ಬಂಜೆತನ ಇದೀಗ ತೀರ ಸಾಮಾನ್ಯ ಸಮಸ್ಯೆ. ಆದ್ರೆ ಇವತ್ತಿಗೂ ಅದರ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಹಾಗೆ ಉಳಿದು ಹೋಗಿವೆ. ದಂಪತಿಗಳು ಸ್ವಾಭಾವಿಕವಾಗಿ ಸಂತಾನ ಪಡೆಯಲು ವಿಫಲವಾಗುವ ಸ್ಥಿತಿಯೇ ಬಂಜೆತನ. ಪುರುಷನ ವೀರ್ಯ ಹಾಗೂ ಸ್ತ್ರೀಯ ಅಂಡಾಣುವಿನ ಸಮ್ಮಿಲನಕ್ಕೆ ಅಡಚಣೆ ಅಥವಾ ಗರ್ಭಧಾರಣೆ ನಂತರ ಜೀವಾಣುವನ್ನು ಉಳಿಸಿಕೊಳ್ಳಲು ವಿಫಲವಾದಲ್ಲಿ ಬಂಜೆತನ ಉಂಟಾಗುತ್ತದೆ.
ಬಂಜೆತನ ನಿವಾರಣೆಗೆ ಸಾಕಷ್ಟು ಮುಂದುವರೆದ ತಂತ್ರಜ್ಞಾನಗಳಿವೆ. ಅದರಲ್ಲಿ ಒಂದು ಆಕ್ಯೂಪಂಕ್ಚರ್ ಪದ್ಧತಿ ಇದು ಒಂದು ಬದಲಿ ವೈದ್ಯಕೀಯ ಚಿಕಿತ್ಸೆ ಆಗಿದೆ ಸಾಂಪ್ರದಾಯಿಕ ಚೀನಿ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿರುವ ಇದರಲ್ಲಿ ದೇಹದ ಆಕ್ಯೂಪಂಕ್ಚರ್‍ಬಿಂದುಗಳಲ್ಲಿ ತೆಳ್ಳನೆಯ ಸೂಜಿಗಳನ್ನು ಚುಚ್ಚಲಾಗುತ್ತದೆ. ಇದರೊಂದಿಗೆ ಶಾಖಾ, ಒತ್ತಡ ಅಥವ ಲೇಸರ್ ಬೆಳಕು ನೀಡದೆ ಅಲ್ಲದೆ ಇದನ್ನು ನೋವಿನಿಂದ ಪರಿಹಾರ ಪಡೆಯಲು ಬಳಸಲಾಗುತ್ತದೆ. ಇಂದು ಆಕ್ಯೂಪಂಕ್ಚರ್ ಚಿಕಿತ್ಸೆ ಕೇವಲ ನೋವಿನಿಂದ ಪರಿಹಾರ ಪಡೆಯಲು ಸೀಮಿತವಾಗಿಲ್ಲ. ಅದನ್ನು ಈಗ ಮಕ್ಕಳನ್ನು ಪಡೆಯಲು ಬಯಸುವ ಮಹಿಳೆಯರಲ್ಲಿ ಬಂಜೆತನವನ್ನು ಯಾವುದೇ ದುಷ್ಪರಿಣಾಮಗಳಿಲ್ಲದೆ ಗುಣಪಡಿಸಲು ಉತ್ತಮ ಬದಲಿ ಚಿಕಿತ್ಸೆಯಾಗಿ ಗುರುತಿಸಲಾಗಿದೆ. ಮಹಿಳೆಯರಲ್ಲಿ ಗರ್ಭಧಾರಣೆಯ ಸಾಧ್ಯತೆಯನ್ನು ಆಕ್ಯೂಪಂಕ್ಚರ್ ಚಿಕಿತ್ಸೆ ಶೇ.26ರಷ್ಟು ಹೆಚ್ಚಿಸುತ್ತದೆ.
ಬಳಸುವ ಕ್ರಮ: ಪುರುಷ ಮತ್ತು ಮಹಿಳೆಯರ ಫಲವತ್ತತೆಯಲ್ಲಿ ಪ್ರಮುಖ ಅಂಶವಾಗಿರುವ ಒತ್ತಡವನ್ನು ಕಡಿಮೆ ಮಾಡಿ ಆಕ್ಯೂಪಂಕ್ಚರ್ ಚಿಕಿತ್ಸೆ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮನುಷ್ಯರು ಒತ್ತಡದಲ್ಲಿರುವಾಗ ಮೆದುಳಿನಿಂದ ಕಾರ್ಟಿಸಾಲ್ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ಮೆದುಳಿನ ನರ ರಾಸಾಯನಿಕ ಸಮತೋಲನವನ್ನು ಬದಲಿಸುತ್ತದೆ. ಇದರಿಂದ ಹಾರ್ಮೋನ್‍ಗಳ ಮಟ್ಟ ಬದಲಾಗಿ ಪ್ರಜನನ ಆವೃತ್ತಿಯಲ್ಲಿ ಪ್ರಮುಖವಾಗಿರುವ ಪಿಟ್ಯೂಟರಿಯ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಚೀನಿ ವೈದ್ಯಕೀಯ ಮಹಿಳೆಗೆ ಅವರ ಜೀವನದ ಪ್ರಮುಖ ಸಮಯದಲ್ಲಿ ಬೆಂಬಲದ ಸಹಾಯ ನೀಡಬಲ್ಲದಲ್ಲದೆ ಮಾನಸಿಕ ಅಥವ ದೈಹಿಕವಾಗಿ ಆಕ್ಯೂಪಂಕ್ಚರ್ ಕೇವಲ ಗರ್ಭಧಾರಣೆಗಿಂತಲು ಹೆಚ್ಚಿನ ಸಹಾಯ ಮಾಡುತ್ತದೆ. ಬೆಳಗಿನ ಅಸ್ವಸ್ಥತೆ, ವಾಕರಿಕೆ, ನೋವುಗಳು(ಬೆನ್ನಿನ ಕೆಳಭಾಗದ ನೋವು ಮುಂತಾದವುಗಳು), ಮಗುವಿನ ಜನ್ಮಕ್ಕೆ ಸಿದ್ಧವಾಗುವ ಸಮಯದಲ್ಲಿ ಆತಂಕ, ನಿದ್ರಾಹೀನತೆ ಮುಂತಾದವುಗಳಲ್ಲಿ ಇದು ನೆರವಾಗಬಹುದು ಎಂದು ಚಿಕಿತ್ಸೆ ಪಡೆದಿರುವ ರೋಗಿಗಳು ಪ್ರತಿಕ್ರಿಯೆ ನೀಡಿರುತ್ತಾರೆ. ನಿರ್ನಾಳಗ್ರಂಥಿ ವ್ಯವಸ್ಥೆಯ ಸಮತೋಲನ ಕಾಯ್ದುಕೊಳ್ಳುತ್ತದೆ. ಚೈನೀಸ್ ವೈದ್ಯಕೀಯದಿಂದ ಬಂಜೆತನಕ್ಕೆ ಚಿಕಿತ್ಸೆಯ ಉದ್ದೇಶ ಎಂದರೆ ಕೇವಲ ಗರ್ಭಿಣಿ ಆಗುವುದಲ್ಲಷ್ಟೆ ಅಲ್ಲದೆ ಉತ್ತಮ ಆರೋಗ್ಯ ಹೊಂದಿರುವ ಮಗು ಜನಿಸುವವರೆಗೆ ಸಹಾಯವಾಗುತ್ತದೆ.
