ನಿಂಬೆಹಣ್ಣಿನ ರಸದಲ್ಲಿ ಆಮ್ಲೀಯತೆ ಇದೆ ಅಂದರೆ ಸಿಟ್ರಸ್ ಆಮ್ಲ ಇದರಲ್ಲಿ ವಿಟಮಿನ್ ಸಿ ಅಂಶ ಇದೆ. ಆದಕಾರಣ ನಾವು ನಿಂಬೆಹಣ್ಣಿನ ರಸವನ್ನು ಅದಷ್ಟು ಮಿತಿಯಾಗಿ ಬಳಸಬೇಕು. ಅದರಲ್ಲಿಯೂ ಯಾರಿಗೆ ಈ ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇರುತ್ತದೆ ಅಂದರೆ ದೇಹದ ಉಷ್ಣಾಂಶ ಹೆಚ್ಚಿದೆ ಅಂಥವರು ಹಾಗೆ ಈ ವಾಯುವ್ಯ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಯಿಂದ ಬಳಲುವವರು ಕೂಡ ಯಾವುದೇ ಕಾರಣಕ್ಕೂ ಈ ನಿಂಬೆಹಣ್ಣಿನ ರಸವನ್ನು ಹೆಚ್ಚಾಗಿ ಬಳಸಬಾರದು.

ಹಾಗಾದರೆ ನಿಂಬೆಹಣ್ಣಿನ ರಸವನ್ನು ಹೆಚ್ಚಾಗಿ ಬಳಕೆ ಮಾಡುತ್ತ ಬರುವುದರಿಂದ ನಮಗೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲನೆಯದಾಗಿ ನಿಂಬೆಹಣ್ಣಿನ ರಸವನ್ನು ಹೆಚ್ಚಾಗಿ ಬಳಸಿದರೆ ಆಗುವ ಅಡ್ಡಪರಿಣಾಮ ಅಂದರೆ ಇದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತದೆ ಹೌದು ಇದರಲ್ಲಿರುವ ಆಮ್ಲೀಯತೆ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಗಳು ಇರುತ್ತದೆ ಹಾಗೆ ಈ ನಿಂಬೆ ಹಣ್ಣಿನಲ್ಲಿ ಇರುವ ಸಿಟ್ರಸ್ ಆಮ್ಲಾ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಉಂಟು ಮಾಡುತ್ತದೆ.

ಕೆಲವರಂತೂ ತೂಕವನ್ನು ಇಳಿಸಿಕೊಳ್ಳಬಹುದು ಎಂದು ನಿಂಬೆಹಣ್ಣಿನ ರಸವನ್ನು ಹೆಚ್ಚಾಗಿ ಬಳಕೆ ಮಾಡ್ತಾ ಇರ್ತಾರೆ ಆದರೆ ಹೆಚ್ಚಾಗಿ ನಿಂಬೆ ಹಣ್ಣಿನ ರಸವನ್ನು ಬಳಕೆ ಮಾಡುವುದರಿಂದ ಎದೆ ಉರಿ ಅಂತಹ ಸಮಸ್ಯೆ ಉಂಟಾಗುತ್ತದೆ. ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಉಂಟು ಮಾಡಬಹುದು ಈ ನಿಂಬೆ ಹಣ್ಣಿನ ರಸ.

ಇನ್ನೂ ಆಹಾರ ತಿಂದ ಕೂಡಲೇ ನಿಂಬೆಹಣ್ಣಿನ ರಸವನ್ನು ಕುಡಿಯುವ ಅಭ್ಯಾಸವನ್ನು ನೀವೇನದರೂ ಹೊಂದಿದ್ದರೆ ಈಗಲೇ ಅಂತಹವೊಂದು ರೂಢಿಯನ್ನ ಬಿಡುವುದು ಒಳ್ಳೆಯದು ಯಾಕೆಂದರೆ ತಿಂದ ಆಹಾರವನ್ನು ಹೆಚ್ಚು ಆಮ್ಲೀಯತೆ ಮಾಡಬಹುದು ಈ ನಿಂಬೆಹಣ್ಣಿನ ರಸ ಆದಕಾರಣ ನೀವು ಊಟ ಮಾಡಿದ ಅರ್ಧ ಗಂಟೆಯ ನಂತರ ನಿಂಬೆ ಹಣ್ಣಿನ ರಸವನ್ನು ಸೇವಿಸುವುದು ಒಳ್ಳೆಯದು. ಇದರ ಜೊತೆಗೆ ನೀವು ಕಾಫಿ ಟೀ ಕುಡಿದ ಕೂಡಲೇ ಕೂಡ ಈ ನಿಂಬೆ ಹಣ್ಣಿನ ರಸವನ್ನು ಸೇವಿಸ ಬಾರದು ಯಾಕೆಂದರೆ ಟೀ ಅಥವಾ ಕಾಫಿಯಲ್ಲಿರುವ ಆಮ್ಲೀಯತೆ ಮತ್ತು ನಿಂಬೆಹಣ್ಣಿನಲ್ಲಿರುವ ಆಮ್ಲೀಯತೆ ಎರಡೂ ಸೇರಿ ಚಯಾಪಚನ ಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ ಇದರಿಂದ ಅನಾರೋಗ್ಯ ಉಂಟಾಗಬಹುದು.

ಸ್ವಲ್ಪ ಮೆಂತೆಯನ್ನು ರಾತ್ರಿ ಮಲಗುವಾಗ ನೆನೆಸಿ ಮೊಳಕೆ ಬರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹಾಗಲಕಾಯಿಯ ಜ್ಯೂಸ್ ಕುಡಿಯುವುದು ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಇವುಗಳಲ್ಲಿ ಯಾವ ಒಂದು ಮನೆಮದ್ದನ್ನು ಬೇಕಾದರೂ ಅನುಸರಿಸಬಹುದು ಮನೆಮದ್ದುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಸಕ್ಕರೆ ಖಾಯಿಲೆ ಇರುವವರು ಪ್ರತಿದಿನ ಮೂರು ಬಾರಿ 3-4 ಹಸಿ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಒಳ್ಳೆಯದು.

ರಾತ್ರಿ ಅರ್ಧ ಕಪ್ ನೀರಿಗೆ 2 ಬೆಂಡೆಕಾಯಿಯನ್ನು ಕತ್ತರಿಸಿ ಹಾಕಿ ನೆನೆಸಿ ಬೆಳಗ್ಗೆ ಬೆಂಡೆಕಾಯಿಯನ್ನು ತೆಗೆದು ಈ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಸಕ್ಕರೆ ಖಾಯಿಲೆ ಹತೋಟಿಯಲ್ಲಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಸಕ್ಕರೆ ಖಾಯಿಲೆ ಇರುವವರು ಈ ಅಂಶಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *