ಈಗ ಆಧಾರ್‌ ತಿದ್ದುಪಡಿಯನ್ನು ನೀವೇ ಆನ್‌ಲೈನ್‌ನಲ್ಲಿ ಮಾಡಬಹುದು. ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ. ಇನ್ಮುಂದೆ ನೀವು ನಿಮ್ಮ ಆಧಾರ್‌ ತಿದ್ದುಪಡಿಯನ್ನು ಆನ್‌ಲೈನ್‌ನಲ್ಲಿ ಕೂಡ ಮಾಡಬಹುದಾಗಿದೆ. ಪ್ರಸ್ತುತ ಎಲ್ಲಾ ಕೆಲಸಗಳಿಗೆ ಇಂದು ಆಧಾರ್‌ ಕಾರ್ಡ್‌ ಅಗತ್ಯವಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್‌ ಕಾರ್ಡ್‌ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಸರಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ.

ಆದರೆ ಆಧಾರ್ ಕಾರ್ಡ್ ಅರ್ಜಿ ತುಂಬುವ ಸಂದರ್ಭದಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮದಿನಾಂಕ, ಮೊಬೈಲ್ ನಂಬರ್ ಇತ್ಯಾದಿ ತಪ್ಪುಗಳಿದ್ದಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲೇಬೇಕಾಗುತ್ತದೆ. ಇಂತ ಸಂದರ್ಭಗಳಲ್ಲಿ ನೀವು ಆಧಾರ್‌ ಸೇವಾ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಆದರೆ ಇನ್ಮುಂದೆ ನೀವು ನಿಮ್ಮ ಆಧಾರ್‌ ತಿದ್ದುಪಡಿಯನ್ನು ಆನ್‌ಲೈನ್‌ನಲ್ಲಿ ಕೂಡ ಮಾಡಬಹುದಾಗಿದೆ. ಆಧಾರ್‌ ಕಾರ್ಡ್‌ನಲ್ಲಿರುವ ನಿಮ್ಮ ಹೆಸರು, ಹುಟ್ಟಿದ ದಿನಾಂಕವನ್ನು ಆನ್‌ಲೈನ್‌ನಲ್ಲಿ ಆಪ್ಡೇಟ್‌ ಮಾಡುವುದು ಹೇಗೆ? ಎಂದು ನೋಡುವುದಾದರೆ ಮೊದಲು ನೀವು ಆಧಾರ್ ಕಾರ್ಡ್ uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಅಪ್ಡೇಟ್ ಡೆಮೊಗ್ರಾಫಿಕ್ ಡೇಟಾವನ್ನು ಕ್ಲಿಕ್ ಮಾಡಿ ‘ಪ್ರೊಸಿಡ್‌ ಟು ಅಪ್ಡೇಟ್ ಬೇಸ್’ ಆಯ್ಕೆಮಾಡಿ. ಪರಿಶೀಲಿಸಲು, ಒಬ್ಬ ವ್ಯಕ್ತಿ ಅವನ / ಅವಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಅದನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

‘ಅಪ್ಡೇಟ್ ಡಾಮೋಗ್ರಾಫಿಕ್ ಡೇಟಾ’ ಆಯ್ಕೆಯನ್ನು ಆರಿಸಿದ ನಂತರ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಭಾಷೆ, ಲಿಂಗ ಮತ್ತು ಇಮೇಲ್ ಮುಂತಾದ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ನೀವು ನವೀಕರಿಸಲು ಬಯಸುವ ಆಯ್ಕೆಯನ್ನು ಆರಿಸಿ ಬದಲಾಯಿಸಿ. ಈ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಐಡಿ ಅನ್ನು ವಿಳಾಸ ಪುರಾವೆಯಾಗಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದನ್ನು ಯಾವುದೇ ಸ್ವರೂಪದಲ್ಲಿ ಪಿಡಿಎಫ್, ಜೆಪಿಇಜಿ ಅಥವಾ ಪಿಎನ್‌ಜಿಯಲ್ಲಿ ಅಪ್‌ಲೋಡ್ ಮಾಡಬಹುದು. ಆನ್‌ಲೈನ್ ನಲ್ಲಿ 50 ರೂಪಾಯಿ ಹಣವನ್ನು ಪಾವತಿಸಲು ನಿಮ್ಮನ್ನು ಕೇಳಲಾಗುತ್ತದೆ, ಇದನ್ನು ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮಾಡಬಹುದು. ಇದರ ನಂತರ, ಪಾವತಿ ಯಶಸ್ವಿಯಾದ ಕೂಡಲೇ ಯುಆರ್‌ಎನ್ ಕೋಡ್ ಅನ್ನು ದೃಡೀಕರಣದೊಂದಿಗೆ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಕೋಡ್ ಮೂಲಕ ನವೀಕರಣದ ಪ್ರಕ್ರಿಯೆಯನ್ನು ನಂತರ ಟ್ರ್ಯಾಕ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *