ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಈ ಹಣ್ಣು ಅಷ್ಟೊಂದು ಹೆಚ್ಚಾಗಿ ಬಹುಬೇಗನೆ ನಮಗೆ ಸಿಗುವುದಿಲ್ಲ. ಈ ಹಣ್ಣು ನಮ್ಮ ಭಾರತ ದೇಶದಲ್ಲಿ ಸಿಗದೇ ಇದ್ದರೂ ಹೆಚ್ಚಾಗಿ ಚಿರಪರಿಚಿತ ಇಲ್ಲದೆ ಇದ್ದರೂ ಕೂಡ ಈ ಹಣ್ಣು ಎಲ್ಲರ ಗಮನವನ್ನು ಸೆಳೆದಿದೆ. ಆದರೆ ಸಾವಿರಾರು ಮೈಲಿ ದೂರದ ನೆಲದಲ್ಲಿ ಬೆಳೆಯುವ ಈ ಹಣ್ಣು ಇಷ್ಟೊಂದು ಪ್ರಶಂಸೆಗೆ ಒಳಗಾಗಿದೆ ಅಂದರೆ ಈ ಹಣ್ಣಿನಲ್ಲಿ ಯಾವುದೋ ಒಂದು ವಿಶೇಷವಾದ ಮಹತ್ವವನ್ನು ಹೊಂದಿದೆ ಅಂತ ಅರ್ಥವಾಗುತ್ತದೆ. ಹಾಗಾದರೆ ಆ ಹಣ್ಣು ಯಾವುದು ಅಂತ ನೀವು ಯೋಚನೆಯನ್ನು ಮಾಡುತ್ತಿದ್ದೀರಾ ಆ ಹಣ್ಣು ಬೇರೆ ಯಾವುದು ಅಲ್ಲ ಮಿತ್ರರೇ ಅದುವೇ ಡ್ರ್ಯಾಗನ್ ಪ್ರೂಟ್ಸ್. ಈ ಹಣ್ಣು ತುಂಬಾನೇ ದುಬಾರಿ ಆಗಿದ್ದು ಇದು ಕಂಡ ಕಂಡಲ್ಲಿ ಸಿಗಲು ಸಾಧ್ಯವಿಲ್ಲ. ದುಬಾರಿ ಆದರೂ ಕೂಡ ಆರೋಗ್ಯಕ್ಕೆ ಲಾಭವನ್ನು ನೀಡುವ ಹಣ್ಣುಗಳನ್ನು ನಿರಾಕರಿಸಿದರೆ ಅದರಿಂದ ನಷ್ಟವನ್ನು ಅನುಭವಿಸುವವರು ನಾವೇ ಹೊರತು ದುಬಾರಿ ಅಂತ ದೂರುವ ಮನುಷ್ಯನ ಆಲೋಚನೆಗಳು ಹೊಣೆ ಆಗುವುದಿಲ್ಲ. ಈ ಹಣ್ಣು ನೋಡಲು ತುಂಬಾನೇ ಸುಂದರವಾದ ಗುಲಾಬಿ ಬಣ್ಣವನ್ನು ಹೊಂದಿದ್ದು ಹೊಳಗಡೆ ಬಿಳಿ ಹೊದಿಕೆಯಲ್ಲಿ ಕಪ್ಪು ಬೀಜಗಳನ್ನು ಹೊಂದಿರುತ್ತದೆ. ಡ್ರ್ಯಾಗನ್ ಪ್ರೂಟ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಜೀವಸತ್ವಗಳು ವಿಟಮಿನ್ಗಳು ಖನಿಜಗಳು ಲವಣಗಳು ದೊರೆಯುತ್ತವೆ. ಇವುಗಳನ್ನು ಮಾತ್ರ ದೇಹಕ್ಕೆ ಒದಗಿಸುವುದಲ್ಲದೆ ಹತ್ತಾರು ಕಾಯಿಲೆಗಳಿಂದ ನಮ್ಮನ್ನು ಈ ಹಣ್ಣು ಕಾಪಾಡುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ಆಗುವ ಲಾಭಗಳ ಜೊತೆಗೆ ಯಾವೆಲ್ಲ ಕಾಯಿಲೆಗಳಿಂದ ಮುಕ್ತಿಯನ್ನು ಪಡೆಯಬಹುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಡ್ರ್ಯಾಗನ್ ಹಣ್ಣು ಸುಮಾರು 150 ಗ್ರಾಂ ನಿಂದ 600 ಗ್ರಾಂ ವರೆಗೆ ತೂಗುತ್ತದೆ. ಈ ಹಣ್ಣಿನಲ್ಲಿ ಪ್ರೋಟಿನ್, ಫೈಬರ್ ಸೇರಿದಂತೆ ರೋಗ ನಿರೋಧಕ ಗುಣಗಳು ಅಡಗಿವೆ. ಈ ಹಣ್ಣು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಡ್ರಾಗನ್ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಇದು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
ಹೌದು ಮಿತ್ರರೇ ಈ ಹಣ್ಣು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರ ಹಿತವಲ್ಲದೇ ಇದನ್ನು ಕೆಲವು ಸೌಂದರ್ಯ ವರ್ಧಕವಾಗಿ ಚರ್ಮದ ಕಾಂತಿಗೆ ಮತ್ತು ಕೂದಲಿಗೆ ಮೊದಲಿನ ಕಾಲದ ಜನರು ಬಳಕೆ ಮಾಡುತ್ತಿದ್ದರು ಏಕೆಂದರೆ ಇದರಲ್ಲಿ ಇರುವ ವಿಟಮಿನ್ ಸಿ ಅಂಶವೇ ಕಾರಣ ಆಗಿರುತ್ತದೆ.ಡ್ರ್ಯಾಗನ್ ಹಣ್ಣಿನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಡ್ರ್ಯಾಗನ್‌ನ ಹೆಚ್ಚಿನ ಫೈಬರ್ ಅಂಶವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಡ್ರ್ಯಾಗನ್ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಡ್ರ್ಯಾಗನ್ ಹಣ್ಣುಗಳು ಅತ್ಯುತ್ತಮವಾಗಿದೆ. ಈ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಆದ ಕಾರಣ ಈ ಹಣ್ಣು ಎಲ್ಲ ಜನರಿಗೆ ಬಲು ಪ್ರಿಯವಾಗಿದೆ.ಹಣ್ಣಿನ ಬೀಜಗಳು ದೇಹಕ್ಕೆ ಅಗತ್ಯವಾದ ಒಮೆಗಾ3 ಫ್ಯಾಟಿ ಆಸಿಡ್ ಮತ್ತು ಒಮೆಗಾ6 ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅವಶ್ಯಕವಾಗಿದೆ.
ಇದು ಅಪಧಮನಿಗಳನ್ನು ಶುದ್ಧಗೊಳಿಸುತ್ತದೆ .ರಕ್ತವು ಸರಿಯಾಗಿ ಹರಿಯುವಂತೆ ಮಾಡುತ್ತದೆ. ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಗರ್ಭಿಣಿಯರಲ್ಲಿ ರಕ್ತ ಹೀನತೆ ಸಮಸ್ಯೆ ಅನ್ನುವುದು ಬರುವುದಿಲ್ಲ. ಅದಕ್ಕಾಗಿ ಈ ಹಣ್ಣು ತಿನ್ನಲು ವೈದ್ಯರು ಸೂಚನೆಯನ್ನು ನೀಡುತ್ತಾರೆ. ಈ ಹಣ್ಣು ನಿಜಕ್ಕೂ ಆರೋಗ್ಯಕರ ಲಾಭಗಳನ್ನು ಹೊಂದಿದ್ದು ಕ್ಯಾನ್ಸರ್ ಎಂಬ ಮಹಾಮಾರಿ ರೋಗದಿಂದ ಹಿಡಿದು ಜೀರ್ಣಕ್ರಿಯೆಯ ವರೆಗೆ ಸಹಾಯ ಮಾಡುತ್ತದೆ ಆದ್ದರಿಂದ ಈ ಹಣ್ಣು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿಯಲಾಗಿದೆ.