ದೊಡ್ಡೋರು ಹಿಂದಿನಿಂತ ಹೇಳ್ತಾ ಬರ್ತೀರೋದು ಏನ್ ಹೇಳಿ… ಸ್ವಲ್ಪ ನೆನಪಿಸಿಕೊಳ್ಳಿ. ಅದೇ ಕಣ್ರೀ ಮೀನಿನ ಹೆಚ್ಚೆ ಕಂಡು ಹಿಡಿಯ ಬಹುದು, ನದಿ ಮೂಲ ಕಂಡು ಹಿಡಿಯ ಬಹುದು ಆದರೆ ಹುಡುಗಿಯರ ಮನಸ್ಸಲ್ಲಿ ಏನಿದೆ ಅಂತಾ ಅಪ್ಪಯ್ಯ, ಜಪ್ಪಯ್ಯ ಅಂದ್ರು ಕಂಡುಹಿಡಿಯಕ್ಕೆ ಆಗಾಲ್ಲಾ ಅಂತಾ.
ಕಣ್ಣು ಒಂದೆಡೆ ನೋಡತ್ತಿದ್ದರೆ. ಮನಸ್ಸು ಅವರ ಸ್ವಾಭಾವ ಎಂತದ್ದು ಎಂದು ಲೆಕ್ಕಾಚಾರ ಹಾಕುತ್ತಿರುತ್ತದೆ. ಇನ್ನು ಕೆಲವು ಹುಡುಗಿಯರು ಹುಡುಗರು ಮಾತನಾಡುವ ಶೈಲಿ ಮತ್ತು ನಡೆದುಕೊಳ್ಳುವ ರೀತಿ, ಕೇಳುವ ಪ್ರಶ್ನೆಗಳು ಇದನ್ನೆಲ್ಲಾ ನೋಡಿನೇ ಇಂಪ್ರೆಸ್ ಆಗೋದು. ಆದರೆ ಕೆಲವು ಹುಡುಗಿಯರಿಗೆ ಹೀಗೆಲ್ಲ ಕೇಳ್ಬೇಡಿ ಪಿತ್ತ ನೆತ್ತಿಗೇರುತ್ತೆ. ನಿಮ್ಮ ಬಗ್ಗೆ ಇದ್ದ ಭಾವನೆ ಮನಸಲ್ಲೇ ಬದಲಾಗುತ್ತದೆ. ಮುಖದಲ್ಲಿ ನಗು ಇದ್ರು ಮನಸಲ್ಲಿ ನಿಮ್ಮ ಮೇಲೆ ಇದ್ದ ಭಾವನೇ ಬದಲಾಗುತ್ತಾ ಹೋಗುತ್ತದೆ. ಕೆಲವು ಹುಡುಗಿಯರು ಒಂದೇ ಸಮನೆ ರೇಗಿ ಬಿಡುತ್ತಾರೆ.
ನಿನ್ನ ತೂಕ ಎಷ್ಟು: ಹುಡುಗಿಯರಿಗೆ ಈ ಪ್ರಶ್ನೆ ಕೇಳಿದ್ರೆ ಸಾಕು ಪಿತ್ತ ನೆತ್ತಿಗೇರುತ್ತೆ. ಅದರಲ್ಲೂ ದಪ್ಪಗಿರುವ ಹುಡುಗಿಯರಿಗೆ ಈ ಪ್ರಶ್ನೆ ಕೇಳಿದ್ರೆ ಮುಗಿತು ಕಥೆ. ಮೊದಲು ಹುಡುಗಿಯರು ಉತ್ತರ ಕೋಡೋದೆ ಇದು….? ನಿಗ್ಯಾಕೆ ಇದೆಲ್ಲಾ ಅಂತಾ? ಆದರೆ ಇನ್ನು ಕೆಲ ಹುಡುಗಿಯರು ನಾಚಿಕೊಂಡು ಒಂದೈದು ಕೆ ಜಿ ತೂಕ ಕಡಿಮೆ ಹೇಳ್ತಾರೆ. ಆದರೆ ಮನಸಲ್ಲಿ ಇದನ್ನ ತಳ್ಕೊಂಡು ಇವನು ಏನ್ ಮಾಡ್ತಾನೆ? ಸ್ವಲ್ಪ ಸಲಿಗೆ ಕೊಟ್ರೆ ಸಾಕು ತಲೆ ಮೇಲೆ ಕೂತಿಕೊಳ್ಳುತ್ತಾರೆ ಅಂತಾ ಅನ್ಕೋತ್ತಾರೆ. ಅದಕ್ಕೆ ಇದನ್ನೆಲ್ಲಾ ಕೇಳೋಕೆ ಹೋಗ್ಬೇಡಿ.
