ಬೆಳ್ಳುಳ್ಳಿ ನೋಡಲು ತುಂಬ ಚಿಕ್ಕದು ಆದ್ರೆ ಅದರಲ್ಲಿರುವ ಅಂಶ ತುಂಬ ದೊಡ್ಡದು ಯಾಕೆ ಅಂದ್ರೆ ಮನುಷ್ಯನ ದೇಹಕ್ಕೆ ಈ ಬೆಳ್ಳುಳ್ಳಿ ತುಂಬ ಸಹಾಯ ಮಾಡಲಿದೆ.

ಇಲ್ಲಿವೆ ನೋಡಿ ಬೆಳ್ಳುಳ್ಳಿಯ ಉಪಯೋಗಗಳು: ಆರೋಗ್ಯಶಾಲಿಯಾಗಿ ಇರಲು, ನಿತ್ಯವೂ ಖಾಲಿಹೊಟ್ಟೆಯಲ್ಲಿ ಒಂದು ಎಸಳು ಜಜ್ಜಿದ ಬೆಳ್ಳುಳ್ಳಿಯನ್ನು ಸೇವಿಸಿ.

ನಿಮಗೆ ಇರುವ ರಕ್ತದೊತ್ತಡದ ಸಮಸ್ಯೆಯನ್ನು ತಗ್ಗಿಸಲು ಸಹಾಯವಾಗಲು, ನಿಮ್ಮ ನಿತ್ಯದ ಊಟದಲ್ಲಿ ಬೆಳ್ಳುಳ್ಳಿಯನ್ನೂ ಸಹ ಸೇರಿಸಿಕೊಳ್ಳಿ. ನಿಮಗೆ ಸಾಕಷ್ಟು ಮಟ್ಟಿನ ಆರೋಗ್ಯ ಪ್ರಯೋಜನವನ್ನು ಒದಗಿಸಬೇಕಾದರೆ ಬೆಳ್ಳುಳ್ಳಿಯನ್ನು ತಾಜಾವಾಗಿ ಉಪಯೋಗಿಸಬೇಕು.

ಕ್ಯಾಟಲೈಸಿಸ್‌ ಪ್ರಕ್ರಿಯೆಯ ಮೂಲಕ ಅಲ್ಲಿಸಿನ್‌ ಉತ್ಪತ್ತಿಯಾಗುವುದನ್ನು ಉತ್ತೇಜಿಸಲು, ಬೆಳ್ಳುಳ್ಳಿಯನ್ನು ನುಂಗುವುದಕ್ಕೆ ಮೊದಲು ಚಮಚೆಯಿಂದ ಸ್ವಲ್ಪ ಜಜ್ಜಿಕೊಳ್ಳಿ ನಂತರ ಸೇವಿಸಿ.
ಕೆಮ್ಮು ಹಾಗೂ ಶೀತ ನಿವಾರಣೆ, ಎದೆ, ಹೊಟ್ಟೆ ಹಾಗೂ ಕಿವಿಯ ಸೋಂಕಿನ ವಿರುದ್ಧ

ರಕ್ತದೊತ್ತಡ ಹಾಗೂ ಕೊಬ್ಬು ಕಡಿಮೆ ಮಾಡುತ್ತದೆ, ಹಲವು ತರದ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಕಾರಿ, ಮಧುಮೇಹ ಮುಂದೂಡಲು ನೆರವಾಗುತ್ತದೆ, ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ, ರೋಗ ನಿರೋಧಕ ಶಕ್ತಿ ವೃದ್ಧಿ

ಹದ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿ: ಪ್ರತಿದಿನ 2ರಿಂದ 4 ಗ್ರಾಂ ತಾಜಾ ಹಾಗೂ ಜಜ್ಜಿದ ಬೆಳ್ಳುಳ್ಳಿಯನ್ನು ಸೇವಿಸಬಹುದು. ಆದರೆ ಹೆಚ್ಚು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದು ಚರ್ಮ ಮತ್ತು ಉಸಿರಿನ ಮೂಲಕ ಒಂದು ವಿಶಿಷ್ಟ ವಾಸನೆಯನ್ನು ಹೊರಡಿಸುತ್ತದೆ, ಮಾತ್ರವಲ್ಲದೆ ಇದರಿಂದಾಗಿ ಎದೆ ಉರಿ, ಹೊಟ್ಟೆಕೆಡುವುದು ಮತ್ತು ಅಲರ್ಜಿ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು.

Leave a Reply

Your email address will not be published. Required fields are marked *