ನಮಸ್ತೆ ಪ್ರಿಯ ಓದುಗರೇ ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ, ಮದುವೆ ಆದ ಹೆಣ್ಣು ಮಗಳಿಗೆ ಉಡುಗೊರೆ ಆಗಿ ಪ್ರೀತಿಯಿಂದ ತನ್ನ ತಂದೆ ತಾಯಿ ಆಕೆಗೆ ಕೆಲವು ವಸ್ತುಗಳನ್ನು ನೀಡುತ್ತಾರೆ ಅವಳ ಜೀವನ ತುಂಬಾನೇ ಸುಖವಾಗಿ ಆನಂದವಾಗಿ ಇರಬೇಕು ಅನ್ನುವ ಭಾವನೆಯಿಂದ. ಆದರೆ ಸ್ನೇಹಿತರೇ ನೀವು ಅಪ್ಪಿ ತಪ್ಪಿಯೂ ಮನೆಯ ಮಗಳಿಗೆ ಈ ವಸ್ತುಗಳನ್ನು ನೀವು ಎಂದಿಗೂ ಕೊಡಬೇಡಿ. ಇಲ್ಲವಾದರೆ ನಿಮ್ಮ ಅವನತಿಗೆ ನೀವೇ ಕಾರಣರು ಅಗುತ್ತೀರಿ. ಮನೆಯ ಹೆಣ್ಣು ಮಗಳನ್ನು ತಾಯಿ ಲಕ್ಷ್ಮೀದೇವಿ ಸ್ವರೂಪ ಅಂತ ತಿಳಿಯಲಾಗುತ್ತದೆ. ಅಷ್ಟೇ ಅಲ್ಲದೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಯಿ ದುರ್ಗಾ ದೇವಿ, ಸರಸ್ವತಿ ಮಾತೇ, ಸೀತಾ ಮಾತೆ, ಪಾರ್ವತಿ ದೇವಿ ಅಂತ ಹೆಣ್ಣಿಗೆ ಹೋಲಿಕೆ ಮಾಡಲಾಗಿದೆ. ಇವರು ಮನೆಯ ಮಹಾರಾಣಿ ಆಗಿದ್ದು ಹಾಗೆಯೇ ಸುಖವಾದ ಜೀವನವನ್ನು ಆನಂದಿಸುವ ಮನೆಯ ಮಹಾಲಕ್ಷ್ಮೀ ಆಗಿರುತ್ತಾರೆ. ಆದರೆ ಇವರು ಎಷ್ಟೇ ಆದರೂ ಪರರ ಸ್ವಂತ ಆಗಿರುತ್ತಾರೆ ಆದ ಕಾರಣ ಹೆಣ್ಣು ಮಕ್ಕಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಹೆಣ್ಣು ಮಕ್ಕಳ ಮಾಡುವುದು ತಂದೆ ತಾಯಿ ಕನಸು ಆಗಿದ್ದು ಇದು ಅವರ ಜೀವನದ ಒಂದು ದೊಡ್ಡ ಜವಾಬ್ದಾರಿ ಆಗಿರುತ್ತದೆ. ಹೀಗಾಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡುತ್ತಾರೆ ಈಗಿನ ಕಾಲದ ಮದುವೆ ಮೊದಲಿಗಿಂತ ವಿಭಿನ್ನವಾಗಿ ಇದೆ ಆದರೆ ಭಾವನೆಗಳು ಮಾತ್ರ ಒಂದೇ ಆಗಿರುತ್ತದೆ.

ಈ ಮದುವೆಯ ಸಮಯದಲ್ಲಿ ತನ್ನ ಮಗಳಿಗೆ ಕೆಲವು ವಸ್ತುಗಳನ್ನು ಕೊಡುವುದನ್ನು ಮರೆಯುವುದಿಲ್ಲ. ಮದುವೆಯ ಸಡಗರದಲ್ಲಿ ತಂದೆ ತಾಯಿ ಇಂಥಹ ಒಂದು ವಸ್ತು ಅನ್ನು ಗೊತ್ತಿಲ್ಲದೆ ಕೊಟ್ಟು ಬಿಡುತ್ತಾರೆ. ಗಂಡನ ಮನೆಗೆ ತನ್ನ ಮಗಳನ್ನು ಕಳುಹಿಸುವಾಗ ಗಣಪತಿ ಮೂರ್ತಿ ಅಥವಾ ಚಿತ್ರವನ್ನು ಕೊಟ್ಟು ಬಿಡುತ್ತಾರೆ. ಗಣೇಶ ವಿಘ್ನವಿನಾಶಕ ಆತನು ಎಲ್ಲಿ ಇರುತ್ತಾನೆಯೋ ಅಲ್ಲಿ ವಿಘ್ಣಗಳಿಗೆ ಜಾಗವಿರುವಿದಿಲ್ಲ ಗಣೇಶನನ್ನು ಶುಭದ ಸಂಕೇತ ಅಂತ ತಿಳಿದು ತಂದೆ ತಾಯಿ ಈ ಮೂರ್ತಿಯನ್ನು ಮಗಳಿಗೆ ಕೊಡುತ್ತಾರೆ. ಆದರೆ ಸ್ನೇಹಿತರೇ ಈ ತಪ್ಪನ್ನು ನೀವು ಎಂದಿಗೂ ಮಾಡಬೇಡಿ. ಒಂದು ವೇಳೆ ನೀವು ಮಾಡಿದರೆ ಇಂದಿನ ಲೇಖನದ ಮೂಲಕ ಇದನ್ನು ಸರಿ ಪಡಿಸಿಕೊಳ್ಳುವುದು ಹೇಗೆ ಅಂತ ತಿಳಿಸಿಕೊಡುತ್ತೇವೆ ಬನ್ನಿ. ಮನೆಯ ಹೆಣ್ಣು ಮಕ್ಕಳನ್ನು ತಾಯಿ ಲಕ್ಷ್ಮೀದೇವಿ ರೂಪವೇ ಅಂತ ತಿಳಿಯಲಾಗಿದ್ದು ಗಣೇಶ ಮತ್ತು ತಾಯಿ ಲಕ್ಷ್ಮೀದೇವಿ ಅನ್ನು ಧನದ ಸಂಪತ್ತು ಅಂತ ಮತ್ತು ಧನದ ಆಗಮನದ ಸೂಚನೆ ಅಂತ ತಿಳಿಯಲಾಗುತ್ತದೆ. ಲಕ್ಷ್ಮೀ ದೇವಿ ಸ್ವರೂಪ ಅನ್ನಿಸಿಕೊಳ್ಳುವ ಹೆಣ್ಣು ಮಗಳಿಗೆ ನೀವು ಗಣೇಶನ ವಿಗ್ರಹವನ್ನು ಅಥವಾ ಫೋಟೋ ಅನ್ನು ಉಡುಗೊರೆ ಆಗಿ ಕೊಟ್ಟರೆ ತನ್ನ ತವರು ಮನೆಗೆ ಧನ ಸಂಪತ್ತಿನ ಕೊರತೆ ಆಗುತ್ತದೆ. ಮನೆಯ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋಗುವಾಗ ಮನೆಯ ಸುಖ ಶಾಂತಿ ಸಮೃದ್ಧಿಯನ್ನು ತೆಗೆದುಕೊಂಡು ಹೋಗುತ್ತಾಳೆ ಆದ್ದರಿಂದ ಗಣೇಶನ ವಿಗ್ರಹವನ್ನು ಎಂದಿಗೂ ಕೊಡಬಾರದು.

ಒಂದುವೇಳೆ ನೀವು ಈ ತಪ್ಪನ್ನು ಮಾಡಿದರೆ ನಿಮ್ಮ ಮಗಳಿನಿಂದ ಮತ್ತೆ ಗಣೇಶನ ವಿಗ್ರಹವನ್ನು ಮರಳಿ ಪಡೆಯಬೇಕು. ಒಂದು ವೇಳೆ ನೀವು ಗಣೇಶನ ವಿಗ್ರಹವನ್ನು ಖರಿಧಿಸಲು ಹೋದರೆ ಗಣೇಶನ ಸೊಂಡಿಲು ಯಾವ ದಿಕ್ಕಿಗೆ ಇರಬೇಕು ಅಂತ ನೀವು ಪರಿಗಣನೆ ಮಾಡಿ ತೆಗೆದುಕೊಳ್ಳಬೇಕು. ಗಣಪತಿಯ ಸೊಂಡಿಲು ಎಡಭಾಗಕ್ಕೆ ತಿರುಗಿರಬೇಕು. ಬಲಭಾಗದಲ್ಲಿ ಸೊಂಡಿಲು ಇರುವ ಗಣೇಶನನ್ನು ಖರೀದಿ ಮಾಡಿದರೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಆದರೆ ಆತನ ಪೂಜೆ ಮಾಡುವ ವಿಧಿವಿಧಾನಗಳು ಸಂಪೂರ್ಣವಾಗಿ ಬೇರೆ ಆಗಿರುತ್ತದೆ. ಇನ್ನೂ ಗಣೇಶನ ಚಿತ್ರವನ್ನು ನೀವು ಉಡುಗೊರೆ ಆಗಿ ಕೊಡಲು ಇಷ್ಟ ಪಟ್ಟರೆ 18 ಇಂಚಿಗಿಂತ ಅಧಿಕವಾದ ಗಣೇಶನ ಚಿತ್ರಪಟವನ್ನೂ ಕೊಡಬಾರದು. ಒಡೆದು ಹೋದ ಗಣೇಶನ ವಿಗ್ರಹವನ್ನು ಫೋಟೋ ಅನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು. ಅವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ತಾಯಿ ಲಕ್ಷ್ಮೀದೇವಿ ಮತ್ತು ಗಣೇಶ ಜೊತೆಗೆ ಇರುವ ಫೋಟೋ ಅನ್ನು ಎಂದಿಗೂ ಕೊಡಬೇಡಿ. ಇಲ್ಲವಾದರೆ ನಿಮಗೆ ಹಣದ ಕೊರತೆ ಆಗುತ್ತದೆ ನೆನಪಿರಲಿ. ಶುಭದಿನ.

 

Leave a Reply

Your email address will not be published. Required fields are marked *