ಮನುಷ್ಯನ ಜೀವನದಲ್ಲಿ ಆಹಾರ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ತಾನು ತಿನ್ನುವ ಆಹಾರ ಕ್ರಮದ ಆಧಾರದ ಮೇಲೆ,ಮನುಷ್ಯ ನ ಆರೋಗ್ಯ ಸ್ಥಿತಿ ಅವಲಂಬಿತವಾಗಿರುತ್ತದೆ. ಮುಖ್ಯವಾಗಿ ಹಣ್ಣುಗಳು ಆರೋಗ್ಯದ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಣ್ಣುಗಳೆಂದರೆ ನಮಗೆ ತಟ್ಟನೆ ನೆನಪಾಗೋದು ಸೇಬು,ದ್ರಾಕ್ಷಿ,ದಾಳಿಂಬೆ. ಆದರೆ ನಾವು ಇಂದು ಮಾತನಾಡುತ್ತಿರುವುದು ಶುದ್ದ ದೇಶಿ ಫಲವಾದ ಹಲಸಿನ ಹಣ್ಣಿನ ಬಗ್ಗೆ.
ಹೌದು ತಟ್ಟನೆ ಹೆಸರು ನೆನಪಿಗೆ ಬಾರದಿದ್ದರು,ಹಲಸಿನ ಹಣ್ಣಿನ ಹೆಸರು,ರುಚಿ ಮತ್ತು ಅದರ ಸುವಾಸನೆ ಎಲ್ಲರಿಗು ಚಿರಪರಿಚಿತವಾಗಿದೆ. ಹಿಂದೆ ಈ ಹಣ್ಣು ಹಳ್ಳಿಗಾಡು ಪ್ರದೇಶಕ್ಕೆ ಸೀಮಿತವಾಗಿತ್ತು. ಜನರು ಇದನ್ನ ಒಂದು ಬಗೆಯ ಆಹಾರದ ರೂಪವಾಗಿ ಬಳಸುತ್ತಿದ್ದರು. ಆದರೆ ಇಂದು ಹಲಸಿನ ಹಣ್ಣಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಜನ ಇದನ್ನ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ.ಹಲಸಿನ ಹಣ್ಣಿನಿಂದ ದೇಹಕ್ಕೆ ಅನೇಕ ಲಾಭವಿದೆ ಮತ್ತು ಹೆಚ್ಚು ಪೌಶ್ಟಿಕಾಂಶಗಳನ್ನ ಒಳಗೊಂಡಿದೆ.
ಹಲಸಿನ ಹಣ್ಣಿನ ಬಗ್ಗೆ ನಮಗೆ ಈಗಾಗಲೆ ತಿಳಿದಿದೆ. ಹಲಸಿನ ಹಣ್ಣು ತಿಂದ ಮೇಲೆ ಅದರ ಬೀಜವನ್ನ ಎಸೆಯುತ್ತೇವೆ. ಆದರೆ ಹಲಸಿನ ಹಣ್ಣಿನ ಬೀಜದ ಬಗ್ಗೆ ಯಾರಿಗು ಮಾಹಿತಿ ಇರುವುದಿಲ್ಲ. ಹಲಸಿನ ಬೀಜದಲ್ಲಿ ಅನೇಕ ಔಷದೀಯ ಗುಣಗಳು ತುಂಬಿವೆ. ಹಳ್ಳಿಗಾಡು ಪ್ರದೇಶಗಳಲ್ಲಿ ಹಿಂದಿನಿದಲು ಹಲಸಿನ ಬೀಜ(ಗಾಳ)ವನ್ನ ಆಹಾರ ಕ್ರಮದಲ್ಲಿ ಬಳಸಲಾಗುತ್ತದೆ.ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಹಲಸಿನ ಗಾಳವನ್ನ ಆಹಾರವಾಗಿ ಬಳಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋ ಮಾನದವರು ಎದುರಿಸುತ್ತಿರುವ ಸಮಸ್ಯೆ ಎಂದರೆ ಅದು ಅಜೀರ್ಣತೆ. ಹೊಟ್ಟೆ ನೋವು ಬರುವುದು,ಹೊಟ್ಟೆ ಭಾರ ವೆನಿಸುವುದು ಮತ್ತು ಮಲಭದ್ದತೆ ಉಂಟಾಗುವುದು. ಹಲಸಿನ ಗಾಳವನ್ನ ಬೇಯಿಸಿ ಸೇವಿಸುವುದರಿಂದ ಜೀರ್ಣಕ್ರೀಯೆಯು ಸರಾಗವಾಗಿ ನಡೆಯುತ್ತದೆ. ಹಲಸಿನ ಬೀಜವು ಜೀರ್ಣ ಕ್ರೀಯೆಗೆ ಉತ್ತೇಜನ ನೀಡುತ್ತದೆ. ಕೂದಲಿನ ಸಮಸ್ಯೆ ಗೆ ಇದು ರಾಮಬಾಣ. ಹೌದು ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಸ್ಯೆ ಇರುವವರು ಹಲಸಿನ ಬೀಜವನ್ನ ಬೇಯಿಸಿ ಸೇವಿಸುವುದರಿಂದ ಕೂದಲು ಉದುರುವಿಕೆ ಮತ್ತು ಸಮಸ್ಯೆಗಳನ್ನ ತಡೆಗಟ್ಟ ಬಹುದು.ಹಲಸಿನ ಬೀಜದಲ್ಲಿ ಕಬ್ಬಿಣಾ೦ಶ ಇರಿವುದರಿಂದ,ದೇಹದಲ್ಲಿ ರಕ್ತ ಸಂಚಾರವನ್ನ ಸರಾಗವಾಗುವಂತೆ ಹೆಚ್ಚಿಸುತ್ತದೆ.
ಅನೇಕರು ಹೆಚ್ಚಾಗಿ ಲೈಂ-ಗಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಹಲಸಿನ ಬೀಜದ ಸೇವನೆಯಿಂದ ಲೈಂ-ಗಿಕ ಸಮಸ್ಯೆಗಳನ್ನ ನಿವಾರಣೆ ಮಾಡಿಕೊಳ್ಳಬಹುದು.ಹಾಗೆ ಚರ್ಮದ ಸಮಸ್ಯೆಗಳಿಂದಲು ಕೂಡ ಮುಕ್ತಿ ಹೊಂದಬಹುದು. ಜೊತೆಗೆ ಚರ್ಮದ ಕಾಂತಿಯು ಹೆಚ್ಚಾಗುತ್ತದೆ. ಮುಖ್ಯವಾಗಿ ಇತ್ತೀಚಿನ ದಿನಮಾನಗಳಲ್ಲಿ ಜನರು ಹೆಚ್ಚಾಗಿ ಕಣ್ಣಿನ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೀಯೆ ಮಕ್ಕಳು ಕನ್ನಡಕದ ಮೊರೆ ಹೋಗುತ್ತಿದ್ದಾರೆ.ಹಲಸಿನ ಬೀಜದಲ್ಲಿ ಎ ವಿಟಮಿನ್ ಹೆಚ್ಚು ಇರುವುದರಿಂದ, ಇದನ್ನು ಸೇವಿಸಿದರೆ ಕಣ್ಣಿನ ಸಮಸ್ಯೆಗಳನ್ನು ಮತ್ತು ಇರುಳುಗುರುಡು ನಂತಹ ಕಣ್ಣಿನ ದೋಷ್ಹಗಳನ್ನ ಪರಿಹಾರ ಮಾಡಿಕೊಳ್ಳಬಹುದು.
ಹಣ್ಣು ತಿಂದ ಮೇಲೆ ಎಸೆಯುವ ಬೀಜದಲ್ಲಿ ಇಷ್ಟೊಂದು ಔಷದೀಯ ಗುಣಗಳು ಇದೆ ಎಂದರೆ, ಅದು ಪ್ರಕೃತಿ ನಮಗೆ ಕೊಟ್ಟ ದೊಡ್ಡ ಬಹುಮಾನ. ನಿಸರ್ಗ ನಮಗೆ ಕೊಟ್ಟ ಅವಕಾಶಗಳನ್ನ ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಲ್ಲಿ ಕಂಡಿತ ನಮ್ಮ ಆರೋಗ್ಯವನ್ನ ಸಮತೋಲನದಲ್ಲಿಟ್ಟುಕೊಳ್ಳಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.