WhatsApp Group Join Now

ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳನ್ನು ಅಥವಾ ನೆರಿಗೆಗಳನ್ನು ಹೇಗೆ ದೂರ ಮಾಡಿಕೊಳ್ಳುವುದು ಅಂತ. ಹೌದು ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳು ಇದ್ದರೆ ಕಣ್ಣಿನ ಅಂದವನ್ನು ಕಡಿಮೆ ಮಾಡಿಬಿಡುತ್ತದೆ, ಹೇಗೆ ಮುಖಕ್ಕೆ ಕಣ್ಣು ಅಂದವೋ ಅದೇ ರೀತಿ ಈ ಕಣ್ಣಿನ ಕೆಳಗೆ ಏನಾದರೂ ಕಪ್ಪು ಕಲೆಗಳು ಇದ್ದರೆ ಅದು ಕಣ್ಣಿನ ಅಂದವನ್ನು ಹಾಳು ಮಾಡಿಬಿಡುತ್ತದೆ.

ಸುಂದರವಾದ ಜಗತ್ತನ್ನು ನೋಡುವ ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಅವಶ್ಯಕವಾಗಿರುತ್ತದೆ. ಕಣ್ಣಿನ ಸುತ್ತ ಇರುವ ಈ ಕಪ್ಪು ಕಲೆಗಳನ್ನಾಗಲ್ಲಿ ಅಥವಾ ನೆರಿಗೆಗಳನ್ನಾಗಲ್ಲಿ ಸುಲಭವಾಗಿ ತೆಗೆದುಹಾಕು ವಂತಹ ಒಂದು ಸುಲಭವಾದ ಮನೆಮದ್ದು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಮೂರು ಪದಾರ್ಥ ಮಾತ್ರ ಅದು ಕೂಡ ನಿಮಗೆ ಸುಲಭವಾಗಿ ಮನೆಯಲ್ಲಿಯೇ ದೊರೆಯುವ ಪದಾರ್ಥಗಳು ಆಗಿರುತ್ತದೆ.

ಮೊದಲನೆಯದಾಗಿ ಬೇಕಾಗಿರುವಂತಹ ಪದಾರ್ಥ ಅಂದರೆ ಆಲೂಗೆಡ್ಡೆ, ಈ ಆಲೂಗಡ್ಡೆಯಲ್ಲಿ ಉತ್ತಮ ಪೋಷಕಾಂಶ ಇರುತ್ತದೆ. ಇತರೆ ಜಿಗುಟುತನ, ಕಣ್ಣಿನ ಕೆಳಗೆ ಇರುವ ಕಪ್ಪು ಕಲೆಗಳನ್ನು, ನೆರಿಗೆಯನ್ನು ದೂರಮಾಡುತ್ತದೆ, ಹಾಗೆ ಎರಡನೆಯದಾಗಿ ಬೇಕಾಗಿರುವಂತಹ ಪದಾರ್ಥ ಅದು ಪುದೀನಾ ಸೊಪ್ಪು, ಈ ಪುದೀನಾ ಸೊಪ್ಪು ಆರೋಗ್ಯಕ್ಕೂ ಕೂಡ ಉತ್ತಮ ಮತ್ತು ತ್ವಚೆಯ ಅಂದವನ್ನು ಹೆಚ್ಚಿಸುವುದರಲ್ಲಿ ಇದು ಬಹಳ ಉಪಯೋಗಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶವೂ ತ್ವಚೆಯ ಭಾಗವನ್ನು ಬೆಳ್ಳಗೆ ಮಾಡಿ, ಕಪ್ಪು ಕಲೆಯನ್ನು ದೂರಮಾಡುತ್ತದೆ.

ಇನ್ನು ಮೂರನೆಯದಾಗಿ ಬೇಕಾಗಿರುವಂತಹ ಪದಾರ್ಥ ಅದು ಲೋಳೆರಸ, ಲೋಳೆರಸದ ಬಗ್ಗೆ ಗೊತ್ತೇ ಇದೆ, ಇದು ತ್ವಚೆಯನ್ನು ಎಷ್ಟು ಚೆನ್ನಾಗಿ ಪೋಷಣೆ ಮಾಡುತ್ತದೆ ಅಂದರೆ ತ್ವಚೆಯನ್ನು ಆಕರ್ಷಣೀಯವಾಗಿ ಮಾಡುತ್ತದೆ, ಅಂದಹಾಗೆ ಆದಷ್ಟು ನೈಸರ್ಗಿಕವಾದ ರಸವನ್ನು ತೆಗೆದುಕೊಳ್ಳಿ, ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ರಸದಲ್ಲಿ ಕೆಲವೊಂದು ಪದಾರ್ಥವನ್ನು ಬಳಸಲಾಗಿರುತ್ತದೆ ಅದು ಕಣ್ಣಿನ ಆರೋಗ್ಯವನ್ನು ಕ್ಷೀಣಿಸಬಹುದು. ಆದ್ದರಿಂದ ನೈಸರ್ಗಿಕವಾದ ಲೋಳೆರಸವನ್ನು ತೆಗೆದುಕೊಳ್ಳುವುದು ಉತ್ತಮ.

ಒಂದು ಚಮಚ ಆಲೂಗಡ್ಡೆ ರಸವನ್ನು ತೆಗೆದುಕೊಳ್ಳಿ, ನಂತರ ಇದಕ್ಕೆ ಒಂದು ಚಮಚ ಪುದೀನಾ ಸೊಪ್ಪಿನ ರಸವನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಕೊನೆಗೆ ಲೋಳೆರಸದ ರಸವನ್ನು ತೆಗೆದುಕೊಂಡು ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿ ಮಲಗಿ, ನೀವು ಇದನ್ನು ಪ್ರತಿದಿನ ಮಾಡುತ್ತಾ ಬನ್ನಿ ಕಣ್ಣಿನ ಕೆಳಗೆ ಇರುವ ನೆರಿಗೆಗಳು ಮತ್ತು ಕಪ್ಪು ಕಲೆ ಎಷ್ಟು ಬೇಗನೆ ನಿವಾರಣೆಯಾಗುತ್ತದೆ ಅಂತ ನಿಮಗೆ ತಿಳಿಯುತ್ತದೆ‌.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *