ಮನುಷ್ಯನಿಗೆ ಹಲವು ಖಾಯಿಲೆಗಳು ಬರುವುದು ಸಹಜ. ಅದರಲ್ಲಿ ಸಕ್ಕರೆ ಖಾಯಿಲೆಯೂ ಒಂದು. ಒಬ್ಬ ವ್ಯಕ್ತಿಗೆ ಸಕ್ಕರೆ ಖಾಯಿಲೆ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ ಒಂದು ಸುಲಭ ಮಾರ್ಗ.
ಅಧಿಕ ಮೂತ್ರ ಮತ್ತು ಬಾಯಾರಿಕೆ: ಆಗಾಗ ಮೂತ್ರಿಸಬೇಕೆಂದೆನಿಸುವುದು ಮತ್ತು ವಿಪರೀತ ಬಾಯಾರಿಕೆ ಆಗುವುದು ಇದರ ಒಂದು ಪ್ರಮುಖ ಲಕ್ಷಣವಾಗಿದೆ. ತೂಕ ಕಡಿಮೆಯಾಗುವುದು ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು. ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ ಅಂಶ ತೂಕ ಕಳೆದುಕೊಳ್ಳುವಂತೆ ಮಾಡುವುದು.
ಹಸಿವು: ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದರಿಂದ ವಿಪರೀತ ಹಸಿವಾದ ಅನುಭವವಾಗುತ್ತದೆ. ಒಣಗಿದ ಚರ್ಮ ಅಥವಾ ತುರಿಕೆ ಇದ್ದರೆ, ಅದು ಸಕ್ಕರೆ ಕಾಯಿಲೆಯ ಒಂದು ಲಕ್ಷಣವಾಗಿದೆ. ಹಾಗೆ ಶರೀರದ ಯಾವುದೇ ಭಾಗದಲ್ಲಾದರೂ, ಸಣ್ಣ ಗಾಯವಾದರೂ, ಬೇಗನೇ ಗುಣವಾಗದೇ ವಾರಗಟ್ಟಲೆ ಕೀವು ತುಂಬಿದಂತಿರುವುದು.
ಸುಸ್ತು: ಮಧುಮೇಹ ಅಂಟಿಕೊಂಡರೆ ಬೇಗನೇ ಸುಸ್ತಾಗುತ್ತೀರಿ. ಅಲ್ಲದೆ ಬೇಗನೇ ಸಿಟ್ಟಿಗೇಳುತ್ತೀರಿ. ಮತ್ತು ಕಣ್ಣಿನ ಭಾಗದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವುದರಿಂದ ಆರಂಭದ ಹಂತದಲ್ಲಿ ಮಂದ ದೃಷ್ಟಿ ಸಮಸ್ಯೆ ಕಾಡಬಹುದು.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.