ಯಾವುದೇ ಕಾರಣಕ್ಕೂ ಇಂತಹ ಆಹಾರ ಪದ್ಧತಿಯನ್ನು ಒಟ್ಟಾಗಿ ಸೇವಿಸಬೇಡಿ ಮನುಷ್ಯನು ಪ್ರತಿನಿತ್ಯ ಕಷ್ಟಪಟ್ಟು ದುಡಿಯುವುದು ಆತನ ಒಂದು ಹೊತ್ತಿನ ಆಹಾರಕ್ಕಾಗಿ ಕೆಲವೊಮ್ಮೆ ಆಹಾರ ಪದಾರ್ಥಗಳನ್ನು ಮತ್ತೊಂದು ಆಹಾರದ ಒಟ್ಟಿಗೆ ಸೇರಿಸಿ ಸೇವಿಸಿದರೆ ರುಚಿಯಾಗಿರುತ್ತದೆ
ಎಂಬ ಕಾರಣಕ್ಕೆ ಬಹಳಷ್ಟು ಆಹಾರಗಳನ್ನು ನಾವು ಹೀಗೆ ಮಿಕ್ಸ್ ಮಾಡಿಕೊಂಡು ತಿನ್ನುತ್ತೇವೆ. ಫ್ರೂಟ್ ಸಲಾಡ್, ತರಕಾರಿಗಳನ್ನು ತಿನ್ನುವುದು ಹೀಗೆ ಮಡುತ್ತೆವೆ ಒದು ಕೆಲವೊಮ್ಮೆ ಆರೋಗ್ಯಕ್ಕೆ ಪೂರಕವಾಗಿ ಇರುತ್ತದೆ. ಆದರೆ ಇನ್ನು ಕೆಲವೊಮ್ಮೆ ಇಂತಹ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಅಂತಹ ಆಹಾರ ಪದ್ಧತಿಗಳು ಯಾವುದು ಎಂಬುದನ್ನು ಇಂದು ನಿಮಗೆ ತಿಳಿಸುತ್ತೇವೆ
ಈ ರೀತಿಯ ಆಹಾರ ಪದ್ಧತಿಯನ್ನು ನೀವು ಅನುಸರಣೆ ಮಾಡಿದರೆ ಜೀರ್ಣಕ್ರಿಯೆ ಸಮಸ್ಯೆ, ಚರ್ಮ ಸಮಸ್ಯೆ, ಅಸಿಡಿಟಿ ಹೊಟ್ಟೆ ಉಬ್ಬರ ಇನ್ನೂ ಮುಂತಾದ ಸಮಸ್ಯೆಗಳು ನಿರ್ಮಾಣವಾಗುತ್ತದೆ.
ಸಾಮಾನ್ಯವಾಗಿ ನಮಗೆ ತಿಳಿದಿದೆ ಹಾಲಿಗೆ ನಿಂಬೆಹಣ್ಣು ಹಾಕಿದರೆ ಹಾಲು ಒಡೆದು ಹೋಗುತ್ತದೆ ಅಂತ ಹಾಗಾಗಿ ನಾವು ಯಾವುದೇ ಕಾರಣಕ್ಕೂ ಕೂಡ ಹಾಲು ಸೇವಿಸಿದರೆ ನಂತರ ನಿಂಬೆ ಹಣ್ಣಿನ ಬಳಕೆಯನ್ನು ಮಾಡಬಾರದು
ಹೀಗೆ ಮಾಡಿದರೆ ಹೊಟ್ಟೆ ನೋವು ತಲೆನೋವು ಮುಂತಾದ ಸಮಸ್ಯೆ ಕಂಡು ಬರುತ್ತದೆ. ಇನ್ನೂ ಕೆಲವರು ಹಾಲಿನ ಜೊತೆ ಸಾಲ್ಟ್ ಬಿಸ್ಕೆಟ್ಸ್ ಗಳನ್ನು ಸೇವಿಸುತ್ತಾರೆ ಹಾಲಿನಲ್ಲಿ ಸಿಹಿ ಪದಾರ್ಥಗಳನ್ನು ಮಾತ್ರ ಸೇವಿಸಬೇಕು ಉಪ್ಪು, ಹುಳಿ, ಖಾರ ಇಂತಹ ಪದಾರ್ಥಗಳನ್ನು ಸೇವಿಸಬಾರದು ಹೀಗೆ ಹಾಲಿನ ಜೊತೆ ಸೇವಿಸಿದರೆ ಅದು ನಿಮ್ಮ ಹೊಟ್ಟೆಯಲ್ಲಿ ಫುಡ್ ಪಾಯಿಸನ್ ಮಾಡುತ್ತದೆ. ಹಾಗೂ ಹಾಲಿನ ಜೊತೆ ಮೊಟ್ಟೆ ಮತ್ತು
ಮಾಂಸಾಹಾರವನ್ನು ಸೇವಿಸಬಾರದು ಏಕೆಂದರೆ ಹಾಲು ಮತ್ತು ಮೊಟ್ಟೆ ಮಾಂಸ ಎಲ್ಲದರಲ್ಲೂ ಕೂಡ ಹೇರಳವಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇರುತ್ತದೆ ಇದನ್ನು ಒಂದೇ ಬಾರಿಗೆ ಸೇವಿಸಿದಾಗ ಅದು ನಿಮ್ಮ ಹೊಟ್ಟೆಯ ಮೇಲೆ ಪ್ರಭಾವ ಬೀರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.