ನಮ್ಮ ದೇಶದಲ್ಲಿ ಇವತ್ತಿನ ದಿನಗಳಲ್ಲಿ ರಾತ್ರೋ ರಾತ್ರಿ ಒಂದೇ ದಿನದಲ್ಲಿ ಸ್ಟಾರ್ ಆಗಿರುವ ಮಂದಿ ಸುಮಾರ ಜನ ಇದಕ್ಕೆಲ್ಲ ಕಾರಣ ನಮ್ಮ ಡಿಜಿಟಲ್ ಹಾಗು ಸೋಷಿಯಲ್ ಮೀಡಿಯಾ ಕಾರಣ, ಇವತ್ತು ನಾವು ಹೇಳುತ್ತಿರುವ ಹುಡುಗ ಸಹ ಸೋಷಿಯಲ್ ಮಿಡಿಯಾದಿಂದಲೇ ತನ್ನ ಒಂದು ಕಲೆ ಹಾಗು ಪ್ರತಿಭೆಯನ್ನು ಗುರುತಿಸಿಕೊಂಡು ಇಂದು ಒಂದು ಕೋಟಿ ಗೆದಿದ್ದಾನೆ ಹೇಗೆ ಅನ್ನೋದು ಇಲ್ಲಿದೆ ನೋಡಿ.
ಈ ಹಿಂದೆ ಟಿಕ್ ಟಾಕ್ ಹಾಗು ಬೇರೆ ಬೇರೆ ಸೋಷಿಯಲ್ ಮೀಡಿಯಾ ಆಪ್ ಗಳಲ್ಲಿ ಹೆಚ್ಚು ಜನ ತಮ್ಮ ಪ್ರತಿಭೆಗಳನ್ನು ತೋರಿಸ್ಕೊಳ್ಳುತ್ತಾರೆ, ಅದರಲ್ಲೂ ಈ ಡ್ಯಾನ್ಸ್ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ, ಅಂತದ್ದೇ ಒಂದು ವಿಡಿಯೋಗಳನ್ನು ಮಾಡುತ್ತಿರುವ ಈ ಹುಡುಗ, ಈ ಹುಡುಗನ ವಿಡಿಯೋಗಳನ್ನು ನೋಡಿದರೆ ಮೈಕೈ ಜುಮ್ ಎನ್ನುತ್ತವೆ.
ಈ ಹುಡುಗನ ಹೆಸರು ಯುವರಾಜ್ ಅಂತ ಯಾರಿಗೆ ಈ ಲಾಕ್ ಡೌನ್ ಆಗಿದ್ದು ಲಾಭ ಸಿಕ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಈ ಹುಡುಗನಿಗೆ ಮಾತ್ರ ಲಕ್ಕಿ ಅಂತ ಹೇಳಬಹುದು ಯಾಕೆ ಒಂದು ಕೋಟಿ ಆದಾಯ ಗಳಿಸಿದ್ದಾನೆ ಈ ಲಾಕ್ ಡೌನ್ ನಲ್ಲಿ ಹೇಗೆ ಗೊತ್ತಾ, ಈತನ ತಂದೆ ಒಬ್ಬ ಕೂಲಿ ಕಾರ್ಮಿಕ, ಇನ್ನು ಯುವರಾಜ್ ಕುಟುಂಬ ಬಡತದನ ಕುಟುಂಬವಾಗಿತ್ತು. ಹೀಗೆ ಒಂದು ದಿನ ಮೊಬೈಲ್ ಖರೀದಿ ಮಾಡೋಣ ಎಂದು ಪಣತೊಟ್ಟ ಯುವರಾಜ್ ಮತ್ತು ಆತನ ತಂಗಿ ತಿಂಗಳುಗಳ ಕಾಲ ಕಷ್ಟಪಟ್ಟು ಹಣವನ್ನ ಸಂಪಾದನೆ ಮಾಡಿ ಒಂದು ಮೊಬೈಲ್ ಖರೀದಿ ಮಾಡಿದರು.
