ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿ. ಕ್ಯಾನ್ಸರ್ ಬಂತು ಅಂದ್ರೆ ಅದನ್ನ ಗುಣಪಡಿಸೋಕೆ ಆಗಲ್ಲ ಅಂತಾ ಹೇಳ್ತಾರೆ ಹಾಗಿದ್ದರೂ ಅದಕ್ಕಾಗಿ ಸಾಕಷ್ಟು ಖರ್ಚುಗಳನ್ನು ಕೂಡಾ ಮಾಡಬೇಕಾಗುತ್ತದೆ. ಎಲ್ಲರಿಗೂ ಹೆಚ್ಚು ಹಣವನ್ನು ಭರಿಸುವ ಶಕ್ತಿ ಇರುವುದಿಲ್ಲ ಎಷ್ಟೋ ಜನರು ಹಣ ಇಲ್ಲಾ ಎಂಬ ಒಂದು ಕಾರಣಕ್ಕೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದವರೂ ಕೂಡಾ ಇದ್ದಾರೆ. ಆದರೆ ಇನ್ನುಮುಂದೆ ಕ್ಯಾನ್ಸರ್ ರೋಗಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಸಾವನ್ನಪ್ಪುವ ಜನರ ಸಂಖ್ಯೆ ಕಡಿಮೆ ಆಗಬಹುದು. ಅದಕ್ಕಾಗಿಯೇ ಈಗ ಭಾರತದಲ್ಲೇ ಅತೀ ದೊಡ್ಡದಾದ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ.
ಹರಿಯಾಣದ ಝಜ್ಜರ್ ನಲ್ಲಿ ದೇಶದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಈ ಆಸ್ಪತ್ರೆಯನ್ನು ಪ್ರಧಾನಿ ಮೋದಿಯವರು ಕಳೆದ ವರ್ಷ ವಿಡಿಯೋ ಕಾನ್ಫರೆನ್ಸನ ಮೂಲಕ ಉದ್ಘಾಟಿಸಿದ್ದರು. ಈ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಪ್ರಸ್ತುತ 50 ಹಾಸಿಗೆಗಳ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ನಾಲ್ಕುನೂರು ಬೆಡ್ ಗಳ ಸೌಲಭ್ಯವನ್ನು ಇಲ್ಲಿ ಪ್ರಾರಂಭಿಸಲಾಗುವುದು. ಈಗಾಗಲೇ ಎಂಭತ್ತರಿಂದ ರಿಂದ ನೂರು ರೋಗಿಗಳನ್ನು ಸಂಸ್ಥೆಯ ಒಪಿಡಿಯಲ್ಲಿ ನೋಡಲಾಗುತ್ತಿದೆ. ದೆಹಲಿಯ ಏಮ್ಸ್ ನಿಂದ ರೋಗಿಗಳನ್ನು ಸಹ ಇಲ್ಲಿಗೆ ಕರೆತರಲಾಗುತ್ತಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ ಕೆ ಕೆ ರಾತ್ ತಿಳಿಸಿದ್ದಾರೆ. 2021 ರ ವೇಳೆಗೆ ಐದುನೂರು ಹಾಸಿಗೆಗಳ ಸೌಲಭ್ಯವನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಆಪರೇಷನ್ ಥಿಯೇಟರ್ ಮತ್ತು ರೇಡಿಯೊಥೆರಪಿ ಸೌಲಭ್ಯವೂ ಮಾರ್ಚ್‌ನಿಂದ ಇಲ್ಲಿ ಪ್ರಾರಂಭವಾಗಲಿದೆ.
ಝಜ್ಜರ್‌ನಲ್ಲಿ ಸ್ಥಾಪಿಸಲಾದ ದೇಶದ ಅತಿದೊಡ್ಡ ಕ್ಯಾನ್ಸರ್ ಸಂಸ್ಥೆಯಲ್ಲಿ ಪ್ರೋಟಾನ್ ಚಿಕಿತ್ಸೆಯನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಇದು ಎಂತಹ ಥೆರಪಿಯಾಗಿದೆಯೆಂದರೆ ಇದರಲ್ಲಿ ರೋಗಿಗಳ ಕ್ಯಾನ್ಸರ್‌ನ ಟ್ಯೂಮರ್ ಅಂದರೆ ಗಡ್ಡೆಗಳು ಪ್ರೋಟಾನ್ ಕಿರಣದಿಂದ ನಾಶಪಡಿಸಲಾಗುತ್ತದೆ. ಇದಕ್ಕಾಗಿ ಏಮ್ಸ್ ಅತ್ಯಾಧುನಿಕ ಮಷೀನ್ ಗಳನ್ನೂ ಸಹ ಆರ್ಡರ್ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಮಷೀನ್‌ನ ಚಿಕಿತ್ಸೆಯ ವೆಚ್ಚವು 20 ರಿಂದ 25 ಲಕ್ಷ ರೂಪಾಯಿಗಳಷ್ಟು ತಗುಲುತ್ತೆ ಆದರೆ ಇಲ್ಲಿ ಚಿಕಿತ್ಸೆಗೆ ಕೇವಲ 10 ರೂಪಾಯಿ ಮಾತ್ರ. ಕೇಳಿದರೆ ಆಶ್ಚರ್ಯ ಆಗಬಹುದು ಆದರೆ ಇದು ನಿಜ. ಈಗ ಆರಂಭ ಆಗಿರುವ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೆಚ್ಚು ಹಣವನ್ನು ಭರಿಸುವ ಅಗತ್ಯ ಇರುವುದಿಲ್ಲ. ಏಕೆಂದರೆ ಇಲ್ಲಿ ಪ್ರೋಟಾನ್ ಥೆರಪಿ ಕೇವಲ ಕ್ಯಾನ್ಸರ್ ಕೋಶಗಳನ್ನು ಮಾತ್ರ ಟಾರ್ಗೇಟ್ ಮಾಡುತ್ತದೆ. ಸುತ್ತಮುತ್ತಲಿನ ಆರೋಗ್ಯಕರ ಕೋಶಗಳಿಗೆ ಹಾನಿಯಾಗುವುದಿಲ್ಲ. ಇದು ದೇಹದ ಇತರ ಭಾಗಗಳಲ್ಲಿ ವಿಕಿರಣ ಅಡ್ಡಪರಿಣಾಮಗಳನ್ನೂ ಉಂಟುಮಾಡುವುದಿಲ್ಲ.
ಫೀಸ್ ಕೇವಲ 10 ರೂಪಾಯಿ ಎಂದರೆ ಇದು ತುಂಬಾ ಕಡಿಮೆಯೇ ಆಯಿತು ಎನ್ನಬಹುದು. ಅತ್ಯಂತ ಅಗ್ಗದ ಬೆಲೆಯಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಬಹುದು. ಝಜ್ಜರ್‌ನ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಶುಲ್ಕ ಕೇವಲ 10 ರೂಪಾಯಿ. ಅದು ಕೂಡ ಕ್ಯಾನ್ಸರ್ ಚಿಕಿತ್ಸೆಗಾಗಿ ಒಪಿಡಿ ಶುಲ್ಕವಾಗಿದೆ. ಕಳೆದ ವರ್ಷವೇ ಈ ಸಂಸ್ಥೆಯಲ್ಲಿ ಒಪಿಡಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ರೋಗಿಗಳನ್ನು ಏಮ್ಸ್ ನಿಂದ ಇಲ್ಲಿಗೆ ರೆಫರ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈಗ ಹೊಸದಾಗಿ ಆರಂಭವಾದ ಈ ಕ್ಯಾನ್ಸರ್ ಆಸ್ಪತ್ರೆ ಎಲ್ಲಾ ರೀತಿಯ ಕುಟುಂಬದ ವ್ಯಕ್ತಿಗಳಿಗೂ ಸಹ ಅತ್ಯಂತ ಉಪಕಾರಿ ಎಂದೇ ಹೇಳಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.