ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡಿ ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ ಈ ಒಂದು ಮನೆಮದ್ದು ಮೊದಲಿಗೆ ಐದು ಸೀಬೆ ಎಲೆ ಹಾಗೂ ಎರಡು ಈರುಳ್ಳಿಯನ್ನೂ ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ತದನಂತರ ಇವೆರಡನ್ನೂ ಕೂಡ ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಇವೆರಡನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಮೆಂತೆಯನ್ನು ಹಾಕಿ ಅದನ್ನು ಕೂಡ ಪೇಸ್ಟ್ ಮಾಡಿಕೊಳ್ಳಿ
ಈಗ ಇವೆರಡು ಮಿಶ್ರಣವನ್ನು ಕೂಡ ಮಿಕ್ಸ್ ಮಾಡಿಕೊಳ್ಳಿ. ಒಂದು ಪಾತ್ರೆಗೆ 50 ಗ್ರಾಂ ಕೊಬ್ಬರಿ ಎಣ್ಣೆಯನ್ನು ಹಾಕಿ ಎಣ್ಣೆಯ ಬಿಸಿ ಆದ ನಂತರ ಮೊದಲೇ ರುಬ್ಬಿಕೊಂಡಿರುವಂತಹ ಮಿಶ್ರಣವನ್ನು ಅದಕ್ಕೆ ಹಾಕಿ ನಿಧಾನವಾಗಿ ಹುರಿಯಲ್ಲಿ ಹತ್ತು ನಿಮಿಷಗಳ ಕಾಲ ಎಣ್ಣೆಯಲ್ಲಿ ಕುದಿಯಲು ಬಿಡಬೇಕು ಈ ಎಣ್ಣೆಯಲ್ಲಿ ಈರುಳ್ಳಿ, ಸೀಬೆ ಎಲೆ ಮತ್ತು ಮೆಂತ್ಯೆ ಈ ಮೂರು ಮಿಶ್ರಣಗಳು ಕೂಡ ಚೆನ್ನಾಗಿ ರಸ ಬಿಟ್ಟುಕೊಳ್ಳಬೇಕು.
ತದನಂತರ ಗ್ಯಾಸ್ ಆಫ್ ಮಾಡಿ ಇದನ್ನು ತಣ್ಣಗಾಗಲು ಬಿಡಬೇಕು ಈ ಮಿಶ್ರಣವನ್ನು ಒಂದು ಸ್ಟ್ರೈನರ್ ಮೂಲಕ ಶೋಧಿಸಿಕೊಳ್ಳಬೇಕು. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಹಚ್ಚಬೇಕು ಈ ಎಣ್ಣೆ ಹಚ್ಚಿದ ಎರಡು ಗಂಟೆ ನಂತರ ತಲೆಸ್ನಾನ ಮಾಡಿಕೊಳ್ಳಬಹುದು. ಅಥವಾ ರಾತ್ರಿಯ ಸಮಯ ಎಣ್ಣೆಯನ್ನು ತಲೆಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಗೂ ತಲೆಯಲ್ಲಿ ಒಟ್ಟು, ಬಿಳಿ ಕೂದಲು, ಕೂದಲು ಉದುರುವುದು ಇನ್ನು ಮುಂತಾದ ಹಲವಾರು ರೀತಿಯ ಕಾಯಿಲೆಗಳು ನಿವಾರಣೆಯಾಗುತ್ತದೆ. ಈ ಎಣ್ಣೆಯನ್ನು ನೀವು ಮೂರು ತಿಂಗಳುಗಳ ಕಾಲ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.