ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅರೋಗ್ಯಕ್ಕೆ ಸಾಕಷ್ಟು ಉಪಯುಕ್ತವಾಗಿದೆ. ಬಾದಾಮಿಯು ಹಸಿಯಾಗಿ ಸಿಗುವುದು ಬಹಳ ಕಷ್ಟ. ಆದರೆ ಬಾದಾಮಿಯಲ್ಲಿ ದೇಹಕ್ಕೆ ಶಕ್ತಿ ಒದಗಿಸುವ ಹಲವಾರು ರೀತಿಯ ವಿಟಾಮಿನ್ ಪೋಷಕಾಂಶಗಳು ಇದೆ. ಅತ್ಯಧಿಕ ಪೋಷಕಾಂಶಗಳು ಮತ್ತು ಹೇರಳವಾಗಿ ವಿಟಾಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಪದಾರ್ಥವೆಂದರೆ ಬಾದಾಮಿ. ಅದನ್ನು ನಾವು ನೆನೆಸಿದ ನಂತರವೇ ಬಳಸುವುದು ಜಾಸ್ತಿ. ಬಾದಾಮಿಯಲ್ಲಿ ಶೇ. 16.5 ರಷ್ಟು ಪ್ರೋಟೀನ್ ಮತ್ತು ಶೇ.41 ರಷ್ಟು ಎಣ್ಣೆಯ ಅಂಶವಿರುವುದರಿಂದ ಯಾವ ರೀತಿಯಲ್ಲಾದರೂ ಬಳಕೆ ಮಾಡಬಹುದು.

ಇನ್ನ ಕೆಲವರಿಗೆ ತುಂಬಾ ಸುಸ್ತಾಗುತ್ತ ಇರುತ್ತದೆ ಕೈಕಾಲು ನೋವು ಬೆನ್ನು ನೋವು ತಲೆನೋವು ದೇಹದಲ್ಲಿ ಎನರ್ಜಿ ಇರುವುದಿಲ್ಲ ದೇಹದಲ್ಲಿ ಉತ್ಸಾಹವಿರುವುದಿಲ್ಲ, ಅದಕ್ಕಾಗಿ ಇಲ್ಲೊಂದು ಪರಿಹಾರವನ್ನು ಹೇಳಲಾಗಿದ್ದು, ಎಲ್ಲ ನೋವುಗಳಿಗೆ ಮುಕ್ತಿ ಹೇಳಬಹುದು. ಅದೇನ್ ಅಂತ ಇಲ್ಲಿದೆ ನೋಡಿ. ಹಾಗೇ ಮಕ್ಕಳಿಗೆ ಮಾಡಿಕೊಟ್ಟರೆ ಪರೀಕ್ಷೆಯ ಸಮಯದಲ್ಲಿ ಅವರಿಗೆ ಒಳ್ಳೆಯ ಮೆಮೊರಿ ಪವರ್ ಜಾಸ್ತಿ ಆಗುತ್ತದೆ ಇದರಿಂದ ನಿಮ್ಮ ದೇಹಕ್ಕೆ ಮಿಟಮಿನ್-ಗಳು ಸಿಗುತ್ತದೆ. ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಇಲ್ಲಿದೆ ನೋಡಿ. ಬಾಟಲಿಗೆ ಒಂದು ಸ್ಪೂನ್ ತುಪ್ಪವನ್ನು ಹಾಕಿ ನಂತರ ಒಂದು ಕಪ್ ಬಾದಾಮಿಯನ್ನು ಹಾಕಿ ಸಣ್ಣ ಉರಿಯಲ್ಲಿ ಬಾದಾಮಿಯಲ್ಲಿ ಹುರಿದುಕೊಳ್ಳಿ.

ನಂತರ ಇದಕ್ಕೆ ಕಾಲು ಕಪ್ ಗೋಡಂಬಿ ಹಾಕಿ ಇದು ಕೂಡ, ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಐರನ್ ಮೆಗ್ನಿಷಿಯಂ ಇರುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಮತ್ತು ಆರೋಗ್ಯಕ್ಕೆ ಉತ್ತಮ ಗೋಡಂಬಿ ಮತ್ತು ಬಾದಾಮಿಯನ್ನು ಕೆಂಪಾಗುವ ತನಕ ಹುರಿಯರಿ. ನಂತರ ಬಾಣಲಿಗೆ ಒಣದ್ರಾಕ್ಷಿ ಹಾಕಿ, ಹುರಿದುಕೊಳ್ಳಿ ಇದು ಹಾರ್ಟ್ ಹೆಲ್ತ್ ಗೆ ತುಂಬಾನೇ ಒಳ್ಳೆಯದು ಇದರ ಟೆಸ್ಟ್ ಕೂಡ ತುಂಬಾನೇ ಚೆನ್ನಾಗಿ ಇರುತ್ತೆ. ನಂತರ ಇದಕ್ಕೆ ಎರಡು ಸ್ಪೂನ್ ಗಸಗಸೆಯನ್ನು ಹಾಕಿ ಹುರಿಯಿರಿ ಇದರಲ್ಲಿ ಎರದುಸ್ಪುನ್ ಅಗಸೆ ಬೀಜವನ್ನು ಹಾಕಿ. ಇದರಲ್ಲಿ ಒಮೇಗಾ ಸಾರಾಂಶ ಇರುತ್ತದೆ ಕ್ಯಾನ್ಸರ್ ಅಂಶವನ್ನು ದೂರಮಾಡುತ್ತದೆ. ನಂತರ ಒಂದು ಕಪ್ ತುರಿದಿರುವ ಒಣ ಕೊಬ್ಬರಿಯನ್ನು ಇದರ ಜೊತೆಗೆ ಸೇರಿಸಿ ಇದು ಮೂಳೆಗಳಿಗೆ ಒಳ್ಳೆಯದು.

ನಂತರ ಹುರಿದ ಎಲ್ಲ ವಸ್ತುಗಳನ್ನ ಒಂದು ಪಾತ್ರೆಗೆ ಹಾಕಿ ಒಂದು ಕಪ್ ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಬೆಲ್ಲ ಕರಗಿದ ನಂತರ ಎಲ್ಲಾ ಪೌಡರನ್ನು ಮಿಶ್ರಣಮಾಡಿ ಅರುವ ಮೊದಲೇ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಇದನ್ನು ಮಕ್ಕಳು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದರಿಂದ ಮೆಮೊರಿ ಪವರ್ ಕೂಡ ಹೆಚ್ಚುತ್ತೆ. ಹಾಗೇ ಇದನ್ನು ಯವಸ್ಸಾದವರು ಕೂಡ ತಿನ್ನಬಹುದು. ಇನ್ನ ಇದರಿಂದ ನಿಶಕ್ತಿ, ಮೊಳೆ ನೋವು, ಕಡಿಮೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *