ಹೌದು ಹಳ್ಳಿಗಳಲ್ಲಿ ಹಾಗು ಮನೆಯ ಸುತ್ತಮುತ್ತ ಹಾಗು ದೇವಸ್ಥಾನದ ಹತ್ತಿರ ಹೆಚ್ಚಾಗಿ ಸಿಗುವ ಈ ನಂದಿಬಟ್ಟಲು ಹೂವಿನ ಗಿಡ ಹೆಚ್ಚು ಆರೋಗ್ಯಕ್ಕೆ ಪ್ರಯೋಜನ ಆಗುವಂತಹ ಗುಣಗಳನ್ನು ಹೊಂದಿದೆ ಹಾಗು ಇದರಿಂದ ಅನೇಕ ರೋಗಗಳನ್ನು ಹೋಗಲಾಡಿಸಬಹುದು ಮನೆಯಲ್ಲಿ ಹಿರಿಯರನ್ನು ಕೇಳಿದರೆ ಇದರ ಬಗ್ಗೆ ಹೆಚ್ಚು ಗೊತ್ತಿರುತ್ತದೆ ಇನ್ನು ಈ ನಂದಿಬಟ್ಟಲು ಹೂವು ಯಾವೆಲ್ಲ ರೋಗಗಳನ್ನು ಗುಣಪಡಿಸಬಹುದು ಅನ್ನೋದು ಇಲ್ಲಿದೆ ನೋಡಿ.
ನೇತ್ರ ರೋಗಗಳಲ್ಲಿ ಇದು ಹೆಚ್ಚು ಪರಿಣಾಮಕಾರಿ ಕೆಲಸ ಮಾಡುತ್ತೆ ಇನ್ನು ರಕ್ತ ಭೇದಿಯಾಗುತ್ತಿದ್ದರೆ ನಂದಿಬಟ್ಟಲು ಹೂವನ್ನು ಜೀರಿಗೆ ಮತ್ತು ಕಲ್ಲುಸಕ್ಕರೆಯೊಡನೆ ಮಿಶ್ರಣ ಮಾಡಿ ಚೆನ್ನಾಗಿ ಅರೆದು ಹಾಲಿನೊಂದಿಗೆ ಸೇವನೆ ಮಾಡಬೇಕು. ಇನ್ನು ದೇಹದ ಮೇಲೆ ಯಾವುದಾದರು ಗಾಯಗಳಾಗಿದ್ದರೆ ನಂದಿಬಟ್ಟಲು ಎಲೆಯನ್ನು ಕರ್ಪುರದ ಜೊತೆ ಅರೆದು ಗಾಯದ ಮೇಲೆ ಲೇಪಿಸಬೇಕು.
ಇನ್ನು ಜಂತು ಹುಳುಗಳು ಆಗಿದ್ದರೆ ನಂದಿಬಟ್ಟಲು ಎಳೆಗಳ ರಸಕ್ಕೆ ಹಿಂಗು ಮಿಶ್ರಣ ಮಾಡಿ ಸೇವನೆ ಮಾಡಬೇಕು ಹಾಗೆ ಕಣ್ಣಿನ ತೊಂದರೆ ಅಂದರೆ ಕಣ್ಣು ಕೆಂಪಾಗಿದ್ದರೆ ನಂದಿಬಟ್ಟಲು ಮೊಗ್ಗನ್ನು ಬಟ್ಟೆಯಲ್ಲಿ ಕಟ್ಟಿ ಎದೆಹಾಲಿನಲ್ಲಿ ಅದನ್ನು ಮುಳಗಿಸಿ ಅದರ ಹನಿಯನ್ನು ಕಣ್ಣಿಗೆ ಬಿಡುವುದರಿಂದ ಬೇಗ ಗುಣವಾಗುತ್ತದೆ ಇನ್ನು ಎದೆಹಾಲು ಇಲ್ಲ ಅಂದರೆ ಎಳನೀರು ಬಳಸಬಹುದು.
ಇನ್ನು ಹಲ್ಲು ನೋವಿಗೂ ಇದು ರಾಮಬಾಣ ಹಲ್ಲು ನೋವು ಇದ್ದಾರೆ ನಂದಿಬಟ್ಟಲು ಗಿಡದ ಬೇರು ಇಲ್ಲವೇ ಬೇರಿನ ತೊಗಟೆಯನ್ನು ಬಾಯಿಯಲ್ಲಿ ಇರಿಸಿಕೊಂಡು ಚೀಪುವುದರಿಂದ ನೋವು ಕಡಿಮೆಯಾಗುತ್ತದೆ ಇನ್ನು ಇಸುಬು ಹಾಗು ದದ್ದು ಮುಂತಾದ ಚರ್ಮ ರೋಗಗಳು ಇದ್ದಾರೆ ನಂದಿಬಟ್ಟಲಿನ ಹೂವಿನ ರಸವನ್ನು ಸೇವಿಸಬೇಕು.
ಕಣ್ಣಿನಲ್ಲಿ ಪೊರೆ ಆರಂಭವಾದ ಹಂತದಲ್ಲಿರುವಾಗ ಹೂವಿನ ರಸವನ್ನು ಇಲ್ಲವೇ ಬೇರನ್ನು ತೇಯ್ದು ಲೇಪಿಸುವುದರಿಂದ ಉತ್ತಮ.ಆದರೆ ಈ ಚಿಕಿತ್ಸೆ ಆರಂಭಿಸುವ ಮುನ್ನ ಒಂದು ಸಲ ಆಯುರ್ವೇದ ವೈದ್ಯರ ಸಲಹೆ ಪಡೆಯಬೇಕಾದುದು ಅವಶ್ಯಕ. ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಂದಿಬಟ್ಟಲು ಉಪಯುಕ್ತವಾದುದು.
ಇನ್ನು ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳುವ ಸಮಯದಲ್ಲಿ ಹೂವಿನ ರಸವನ್ನು ಇಲ್ಲವೇ ಅದರ ಬೇರನ್ನು ಚನ್ನಾಗಿ ತೇಯ್ದು ಲೇಪಿಸಬೇಕು ಇದರಿಂದ ಕಡಿಮೆಯಾಗುತ್ತದೆ ಆದರೆ ಈ ಚಿಕೆತ್ಸೆ ಮಾಡುವ ಮುನ್ನ ಆಯುರ್ವೇದದ ವೈದರ ಸಲಹೆ ಪಡೆಯುವುದು ಅವಶ್ಯಕ ಹಾಗೆ ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಬಂದಿಬಟ್ಟಲು ರಾಮಬಾಣ. ಇನ್ನು ಹಾವು ಕಚ್ಚಿದಾಗ ನಂದಿಬಟ್ಟಲು ಬೇರನ್ನು ನೀರನಲ್ಲಿ ಚನ್ನಾಗಿ ತೊಳೆದು ನಂತರ ತೇಯ್ದು ರಸವನ್ನು ಮಜ್ಜಿಯೊಂದಿಗೆ ಅಥವಾ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತಿನ್ನಿಸಬೇಕು.