ಪ್ರತಿಯೊಬ್ಬರ ಜೀವನದಲ್ಲಿ ತಂದೆ ಆಗಲಿ ತಾಯಿ ಆಗಲಿ ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತಾರೆ. ತಮ್ಮ ಮಕ್ಕಳು ಜೀವನದಲ್ಲಿ ಒಂದು ಒಳ್ಳೆ ಸ್ಥಾನಕ್ಕೆ ಹೋಗಬೇಕು ಮತ್ತು ದೇಶದ ಉತ್ತಮ ಪ್ರಜೆ ಆಗಬೇಕು ಅನ್ನೋದು ಪ್ರತಿಯೊಬ್ಬ ತಂದೆ ತಾಯಿಯ ಅಸೆ ಆಗಿರುತ್ತೆ, ಹಾಗೆ ಈ ಕಥೆ ಸಹ ಅಷ್ಟೇ ತಂದೆ ಚಹಾ ಮಾರಿ ತನ್ನ ಮಗಳನ್ನು ದೇಶದ ವಾಯುಪಡೆಯ ಪೈಲೆಟ್ ಮಾಡಿದ್ದಾರೆ. ಯಾರು ಆ ತಂದೆ ಆ ಮಗಳು ಯಾರು ಅನ್ನೋದು ಇಲ್ಲಿದೆ ನೋಡಿ.
ಅಪ್ಪ ಹಾಗು ಹಾಗು ರಾತ್ರಿ ಅನ್ನೋದನ್ನು ಲೆಕ್ಕಿಸದೆ ದುಡಿದು ಬಸ್ ನಿಲ್ದಾಣದಲ್ಲಿ ಚಹಾ ಮಾರಿ ಚಿಲ್ಲರೆ ಹಣವೆಲ್ಲ ಕೂಡಿಟ್ಟು ತನ್ನ ಮಗಳನ್ನು ಪೈಲಟ್ ಮಾಡಿರುವ ತಂದೆ ಮಧ್ಯಪ್ರದೇಶದ ನೀಮಚ್ ಬಸ್ ನಿಲ್ದಾಣದಲ್ಲಿ ಚಹಾ ಮಾರುತಿದ್ದ ವ್ಯಾಪಾರಿಯ ಮಗಳೇ ಈ ಪೈಲಟ್, ಹೆಸರು ಅಂಚಲ್ ಗಂಗ್ವಾಲ್ ಇತ್ತೀಚಿಗೆ ಭಾರತೀಯ ವಾಯುಪಡೆಗೆ ಸೇರಿಕೊಂಡಿದ್ದಾರೆ. ಆದರೆ ಇವರು ಬೆಳೆದು ಬಂದ ಆದಿ ಅಷ್ಟು ಸುಲಭದ ದಾರಿಯಾಗಿರಲಿಲ್ಲ.
ಎಷ್ಟು ಸಮಯದಲ್ಲಿ ತಮ್ಮ ಕಾಲೀಜಿನ ಶುಲ್ಕ ಕಟ್ಟಲು ಅವರ ತಂದೆಯ ಬಳಿ ಹಣ ಇರುತ್ತಿರಲಿಲ್ಲ ಆದರೂ ಹೇಗೋ ತನ್ನ ಕಾಲೀಜಿನ ದಿನಗಳನ್ನು ಮುಗಿಸಿದಳು ಅಷ್ಟರಲ್ಲಿ 2013ರಲ್ಲಿ ಕೇದಾರನಾಥದಲ್ಲಿ ಮೇಘಸ್ಫೋಟವಾದಾಗ ಭೀಕರ ಪ್ರವಾಹ ಉಂಟಾಗಿತ್ತು. ಈ ವೇಳೆ ಭಾರತೀಯ ವಾಯುಪಡೆಯ ಯೋಧರು ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ್ದರು. ವೀರಯೋಧರ ಆ ಸಾಹಸ ನೋಡಿ ತಾನೂ ವಾಯುಪಡೆ ಸೇರಬೇಕು ಎಂದು ಅನ್ನಿಸಿತಂತೆ. ಸತತ 6 ಬಾರಿಯ ಪ್ರಯತ್ನದ ಬಳಿಕ ಕೊನೆಗೂ ಕನಸು ಈಡೇರಿತು.
ಮಗಳ ಈ ಪರಿಶ್ರಮಕ್ಕೆ ತಂದೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಈ ಸಹಾಸಕ್ಕೆ ಮಧ್ಯಪ್ರದೇಶದ ಸಿಎಂ ಮೆಚ್ಚುಗೆ ತಿಳಿಸಿ ತಂದೆ ಸುರೇಶ ಗಂಗ್ವಾಲ್ ಹಾಗು ಮಗಳು ಅಂಚಲ್ ಗಂಗ್ವಾಲ್ ಅವರಿಗೆ ಅಭಿನಂದಿಸಿದ್ದಾರೆ.