ಇತ್ತೀಚಿನ ದಿನಗಳಲ್ಲಿ ಬದಲಾದ ದಿನಗಳಲ್ಲಿ ಹೈ ಬಿಪಿ ಮತ್ತು ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗೆ ಪರಿಹಾರಕ್ಕೆ ಆಸ್ಪತ್ರೆಗೆ ಹೋಗುತ್ತೇವೆ ಮತ್ತು ಸಾಕಾಗುವಷ್ಟು ಇಂಗ್ಲಿಷ್ ಮೆಡಿಸನ್ ಗಳನ್ನೂ ತೆಗೆದುಕೊಂಡರು ಕೆಲವೊಮ್ಮೆ ಸರಿಹೋಗುವುದಿಲ್ಲ. ಅದಕ್ಕೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಅದಕ್ಕಾಗಿ ಕೆಲವು ನಿಮ್ಮ ಮನೆಯಲ್ಲಿ ಇವೆ ಮದ್ದುಗಳು. ಲೋ ಬಿಪಿ ಸಮಸ್ಯೆ ಬರಲು ಹಲವಾರು ಕಾರಣಗಳಿವೆ ಅವುಗಳಲ್ಲಿ ಇದು ಕೂಡ ಒಂದು ದೇಹದಲ್ಲಿ ಪೋಷಕಾಂಶಗಳ ಕೊರತೆ ಇರುವುದರಿಂದ ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ.
ಲೋ ಬಿಪಿ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲಿ ಇವೆ. ಅವುಗಳೆಂದರೆ ಇಲ್ಲಿವೆ ನೋಡಿ: ಪ್ರತಿದಿನ ಪೋಷಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡುವುದರ ಜೊತೆಗೆ ನಿತ್ಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಹೆಚ್ಚುತ್ತದೆ ಹಾಗೂ ಇದರಿಂದ ದೇಹದ ಅರೋಗ್ಯ ಕೂಡ ವೃದ್ಧಿಯಾಗುವುದು. ಊಟದಲ್ಲಿ ಉಪ್ಪು ಸೇವನೆ ಸ್ವಲ್ಪ ಜಾಸ್ತಿ ಮಾಡುವುದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುವುದು. ಆದರೆ, ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆಗೂ ಮುನ್ನ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ದೇಹಕ್ಕೆ ನೀರಿನಂಶ ಹೆಚ್ಚಾಗಿ ಅಗತ್ಯವಾಗಿದೆ ಆಗಾಗಿ ಪ್ರತಿದಿನ ಹೆಚ್ಚು ನೀರು ಸೇವನೆ ಮಾಡುವುದರಿಂದ ಒಳ್ಳೆಯದು ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ನೀರು ಕುಡಿಯುವುದು ಅಗತ್ಯವಾಗಿದೆ. ಪ್ರತಿದಿನ ಎರಡು ಬಾರಿ ಹಸಿ ಬೀಟ್‌ರೂಟ್ ಜ್ಯೂಸ್ ಕುಡಿಯಿರಿ. ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಇದು ಉತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಇನ್ನು, ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿದರೂ ಸಹ ಸಹಾಯವಾಗಬಹುದು. ಬಾದಾಮಿ ಪೇಸ್ಟ್ ಮಾಡಿಕೊಂಡು ಉಗುರು ಬೆಚ್ಚಗಿನ ಹಾಲಿನೊಂದಿಗೆ ಕುಡಿದರೂ ಸಹಾಯವಾಗುತ್ತದೆ ಎಂದು ಸಹ ಕೆಲವರು ಸಲಹೆ ನೀಡುತ್ತಾರೆ.
ಪ್ರತಿದಿನ ಒಳ್ಳೆಯ ಪೋಷಕಾಂಶ ಭರಿತವಾದ ಊಟವನ್ನು ಮಾಡುವುದರ ಜತೆಗೆ ನಿಮ್ಮ ದಿನನಿತ್ಯ ಚಟುವಟಿಕೆಯಲ್ಲಿ ಸ್ವಲ್ಪ ವ್ಯಾಯಾಮವನ್ನೂ ಅಳವಡಿಸಿಕೊಳ್ಳಿ ಇದರಿಂದ ಲೋ ಬಿಪಿ ನಿವಾರಣೆಯಾಗಿ ದೇಹದಲ್ಲಿ ಉತ್ತಮ ಅರೋಗ್ಯ ವೃದ್ಧಿಗೆ ಕೂಡ ಸಹಕಾರಿಯಾಗಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.