ತಲೆಯ ತುಂಬಾ ಇರಬೇಕಾದ ಕೂದಲು ತಲೆ ಬಾಚಿದ ಕೂಡಲೇ ಬಾಚಿನೆಗೆ ಬಂದು ಬಿಡುತ್ತದೆ ಹಾಗು ಈ ಸಮಸ್ಯೆ ಪ್ರತಿ ದಿನ ಹೆಚ್ಚುತ್ತದೆ ವರೆತು ನೀವು ಯಾವುದೇ ರೀತಿಯ ಕಾಳಜಿ ಮಾಡದೆ ಇದ್ದರೆ ಕಡಿಮೆಯಾಗುವುದಿಲ್ಲ, ನಿಮಗೆ ನೆನಪಿರಬಹುದು ನಿಮ್ಮ ಪೂರ್ವಜರರ ಕೂದಲುಗಳು ಎಷ್ಟು ಉದ್ದ ಹಾಗು ದಟ್ಟವಾಗಿದ್ದವು ಆ ಸಮಯದಲ್ಲಿ ಯಾವುದೇ ರೀತಿಯ ಶಾಂಪೂ ಇರಲಿಲ್ಲ ಆದರೂ ಬಲಿಷ್ಠವಾಗೇ ಇದ್ದವು, ಇಂದು ನಿಮಗೆ ನಿಮ್ಮ ಕೂದಲನ್ನ ಬಲಿಷ್ಠ ಗೊಳಿಸುವ ಆಹಾರವನ್ನು ತಿಳಿಸುತ್ತೇವೆ.
ಹಸಿರು ತರಕಾರಿಗಳು : ಹಸಿರು ತರಕಾರಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ, ಇದು ನಿಮ್ಮ ಕೂದಲಿನ ಬುಡವನ್ನು ಸದೃಢ ಮಾಡುತ್ತದೆ ಹಾಗೆಯೆ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಟಮಿನ್ A ಮತ್ತು C ಗಳ ಅವಶ್ಯಕತೆ ಇದ್ದು ಇವುಗಳು ಹಸಿರು ತರಕಾರಿಯಲ್ಲಿ ಹೇರಳವಾಗಿ ಸಿಗುತ್ತದೆ.
ಪಾಲಾಕ್ ರಸ : ದಿನವೂ ಒಂದು ಲೋಟ ಪಾಲಾಕ್ ರಸವನ್ನು ಕುಡಿಯುವುದು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ, ಹಾಗೆಯೇ ಕೊತ್ತಬರಿಯ ಸೊಪ್ಪು ಸಹ ಸಹಕಾರಿ ಇದರ ರಸವನ್ನು ತೆಗೆದು ಕೂದಲಿಗೆ ಹಚ್ಚಿದರು ಒಳ್ಳೆ ಬೆಳವಣಿಗೆ ಯಾಗುತ್ತದೆ.
ನಿಂಬೆ ಬೀಜ : ಇನ್ನು ಯಾವುದೇ ಉಪಯೋಗವಿಲ್ಲ ಎಂದು ಬಿಸಾಕುವ ನಿಂಬೆ ಬೀಜದ ಜೊತೆಯಲ್ಲಿ ಒಂದು ಟೀ ಚಮಚ ಕರಿಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.