ಅಣ್ಣ ತಂಗಿ ಒಟ್ಟಿಗೆ ಕುಳಿತುಕೊಂಡು ಡಾನ್ಸ್, ತಮಾಷೆಯ ವಿಡಿಯೋ ಮತ್ತು ಸಿನಿಮಾಗಳನ್ನ ಮೊಬೈಲ್ ನಲ್ಲಿ ನೋಡುತ್ತಿದ್ದರು. ಇನ್ನು ಹಾಡುಗಳನ್ನ ನೋಡುತ್ತಿದ್ದ ಯುವರಾಜ್ ಬಾಲಿವುಡ್ ನಟ ಟೈಗರ್ ಸ್ಟರ್ಪ್ ಅವರ ಮುನ್ನ ಮೈಕಲ್ ಅನ್ನುವ ಸಿನಿಮಾದ ಹಾಡು ನೋಡಿದ ಮತ್ತು ಅದರಲ್ಲಿ ಟೈಗರ್ ಸ್ಟರ್ಪ್ ಹಾಕಿದ ಡಾನ್ಸ್ ಸ್ಟೆಪ್ ಯುವರಾಜ್ ಗೆ ತುಂಬಾ ಇಷ್ಟ ಆಯಿತು ಮತ್ತು ನಾನು ಅದರಂತೆ ಡಾನ್ಸ್ ಮಾಡಬೇಕು ಅಂದುಕೊಂಡ ಹಾಗೆ ಅಭ್ಯಾಸವನ್ನ ಕೂಡ ಆರಂಭ ಮಾಡಿದ.
ಇನ್ನು ದಿನಬಿಡದೆ ಡಾನ್ಸ್ ಮಾಡುತ್ತಿದ್ದ ಯುವರಾಜ್ ಆರು ತಿಂಗಳ ನಂತರ ಅದರ ಲಯ ಕಂಡುಕೊಂಡ ಮತ್ತು ಮೈಕಲ್ ಜಾನ್ಸನ್ ರೀತಿ ಡಾನ್ಸ್ ಮಾಡುವುದನ್ನ ಕಲಿತುಕೊಂಡ ಯುವರಾಜ್, ಇನ್ನು ತನ್ನ ಡಾನ್ಸ್ ಅನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಮಾಡಿದ ಯುವರಾಜ್ ಗೆ ಪ್ರಶಂಸೆ ಸಿಕ್ಕಿತು ಮತ್ತು ಜನರು ಈತನನ್ನ ಬಾಬಾ ಜಾಕ್ಸನ್ ಎಂದು ಕರೆಯಲು ಆರಂಭ ಮಾಡಿದರು.
ಲಾಕ್ ಡೌನ್ ಸಮಯದಲ್ಲಿ ಫ್ಲಿಪ್ ಕಾರ್ಟ್ ಕಂಪನಿ ಸ್ಟೇಯ್ ಹೋಂ ಅನ್ನುವ ಸ್ಪರ್ಧೆಯನ್ನ ಆಯೋಜನೆ ಮಾಡಿತ್ತು ಮತ್ತು ಈ ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಪ್ರತಿವಾರ ಹತ್ತು ಲಕ್ಷ ಮತ್ತು ಕೊನೆಯ ವಿಜೇತರಿಗೆ ಒಂದು ಕೋಟಿ ಬಹುಮಾನವನ್ನ ಘೋಷಣೆ ಮಾಡಲಿಗಿತ್ತು. ಈ ಸ್ಪರ್ಧೆಯಲ್ಲಿ ಯಾರು ಮನೆಯಲ್ಲಿ ಚನ್ನಾಗಿ ಮನರಂಜನೆಯನ್ನ ಕೊಡುತ್ತಾರೋ ಅವರಿಗೆ ಒಂದು ಕೋಟಿ ಗೆಲ್ಲುವ ಅವಕಾಶ ಮತ್ತು ಇದರಲ್ಲಿ ಭಾಗವಹಿಸಿದ ಯುವರಾಜ್ ತನ್ನ ನೃತ್ಯದ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದರು ಹಾಗೆ ಒಂದು ಕೋಟಿ ಬಹುಮಾನವನ್ನ ಕೂಡ ಗೆದ್ದುಕೊಂಡರು.