಿಗೆ 60 ವರ್ಷವಾದ ತಕ್ಷಣ ಎಷ್ಟು ಮಾಸಿಕ ಪಿಂಚಣಿಗೆ ನೋಂದಾಯಿಸಲಾಗಿತ್ತೋ, ಅಷ್ಟು ಪಿಂಚಣಿ ಬರುತ್ತಲೇ ಇರುತ್ತದೆ.
ಪಿಂಚಣಿ ಯೋಜನೆ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟರೆ, ಆತನ ಪತ್ನಿಗೆ ಪೂರ್ತಿ ಹಣ ಸಂದಾಯವಾಗುತ್ತದೆ. ಪತ್ನಿ ಮೃತಪಟ್ಟರೆ ಪತಿಗೆ ಹಣ ದೊರೆಯುತ್ತದೆ. ಇಬ್ಬರೂ ಮೃತಪಟ್ಟರೆ ನಾಮನಿರ್ದೇಶಕರಿಗೆ ಹಣ ದೊರೆಯುತ್ತದೆ.
ಈ ಯೋಜನೆಯಂತೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರುವುದು ಸಾಧ್ಯವಿಲ್ಲ. ಆದರೆ ಫಲಾನುಭವಿ ಮೃತಪಟ್ಟರೆ ಅಥವಾ ಕೆಲವೊಂದು ಕಾಯಿಲೆಗಳು ಸಂಭವಿಸಿದರೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರಬಹುದು.
ವ್ಯಕ್ತಿಗೆ 60 ವರ್ಷ ಪೂರ್ಣಗೊಂಡಾಗ ಆತನ ಎಪಿವೈ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನಗದು ಮಾಡಿಕೊಳ್ಳಬಹುದು ಅಥವಾ ಮಾಸಿಕ ಪಿಂಚಣಿ ಪಡೆಯಬಹುದು. ಈಗಾಗಲೇ ಸ್ವಾವಲಂಬನ ಯೋಜನೆ ಮಾಡಿಸಿಕೊಂಡವರೂ 18ರಿಂದ 40 ವರ್ಷ ಎಪಿವೈಗೆ ವಲಸೆ ಹೋಗಬಹುದು. ವ್ಯಕ್ತಿಗೆ 40 ವರ್ಷ ಪೂರ್ಣಗೊಂಡಾಗ ಪಿಂಚಣಿ ಯೋಜನೆಯಿಂದ ಹೊರಬರಲು ಬಯಸಿದ್ದೇ ಆದರೆ ಅವರಿಗೆ ಅವರ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನೀಡಲಾಗುತ್ತದೆ. 40 ವರ್ಷ ಮೇಲ್ಪಟ್ಟವರು ಈ ಯೋಜನೆಯಂತೆ ಹಣ ಉಳಿತಾಯ ಮಾಡುತ್ತ ಹೋದರೆ 60 ವರ್ಷದ ಬಳಿಕ ಅವರು ಪಿಂಚಣಿ ಅಥವಾ ಏಕ ಗಂಟಿನ ನಗದು ವಾಪಸ್ ಪಡೆಯಬಹುದು.