ನಿಮಗೆ ಸಂಬಳವೆಷ್ಟು: ಆಕೆಯ ಸಂಬಳ ತಿಳಿದುಕೊಂಡು ನೀವು ಏನನ್ನು ಸಾಧಿಸುತ್ತೀರಾ ಹೇಳಿ? ಮಹಿಳೆಯರು ಟೈಂ ಪಾಸ್ ಗಾಗಿ, ಫ್ಯಾಷನ್ ಗಾಗಿ ಮತ್ತು ಆರ್ಥಿಕ ಸುರಕ್ಷತೆಗಾಗಿ ಕೆಲಸಕ್ಕೆ ಹೋಗುತ್ತಾರೆ. ಸಂಬಳವನ್ನು ಕೇಳಿದ್ರೆ ನೀವು ಅವರನ್ನು ಸಂಬಳದಿಂದ ಅಳೆಯುತ್ತೀರಿ ಎಂದು ಭಾವಿಸುತ್ತಾರೆ. ಅದು ಖಂಡಿತವಾಗಿಯೂ ತಪ್ಪು. ಹಳೇಯ ಲವರ್ ಬಗ್ಗೆ ಹೆಚ್ಚಾಗಿ ಕೇಳ ಬೇಡಿ.
ಯಾವುದೇ ಹುಡುಗಿಯರಾಗಲೀ ಹಳೆಯ ಸಂಭಂದದ ಬಗ್ಗೆ ಹೇಳುವುದಿಲ್ಲ. ನೀವು ಅದನ್ನು ಪದೇ ಪದೇ ಕೇಳುತ್ತಲೇ ಇರಬೇಡಿ ನಿಮ್ಮನ್ನು ಸಂಪೂರ್ಣವಾಗಿ ನಂಬಿದ ಬಳಿಕವಷ್ಟೇ ಆಕೆ ತಾನಾಗಿಯೇ ಬಾಯಿಬಿಡುತ್ತಾಳೆ. ಅಲ್ಲಿಯವರೆಗೆ ನೀವು ಕಾಯಲೆಬೇಕು. ಪದೇ ಪದೇ ಅದೇ ವಿಷಯವನ್ನು ಕೆದಕುತ್ತಿದ್ದರೆ ಆಕೆ ನನ್ನ ಮೇಲೆ ಅನುಮಾನ ಪಡುತ್ತಿದ್ದಾನೆಂದು ಮನಸಲ್ಲೇ ಕೊರಗುತ್ತಾಳೆ.
ಆಕೆಯ ಗೆಳತಿಯ ಬಗ್ಗೆ ಹೆಚ್ಚು ವಿಚಾರಿಸ ಬೇಡಿ.
ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋ ಮಾತು ನಿಜ. ನೀವು ಹೆಚ್ಚಾಗಿ ಆಕೆಯ ಬಳಿ ಅವಳ ಸ್ನೇಹಿತರ ಹತ್ತಿರ ವಿಚಾರಿಸಿದ್ರೆ ಅಷ್ಟೇ.. ಪಿತ್ತ ನೆತ್ತಿಗೇರುತ್ತೆ. ಅವಳ ಬಳಿ ಅವಳ ಬಗ್ಗೆಯಷ್ಟೇ ಮಾತನಾಡಿ. ಅವಳ ಸೌಂದರ್ಯವನ್ನು ಮಾತ್ರ ಹೊಗಳಿ. ಅಪ್ಪಿ ತಪ್ಪಿ ಆಕೆಯ ಗೆಳತಿಯ ಸೌಂದರ್ಯದ ಬಗ್ಗೆ ಹೊಳಿದ್ರೆ ಅಷ್ಟೇ ಮುಗೀತು ನಿಮ್ಮ ಕಥೆ.