ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಹೇನುಗಳ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುತ್ತಾರೆ. ನಮ್ಮ ತಲೆಯಲ್ಲಿ ಒಂದು ಹೇನು ಇದ್ದರೂ ಸಹ ಅದು ತುಂಬಾ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಇದರಿಂದ ಎಲ್ಲರಿಗೂ ಕೂದಲು ಇಲ್ಲದಿದ್ದರೇ ಒಳ್ಳೆಯದು ಎನಿಸಿರುತ್ತದೆ. ಇದರಿಂದ ತಲೆ ಕೆರೆತಗಳಂತಹ ಸಮಸ್ಯೆಗಳು ಬರುತ್ತವೆ. ಒಬ್ಬರ ತಲೆಯಿಂದ ಮತ್ತೊಬ್ಬರ ತಲೆಗೆ ಹೇನುಗಳು ಹೋಗುತ್ತಿರುತ್ತವೆ. ತಾಯಿಯ ತಲೆಯಿಂದ ಮಕ್ಕಳ ತಲೆಗೆ ಅಥವಾ ಮಕ್ಕಳ ತಲೆಯಿಂದ ತಾಯಿಯ ತಲೆಗೆ ಹೇನುಗಳು ಹರಡುತ್ತ ಹೆಚ್ಚಾಗುತ್ತವೆ.
ಈ ಹೇನುಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಆಯುರ್ವೇದವನ್ನು ಫಾಲೋ ಮಾಡಿದರೆ ಸಾಕು. ಮುಖ್ಯವಾಗಿ ಈ ಟಿಪ್ ಅನ್ನು ಅನ್ವಯ ಮಾಡಿದರೆ ನಿಮ್ಮ ತಲೆಯಲ್ಲಿ ಇರುವಂತಹ ಹೇನು, ಸೀರು ಹಾಗೂ ಫಂಗಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಈ ರೆಮಿಡಿ ಗೆ ಮುಖ್ಯವಾಗಿ ಬೇಕಾಗಿರುವುದು ಬೆಳ್ಳುಳ್ಳಿ,, ನಾಲ್ಕರಿಂದ ಐದು ಸೀಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ನಂತರ ಅದನ್ನು ಚೆನ್ನಾಗಿ ಮಿಕ್ಸಿಯಲ್ಲಿ ಅಥವಾ ಕಲ್ಲಿನಿಂದ ಕುಟ್ಟಿ ನುಣ್ಣಗೆ ಮಾಡಿಕೊಳ್ಳಿ.
ಈ ಬೆಳ್ಳುಳ್ಳಿ ಇಂದ ಬರುವ ಘಟ್ಟದ ವಾಸನೆ ಹೇನುಗಳಿಗೆ ಇಷ್ಟವಾಗುವುದಿಲ್ಲ. ಈ ಬೆಳ್ಳುಳ್ಳಿಯ ವಾಸನೆಯಿಂದ ಹೇನುಗಳಿಗೆ ಇರಿಟೇಶನ್ ಉಂಟಾಗುತ್ತದೆ. ಆದ್ದರಿಂದ ಪುರಾತನ ಕಾಲದಿಂದಲೂ ಸಹ ಈ ಬೆಳ್ಳುಳ್ಳಿಯನ್ನು ಬಳಸಿ ಹೇನುಳಿಂದ ಮುಕ್ತಿಯನ್ನು ಹೊಂದುತ್ತಿದ್ದರು. ಅಷ್ಟೇ ಅಲ್ಲದೆ ಬೆಳ್ಳುಳ್ಳಿ ನಮ್ಮ ತಲೆ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನೀವು ಜಜ್ಜಿರುವಂತಹ ಬೆಳ್ಳುಳ್ಳಿಯನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಅರ್ಧದಷ್ಟು ನಿಂಬೆಯ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
ನಿಂಬೆಯ ರಸವನ್ನು ಯಾವುದೇ ಒಂದು ಪದಾರ್ಥದೊಂದಿಗೆ ಮಿಕ್ಸ್ ಮಾಡಿ ಹಾಕುವುದರಿಂದ ಬಿಳಿ ಕೂದಲು ಬರುವುದಿಲ್ಲ. ನಿಂಬೆರಸ ಡ್ಯಾಂಡ್ರಫ್ ಹಾಗೂ ತಲೆಯಲ್ಲಿರುವ ಹೇನಿನ ಸೀರನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ. ಸ್ನಾನ ಮಾಡಿದ ನಂತರ ನಿಮ್ಮ ಕೂದಲು ಚೆನ್ನಾಗಿ ಒಣಗಿದ ಸಮಯದಲ್ಲಿ ನೀವು, ಬೆಳ್ಳುಳ್ಳಿ ಮತ್ತು ನಿಂಬೆ ಹಣ್ಣನ್ನು ಮಿಶ್ರಣ ಮಾಡಿ ರೆಡಿ ಮಾಡಿಕೊಂಡಿರುವ ಮಿಶ್ರಣವನ್ನು ಹಚ್ಚಬೇಕು. ಇದನ್ನು ಅಪ್ಲೈ ಮಾಡಿದ ನಂತರ ಒಂದು ಅಥವಾ ಎರಡು ಗಂಟೆಯ ಕಾಲ ಹಾಗೆ ಬಿಡಬೇಕು. ಆನಂತರ ಯಾವುದೇ ಶಾಂಪು ಅಥವಾ ಲೋಶನ್ ಗಳನ್ನು ಹಚ್ಚದೆ, ಬರೀ ಬಿಸಿನೀರಿನಿಂದ ಸ್ನಾನ ಮಾಡಬೇಕು ಅಥವಾ ತಲೆಯನ್ನು ಕ್ಲೀನ್ ಮಾಡಬೇಕು. ಇದರಿಂದ ನಿಮ್ಮ ತಲೆಯಲ್ಲಿರುವ ಹೇನು ಅಥವಾ ಅದರ ಮೊಟ್ಟೆಗಳಿಂದ ನಿವಾರಣೆ ಹೊಂದಬಹುದು. ಆನಂತರ ರಾತ್ರಿಯ ಸಮಯದಲ್ಲಿ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಬೇಕು.
ಇದನ್ನು ಹಚ್ಚಿದ ಮೊದಲ ಸಲವೇ ಒಳ್ಳೆಯ ರಿಸಲ್ಟ್ ಕಾಣುತ್ತೀರಾ. ಹೀಗೆ ಇದನ್ನು ವಾರಕ್ಕೆ ಎರಡು ಬಾರಿ ಮಾಡುತ್ತಾ ಹೋದರೆ ನಿಮ್ಮ ತಲೆಯಲ್ಲಿರುವ ಹೇನು ಮತ್ತು ಸೀರುಗಳು ಸಂಪೂರ್ಣವಾಗಿ ಸ’ತ್ತು ಈ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.