ಆಕ್ಯೂಪಂಕ್ಚರ್‍ನಿಂದ ಆಗುವ ಲಾಭಗಳು: ಆಕ್ಯೂಪಂಕ್ಚರ್ ಅಂಡಾಶಯಗಳು ಮತ್ತು ಗರ್ಭಾಶಯಕ್ಕೆ ಹೆಚ್ಚು ಉತ್ತಮ ರಕ್ತದ ಹರಿವನ್ನು ಪೂರೈಸಬಹುದು. ಅಲ್ಲದೆ ಅಂಡವೊಂದು ಸೂಕ್ತ ಪೋಷಣೆ ಪಡೆದು ಗರ್ಭ ಧರಿಸಲು ಹೆಚ್ಚು ಸೂಕ್ತವಾದ ಅವಕಾಶ ದೊರೆಯುತ್ತದೆ. ಬಂಜೆತನಕ್ಕೆ ಕಾರಣವಾಗುವ ಒತ್ತಡದ ಹಾರ್ಮೋನ್‍ಗಳನ್ನು ಕಡಿಮೆ ಮಾಡಲು ಆಕ್ಯೂಪಂಕ್ಚರ್ ಸಹಾಯ ಮಾಡುತ್ತದೆ. ಗರ್ಭಾಶಯಕ್ಕೆ ರಕ್ತದ ಹರಿವು ಹೆಚ್ಚಾಗಲು ಆಕ್ಯೂಪಂಚರ್ ನೆರವಾಗುತ್ತದೆ. ಫಲವತ್ತತೆಯ ಹಾರ್ಮೋನ್‍ಗಳ ಪ್ಲಾಸ್ಮಾ ಮಟ್ಟಗಳಿಗೆ ಚಾಲನೆ ನೀಡುತ್ತದೆ. ಹೈಪೋಥಲಮಿಕ್ ಪಿಟುಟರಿ ಓವೇರಿಯನ್ ಆಕ್ಸಿಸ್ ಸಾಮಾನ್ಯವಾಗಲು ಸಹಾಯ ಮಾಡುತ್ತದೆ. ಕುಟುಂಬ ಯೋಜನೆ ಸುಲಭವಾಗಲು ಋತುಚಕ್ರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾರ್ಮೋನ್‍ಗಳ ಅಸಮತೋಲನದಿಂದಾಗಿ ಪಾಲಿಸಿಸ್ಟಿಕ್ ಒವರಿ ಸ್ಥಿತಿಯಿಂದ ಬಳಲುತ್ತಿರುವ ಮಹಿಳೆಯರಿಗೆ ಸಹಾಯ ಮಾಡುತ್ತದೆ. ಫಲವತ್ತತೆಯ ಸಾಧ್ಯತೆಗಳನ್ನು ಕಡಿಮೆ ಮಾಡುವಂತಹ ಅಸ್ವಸ್ಥತೆ ಮತ್ತು ದೌರ್ಬಲ್ಯಗಳನ್ನು ತಡೆಯುವ ನಿರೋಧಕ ಶಕ್ತಿ ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತದೆ.
ಫಲಿತಾಂಶ :ಮಹಿಳೆಯರಿಗೆ ಸೂಚಿಸಲಾಗುವ ಫಲವತ್ತತೆಯ ಔಷಧಗಳಿಂದ ಶೇ.20ರಿಂದ 60ರವರೆಗೆ ಗರ್ಭಿಣಿಯರಾಗುವ ಸಾಧ್ಯತೆಯ ದರ ಇದ್ದು, ಆಕ್ಯೂಪಂಕ್ಚರ್‍ನ ಬಂಜೆತನದ ಚಿಕಿತ್ಸೆಯಲ್ಲಿ ಅತ್ಯಂತ ಕಡಿಮೆ ಅಥವ ಯಾವುದೇ ದುಷ್ಪರಿಣಾ ಮಗಳಿರುವುದಿಲ್ಲ. ಔಷದಗಳು ಮಾಡುವ ಕೆಲಸದೊಂದಿಗೆ ಹೈಪೋಥಲಮಸ್‍ಗೆ ಚಾಲನೆ ನೀಡಿ ಎಂಡೋಕ್ರೈನ್ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸಮತೋಲನ ತರುತ್ತದೆ. ಐವಿಎಫ್ ರೋಗಿಗಳಿಗೆ 8ರಿಂದ 10 ದಿನಗಳ ಸೆಷನ್‍ಗಳು ಇದ್ದರೆ ಇತರೆ ಬಂಜೆತನದ ತೊಂದರೆಗಳಿಗೆ 2ರಿಂದ 3 ಸೆಷನ್‍ಗಳನ್ನು ಶಿಫಾರಸು ಮಾಡಲಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.