ಕಾಲುಗಳಲ್ಲಿ ಉಂಟಾಗುವ ಸೆಳೆತ ಮತ್ತು ನರಗಳ ನೋವು ಈ ರೀತಿಯಾದಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ಸಾಮಾನ್ಯವಾಗಿ ಬರುತ್ತಿದೆ. ಹಾಗಾಗಿ ಇಂತಹ ನರಗಳ ನೋವನ್ನು ಕಡಿಮೆ ಮಾಡುವ ಮತ್ತು ಮನೆಮದ್ದಿನ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.
ಮೊದಲಿಗೆ ಎರಡು ವೀಳೆಯದೆಲೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು ತದನಂತರ ವಿಳೆದೆಲೆ ಮೇಲೆ ಇರುವಂತಹ ತೊಟ್ಟು ಮತ್ತು ತುದಿ ಈ ಎರಡನ್ನೂ ಕೂಡ ತೆಗೆಯಬೇಕು. ವಿಳೆದೆಲೆಯಲ್ಲಿ ರೋಗನಿರೋಧಕ ಶಕ್ತಿಗಳು ಹೇರಳವಾಗಿದೆ ಅಷ್ಟೇ ಅಲ್ಲದೆ ದೇಹಕ್ಕೆ ಬೇಕಾಗುವಂತಹ ಅಗತ್ಯವಾದ ಕ್ಯಾಲ್ಸಿಯಂ ಅಂಶವನ್ನು ಇದು ಒದಗಿಸುತ್ತದೆ. ತದನಂತರ ಒಂದು ಹಾಗಲಕಾಯಿಯನ್ನು ತೆಗೆದುಕೊಳ್ಳಬೇಕು. ಈ ಒಂದು ಹಸಿ ಹಾಗಲಕಾಯಿ ಒಳಗೆ ಇರುವಂತಹ ಬೀಜಗಳನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಬೇಕು.
ಹಾಗಲಕಾಯಿ ಕಹಿಯಾಗಿದ್ದರೂ ಕೂಡ ಅದು ಆರೋಗ್ಯಕ್ಕೆ ಉಪಯುಕ್ತ ಕಾರ್ಯಗಳನ್ನು ಮಾಡುತ್ತದೆ. ಈಗ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಅದಕ್ಕೆ ಎರಡು ವೀಳೆಯದೆಲೆಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ತದನಂತರ
ಹಾಗಲಕಾಯಿ ಬೀಜಗಳನ್ನು ಹಾಕಿ ಇವೆರಡನ್ನು ಕೂಡ ಚೆನ್ನಾಗಿ ಕುದಿಸಿಕೊಳ್ಳಬೇಕು. ಒಂದು ಗ್ಲಾಸ್ ನೀರು ಅರ್ಧ ಗ್ಲಾಸ್ ನೀರು ಆಗುವ ತನಕ ಈ ನೀರು ಕುದಿಸಿಕೊಳ್ಳಬೇಕು. ತದನಂತರ ಇದನ್ನು ಪ್ರತಿನಿತ್ಯ ಈ ಮಿಶ್ರಣವನ್ನು ಮೂರು ಬಾರಿ ಸೇವಿಸಬೇಕಾಗುತ್ತದೆ.
ಪ್ರತಿನಿತ್ಯ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಹಾಗೂ ರಾತ್ರಿಯ ಊಟ ಆದ ನಂತರ ಈ ಒಂದು ಮಿಶ್ರಣವನ್ನು ಸೇವಿಸಬೇಕಾಗುತ್ತದೆ. ಒಂದು ವಾರ ಹೀಗೆ ಮಾಡಿದರೆ ನರಗಳ ಸೆಳೆತ ಹಾಗೂ ಕಾಲುಗಳಲ್ಲಿ ನೋವು ಕಡಿಮೆಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.