ನಮಸ್ತೆ ಗೆಳೆಯರೇ, ಹೊಟ್ಟೆ ಬೊಜ್ಜು ಹೇಗೆ ಕರಗಿಸುವುದು ಅದಕ್ಕೆ ಏನಾದರೂ ಪರಿಹಾರ ಇದೆಯೇ? ಈ ಜಗತ್ತಿನಲ್ಲಿ 50% ರಷ್ಟು ಜನರಿಗೆ ಕಾಡುವ ಸಮಸ್ಯೆ ಅಂದರೆ ಅದುವೇ ಹೊಟ್ಟೆ ಬೊಜ್ಜು. ಇದು ಶರೀರದ ಸೌಂದರ್ಯವನ್ನು ಕುಂದಿಸುವುದರ ಜೊತೆಗೆ ನಿಮ್ಮ ಆತ್ಮವಿಶ್ವಾಸವನ್ನೂ ಕಡಿಮೆ ಮಾಡುತ್ತದೆ. ಜನರು ತೂಕವನ್ನು ಕಡಿಮೆ ಮಾಡಲು ನಾನಾ ಬಗೆಯ ಜಾಹೀರಾತುಗಳ ಮೊರೆ ಹೋಗುತ್ತಾರೆ. ಹಾಗೆಯೇ ಹೊಟ್ಟೆಯ ಬೊಜ್ಜು ಕೂಡ ಕಡಿಮೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹಿತ. ಇಲ್ಲವಾದರೆ ಇದು ಆರೋಗ್ಯಕ್ಕೆ ಮಾರಕ. ಹೊಟ್ಟೆಯ ಕೊಬ್ಬು ಕರಗದೆ ಇರಲು ಕಾರಣ ಅಥವಾ ಹೊಟ್ಟೆಯ ಕೊಬ್ಬು ಬೆಳೆಯಲು ಕಾರಣ, ಈ ನಡುವೆ ಜನರು ಫಾಸ್ಟ್ ಫುಡ್ ಮತ್ತು ಎಣ್ಣೆಯುಕ್ತ ಪದಾರ್ಥಗಳು ಸಿಕ್ಕಿದ ಆಹಾರವನ್ನು ಬಾಯಿಯ ಚಪಲತೆ ತಾಳಲಾರದೆ ತಿನ್ನುವುದರಿಂದ ಕರಗಿದ ಕೊಬ್ಬು ಮತ್ತೆ ದೇಹವನ್ನು ಸೇರಿಕೊಳ್ಳುತ್ತದೆ ಆದ್ದರಿಂದ ನೀವು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಜೀರಿಗೆಯ ಜೊತೆಗೆ ಇದನ್ನು ಬೆರೆಸಿ ಕುಡಿಯುವುದರಿಂದ ಅತಿ ಬೇಗನೆ ಹೊಟ್ಟೆ ಬೊಜ್ಜು ಕರಗುತ್ತದೆ ಜೊತೆಗೆ ನಿಮ್ಮ ತೂಕವು ಕಡಿಮೆ ಆಗುತ್ತದೆ.
ಹಾಗಾದರೆ ಮನೆಮದ್ದು ಹೇಗೆ ತಯಾರಿಸುವುದು ಅಂತ ತಿಳಿಯೋಣ ಬನ್ನಿ. ಮೊದಲಿಗೆ ಒಂದು ಲೋಟ ತೆಗೆದುಕೊಳ್ಳಿ. ಅದರಲ್ಲಿ ಎರಡು ದೊಡ್ಡ ಗಾತ್ರದ ಚಮಚದಷ್ಟು ಜೀರಿಗೆಯನ್ನು ಹಾಕಿಕೊಳ್ಳಿ. ತದ ನಂತರ ಅದಕ್ಕೆ ನೀರು ಹಾಕಿ ರಾತ್ರಿ ಪೂರ್ತಿ ನೆನೆಸಿಡಿ. ಮಾರನೆಯ ದಿನ ಒಂದು ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟು ಅದರಲ್ಲಿ ಈ ನೀರು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಎರಡು ಲೋಟ ನೀರು ಒಂದು ಲೋಟ ಆಗುವವರೆಗೆ ಕುದಿಸಿಕೊಳ್ಳಿ. ಆಮೇಲೆ ಒಂದು ಲೋಟದಲ್ಲಿ ಈ ನೀರನ್ನು ಸೋಸಿಕೊಳ್ಳಿ. ಅದರಲ್ಲಿ ನೀವು ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಶುದ್ಧವಾದ ಜೇನುತುಪ್ಪವನ್ನು ಬಳಕೆ ಮಾಡಬೇಕು. ಇಲ್ಲವಾದರೆ ಯಾವುದೇ ಫಲಿತಾಂಶ ದೊರೆಯುವುದಿಲ್ಲ. ಈಗ ಮನೆಮದ್ದು ಸಿದ್ಧವಾಗಿದೆ ಇದನ್ನು ನೀವು ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ಡ್ರಿಂಕ್ ನಿಂದ ನಿಮ್ಮ ಜೀರ್ಣಕ್ರಿಯೆ ತುಂಬಾನೇ ಚೆನ್ನಾಗಿ ಆಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತುಂಬಾ ಬೇಗನೆ ತೂಕ ಕಡಿಮೆ ಆಗುತ್ತದೆ. ಹಾಗೆಯೇ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಐರನ್ ಅಂಶ ಇರುತ್ತದೆ. ಇದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ. ಮೂಳೆ ಮುರಿತ ಮೂಳೆಗಳು ಸವೆತ ಈ ಬಗೆಯ ಸಮಸ್ಯೆಗಳು ಬರುವುದಿಲ್ಲ. ಈ ಡ್ರಿಂಕ್ ಅನ್ನು ನೀವು ಸತತವಾಗಿ ಒಂದು ತಿಂಗಳು ಕುಡಿದರೆ ಖಂಡಿತವಾಗಿ ಫಲಿತಾಂಶ ನಿಮ್ಮದಾಗುತ್ತದೆ. ಇನ್ನೊಂದು ಮನೆಮದ್ದು ಬಗ್ಗೆ ಹೇಳುವುದಾದರೆ ಸೋಂಪು ಕಾಳನ್ನು ತೆಗೆದುಕೊಂಡು ಒಂದು ಜಾರಿನಲ್ಲಿ ನೀರು ಹಾಕಿ ರಾತ್ರಿ ಇಡಿ ನೆನೆಸಿಡಿ. ಮರು ದಿನ ಬೆಳಿಗ್ಗೆ ಎದ್ದು ತಕ್ಷಣ ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಕೊಬ್ಬು ಕರಗಿಸಲು ತುಂಬಾನೇ ಸಹಾಯ ಮಾಡುತ್ತದೆ. ನಾವು ತಿಳಿಸಿರುವ ಈ ಎರಡು ಮನೆಮದ್ದುಗಳು ತುಂಬಾನೇ ಸರಳವಾದ ಮನೆಮದ್ದುಗಳಾಗಿವೆ. ನಿಮ್ಮ ಹೊಟ್ಟೆಯ ಬೊಜ್ಜು ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳಲು. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಶುಭದಿನ.