ಜಂತುಗಳಾಗಿದ್ದಲ್ಲಿ ನಂದಿಬಟ್ಟಲು ಎಳೆಗಳ ರಸಕ್ಕೆ ಹಿಂಗುವಿನ ಪುಡಿ ಬೆರೆಸಿ ಸೇವಿಸಬೇಕು. ಕಣ್ಣಿನ ತೊಂದರೆ ಅಂದರೆ ಕೆಂಪಾಗಿದ್ದರೆ ನಂದಿಬಟ್ಟಲು ಮೊಗ್ಗನ್ನು ಬಟ್ಟೆಯಲ್ಲಿ ಕಟ್ಟಿ ಎದೆಹಾಲಿನಲ್ಲಿ ಮುಳುಗಿಸಿ ನಂತರ ಹಾನಿಯನ್ನು ಕಣ್ಣಿಗೆ ಹಿಂಡುವುದರಿಂದ ಗುಣವಾಗುತ್ತದೆ. ಎದೆಹಾಲಿನ ಬದಲಾಗಿ ಎಳನೀರನ್ನು ಸಹ ಉಪಯೋಗಿಸಬಹುದು.
ಹಲ್ಲುನೋವಿನಿಂದ ಬಳಲುವವರು ನಂದಿಬಟ್ಟಲು ಗಿಡದ ಬೇರು ಇಲ್ಲವೇ ಬೇರಿನ ತೊಗಟೆಯನ್ನು ಬಾಯಲ್ಲಿರಿಸಿಕೊಂಡು ಚಪ್ಪರಿಸುವುದರಿಂದ ನೋವು ಶಮನವಾಗುತ್ತದೆ. ಇಸುಬು ದದ್ದು ಮುಂತಾದ ಚರ್ಮ ರೋಗಗಳಲ್ಲಿ ನಂದಿಬಟ್ಟಲು ಹೂವಿನ ರಸ ಲೇಪಿಸಬೇಕು.
ಕಣ್ಣಿನಲ್ಲಿ ಪೊರೆ ಆರಂಭವಾದ ಹಂತದಲ್ಲಿರುವಾಗ ಹೂವಿನ ರಸವನ್ನು ಇಲ್ಲವೇ ಬೇರನ್ನು ತೇಯ್ದು ಲೇಪಿಸುವುದರಿಂದ ಉತ್ತಮ.ಆದರೆ ಈ ಚಿಕಿತ್ಸೆ ಆರಂಭಿಸುವ ಮುನ್ನ ಒಂದು ಸಲ ಆಯುರ್ವೇದ ವೈದ್ಯರ ಸಲಹೆ ಪಡೆಯಬೇಕಾದುದು ಅವಶ್ಯಕ. ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಂದಿಬಟ್ಟಲು ಉಪಯುಕ್ತವಾದುದು.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.