ಕಾಮಾಲೆ ಎನ್ನುವು ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಬರುವ ಕಾಯಿಲೆಯಾಗಿದೆ. ಈ ಕಾಯಿಲೆ ಬಂದಾಗ ತುಂಬ ಮಂದಿ ಭಯ ಪಡುತ್ತಾರೆ. ಆದ್ರೆ ನೀವು ಹೆಚ್ಚು ಭಯ ಪಡುವ ಅವಶ್ಯಕತೆ ಇರುವುದಿಲ್ಲ ಯಾಕೆ ಅಂದ್ರೆ ಅದಕ್ಕಾಗಿ ಇಲ್ಲಿವೆ ನೋಡಿ ಸಿಂಪಲ್ ವಿಧಾನಗಳು.

ಬೆಳಗ್ಗೆ ಮತ್ತು ಸಂಜೆ ಮೂಲಂಗಿ ಮತ್ತು ಅದರ ಎಲೆಯ ರಸ ಸೇವಿಸಿ. ಅಥವಾ ಅದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ ಮೂಲಂಗಿಯನ್ನು ತಿನ್ನಿ. ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ನಿಂಬೆ ರಸ, ಕಪ್ಪು ಉಪ್ಪು ಮತ್ತು ಕರಿಮೆಣಸು ಸೇರಿಸಿ ಬೆಳಗ್ಗೆ ಮತ್ತು ಸಂಜೆ ಸೇವಿಸಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಕಪ್‌ ನೆಲ್ಲಿಕಾಯಿ ರಸದಲ್ಲಿ ಒಂದು ಚಮಚ ಜೇನು ಮಿಕ್ಸ್‌ ಮಾಡಿ ಸೇವನೆ ಮಾಡಿ.

ಪ್ರತಿದಿನ ಬೆಳಗ್ಗೆ 4 -5 ತುಳಸಿ ಎಲೆಗಳನ್ನು ಜಗಿದು ತಿನ್ನಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್‌ ಟೊಮ್ಯಾಟೊ ಜ್ಯೂಸ್‌ನಲ್ಲಿ ಉಪ್ಪು ಮತ್ತು ಕರಿಮೆಣಸು ಪುಡಿ ಸೇರಿಸಿ ಸೇವಿಸಿ.

ಪ್ರತಿದಿನ ಪಪ್ಪಾಯಿ ಸೇವಿಸಿ ಅಲ್ಲದೆ ಪಪ್ಪಾಯಿಯ ಎಲೆಗಳನ್ನು ಸೇವಿಸಿದರೂ ಉತ್ತಮ. ದಿನದಲ್ಲಿ 2 ಅಥವಾ 3 ಬಾರಿ ನಿಂಬೆ ಜ್ಯೂಸ್‌ ಸೇವಿಸಿ. ಇದರಿಂದ ಕಾಮಲೆ ರೋಗ ಕಡಿಮೆಯಾಗುತ್ತದೆ.

ಕಬ್ಬಿನ ಹಾಲು ಕಾಮಾಲೆಗೆ ಕಬ್ಬಿನ ಹಾಲು ಸಹಾ ಉತ್ತಮ ಆಹಾರವಾಗಿದೆ. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

ದಾಳಿಂಬೆ ದಾಳಿಂಬೆ ಹಣ್ಣಿನಲ್ಲಿಯೂ ವಿವಿಧ ಆಂಟಿ ಆಕ್ಸಿಡೆಂಟುಗಳು, ವಿವಿಧ ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಸೋಡಿಯಂ ಇದ್ದು ಯಕೃತ್ ನ ಶೀಘ್ರ ಚೇತರಿಕೆಗೆ ನೆರವು ನೀಡುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *