ದೇಹದ ತೂಕವನ್ನು ಕಡಿಮೆ ಮಾಡುವಂತಹ ಅದ್ಭುತವಾದಂತಹ ಮನೆಮದ್ದು ಸಾಮಾನ್ಯವಾಗಿ ಹೆಚ್ಚಾಗಿರುವ ದೇಹದ ತೂಕವನ್ನು ಕಡಿಮೆ ಮಾಡಬೇಕು ಅಂತ ವ್ಯಾಯಾಮಗಳನ್ನು ಮಾಡುವುದು, ಡಯಟ್ ಗಳನ್ನು ಫಾಲೋ ಮಾಡುವುದು ಅಥವಾ ಊಟ ಬಿಡುವುದು, ಇನ್ನಿತರ ಪ್ರಕ್ರಿಯೆಗಳನ್ನು ನೀವು ಅನುಸರಣೆ ಮಾಡುತ್ತೀರಾ. ಆದರೆ ಇಂದು ನಾನು ಸುಲಭವಾದಂತಹ ಮನೆ ಮದ್ದಿನಿಂದ ಹೇಗೆ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು ಮತ್ತು ದೇಹದ ತೂಕವನ್ನು ಹೇಗೆ

ಕಳೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ನುಗ್ಗೆಸೊಪ್ಪು, ನಿಂಬೆಹಣ್ಣು, ಜೇನುತುಪ್ಪ ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ಮನೆಮದ್ದು ಸಿದ್ದವಾಗುತ್ತದೆ. ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಸ್ವಲ್ಪ ನುಗ್ಗೆಸೊಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ.

ನುಣ್ಣಗೆ ರುಬ್ಬಿಕೊಳ್ಳಬೇಕು ನಂತರ ಈ ಒಂದು ಮಿಶ್ರಣವನ್ನು ಒಂದು ಗ್ಲಾಸ್ ಗೆ ಸ್ಟ್ರೈನರ್ ಮೂಲಕ ಶೋಧಿಸಿಕೊಳ್ಳಬೇಕು. ನಂತರ ಈ ನುಗ್ಗೆಸೊಪ್ಪಿನ ಜ್ಯೂಸ್ ಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ

ಹಾಗೂ ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನುಗ್ಗೆಸೊಪ್ಪಿನ ರಸ ಕುಡಿಯಲು ಸ್ವಲ್ಪ ಕಹಿಯಾಗಿರುತ್ತದೆ

ಆದರೆ ಇದು ಆರೋಗ್ಯಕ್ಕೆ ಬಹಳ ಉಪಯುಕ್ತ ಅದರಲ್ಲೂ ಕೂಡ ದೇಹದ ತೂಕ ಕಡಿಮೆ ಮಾಡುವುದರಲ್ಲಿ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ‌‌. ಸೊಪ್ಪಿನಲ್ಲಿ ಹಲವಾರು ರೀತಿಯ ಫೈಬರ್ ಮತ್ತು ವಿಟಮಿನ್ ಅಂಶ ಹೆಚ್ಚಾಗಿರುತ್ತದೆ ಅಷ್ಟೇ ಅಲ್ಲದೆ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಇದು ಉಪಯುಕ್ತವಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *