ನಮಸ್ತೆ ಪ್ರಿಯ ಓದುಗರೇ ಕಷ್ಟಗಳು ಅನ್ನುವುದು ಮನುಷ್ಯನಿಗೆ ಬರುತ್ತದೆ ವಿನಃ ಪ್ರಾಣಿಗಳಿಗೆ ಪಕ್ಷಿಗಳಿಗೆ ಮತ್ತು ಮರಗಳಿಗೆ ಬರುವುದಿಲ್ಲ. ಮನುಷ್ಯ ತಾನು ಸುಖವಾಗಿ ಇರಬೇಕು ಅಂತ ಎಷ್ಟೇ ಬಯಸಿದರು ಕೂಡ ಆತನನ್ನು ಕಷ್ಟಗಳನ್ನು ಹಿಂಬಾಲಿಸದೆ ಬಿಡುವುದಿಲ್ಲ. ಈ ಕಷ್ಟಗಳು ಸಾಮಾನ್ಯವಾಗಿ ಬರುವುದು ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದಲೇ, ಇದಕ್ಕೆ ಹೊಣೆ ಮನುಷ್ಯನೇ ಆಗಿರುತ್ತಾನೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ರೋಚಕವಾದ ಸಂಗತಿಯನ್ನು ತಿಳಿಸಿಕೊಡುತ್ತೇವೆ. ಅದು ಏನೆಂದರೆ ಮನುಷ್ಯನ ಕೈ ಬೆರಳಿನ ಉಗುರುಗಳು ಮತ್ತು ಕಾಲು ಬೆರಳಿನ ಉಗುರುಗಳನ್ನು ಬಳಕೆ ಮಾಡಿಕೊಂಡು ಯಾವ ಉಪಾಯವನ್ನು ಮಾಡಬಹುದು. ಈ ರೀತಿಯ ಉಪಾಯಗಳನ್ನು ಮಾಡುವುದರಿಂದ ನಿಮಗೆ ಹೇಗೆ ಲಾಭವಾಗುತ್ತದೆ ಅಂತ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಸ್ನೇಹಿತರೇ ನೀವು ವಿಶೇಷವಾಗಿ ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರುಗಳನ್ನು ಎಂದಿಗೂ ಕತ್ತರಿಸಬಾರದು ಇದು ತುಂಬಾನೇ ಮುಖ್ಯವಾದ ವಿಷಯ.

ಹಾಗೆ ನಿಮಗೆ ಉಗುರು ತುಂಬಾ ಉದ್ದವಾಗಿ ಬೆಳೆದಿದೆ ಅಂದರೆ ನೀವು ಭಾನುವಾರ ಮತ್ತು ಬುಧವಾರ ಉಗುರುಗಳನ್ನು ಕತ್ತರಿಸುವುದು ಒಳ್ಳೆಯದು ಅಂತ ತಿಳಿಯಲಾಗಿದೆ. ಈ ರೀತಿಯಾಗಿ ಈ ಎರಡು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ ಹಾಗೆಯೇ ನಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಮತ್ತು ಯಾವುದೇ ಕಷ್ಟ ಕಾರ್ಪಣ್ಯಗಳು ಕೂಡ ಬರುವುದಿಲ್ಲ. ಇನ್ನೂ ಎರಡನೆಯದು, ಈ ಉಗುರುಗಳಿಂದ ನೀವು ಒಂದು ಉಪಾಯವನ್ನು ಮಾಡಬಹುದು. ನಿಮ್ಮ ಕೈಯಲ್ಲಿರುವ ಹತ್ತು ಬೆರಳಿನ ಉಗುರುಗಳನ್ನು ಮತ್ತು ಕಾಲಿನ ಉಗುರುಗಳನ್ನು ಭಾನುವಾರ ಕತ್ತರಿಸಿ ಅವುಗಳೆಲ್ಲವನ್ನು ಒಂದು ಪೇಪರ್ ನಲ್ಲಿ ಹಾಕಿಕೊಳ್ಳಬೇಕು. ಈ ರೀತಿ ಉಪಾಯವನ್ನು ಮಾಡುವುದರಿಂದ ನಿಮಗೆ ಸಾಕಷ್ಟು ಲಾಭಗಳು ಆಗುತ್ತವೆ. ಸಾಮಾನ್ಯವಾಗಿ ಮನುಷ್ಯನ ತಲೆಯ ಕೂದಲು ಮತ್ತು ಉಗುರುಗಳನ್ನು ಮಾಟ ಮಂತ್ರಗಳ ಪ್ರಯೋಗ ಮಾಡಲು ಬಳಸುತ್ತಾರೆ. ಪೇಪರ್ ನಲ್ಲಿ ಕೂಡಿ ಇಟ್ಟ ಉಗುರುಗಳನ್ನು ತೆಗೆದುಕೊಂಡು ನಿಮ್ಮ ತಲೆಯ ಮೇಲಿಂದ ಕೆಳಗಿನವರೆಗೆ 21 ಬಾರೀ ನಿವಾಳಿಸಬೇಕು. ಈ ಕೆಲಸವನ್ನು ನೀವು ಸೂರ್ಯ ಮುಳುಗುವ ವೇಳೆಗೆ ಮಾಡಬೇಕು.

ಈ ರೀತಿ ಮಾಡಿದ ಬಳಿಕ ಈ ಎಲ್ಲ ಉಗುರುಗಳನ್ನು ನೀವು ಬೆಂಕಿಯಲ್ಲಿ ಹಾಕಿ ಸುಡಬೇಕಾಗುತ್ತದೆ. ಬೂದಿ ಆಗುವವರೆಗೂ ಚೆನ್ನಾಗಿ ಬೆಂಕಿಯಲ್ಲಿ ಸುಡಬೇಕು. ಇದರಿಂದ ನಿಮ್ಮನ್ನು ಹಿಂಬಾಲಿಸುವ ಎಲ್ಲ ಕಷ್ಟಗಳು ದೂರವಾಗುತ್ತದೆ. ನಕಾರಾತ್ಮಕ ಶಕ್ತಿಗಳ ಅಭಾವ ಕಡಿಮೆ ಆಗುತ್ತದೆ. ಯಾವುದೇ ರೀತಿಯ ಮನೆಯಲ್ಲಿ ಹಣದ ಕೊರತೆ ಅನ್ನುವುದು ಆಗುವುದಿಲ್ಲ. ಮನೆಯಲ್ಲಿ ಸುಖದ ವಾತಾವರಣ ಸೃಷ್ಟಿ ಆಗುತ್ತದೆ. ಕುಟುಂಬದ ಸದಸ್ಯರು ಆರೋಗ್ಯವಾಗಿ ನೆಮ್ಮದಿಯಿಂದ ಇರುತ್ತಾರೆ. ಕಷ್ಟಗಳು ಒಂದೊಂದಾಗಿ ಕರಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಉಗುರುಗಳು ಪ್ರತಿದಿನವೂ ಬೆಳೆಯುತ್ತವೆ ಆದರೆ ಅವುಗಳನ್ನು ನಾವು ದಿನವೂ ಕತ್ತರಿಸಲು ಆಗುವುದಿಲ್ಲ. ಅದಕ್ಕಾಗಿ ಮನುಷ್ಯನು ತಿಂಗಳಿಗೆ ಅಥವಾ ಹದಿನೈದು ದಿನಗಳಿಗೆ ಉಗುರುಗಳನ್ನು ಕತ್ತರಿಸುತ್ತಾನೆ. ಆ ಸಮಯದಲ್ಲಿ ಕತ್ತರಿಸಿದ ಉಗುರುಗಳನ್ನು ಕೂಡಿತ್ತು ಪೇಪರ್ ನಲ್ಲಿ ಹಾಕಿ ನಿಮ್ಮ ತಲೆಯ ಮೇಲಿಂದ ಕೆಳಗಿನವರೆಗೆ ನಿವಾಳಿಸಿ ಅದನ್ನು ಬೆಂಕಿಯಲ್ಲಿ ಸುಡಬೇಕು. ಉಗುರುಗಳು ಹೇಗೆ ಸುಟ್ಟು ಬೂದಿ ಆಗುತ್ತದೆಯೋ ಹಾಗೆಯೇ ನಿಮ್ಮ ಕಷ್ಟಗಳು ಕೂಡ ಕರಗುತ್ತಾ ಬರುತ್ತದೆ. ತುಂಬಾನೇ ಸರಳವಾದ ಸುಲಭವಾದ ಉಪಾಯ ಇದಾಗಿದೆ. ಕತ್ತರಿಸಿದ ಉಗುರುಗಳನ್ನು ಎಂದಿಗೂ ಆಕಡೆ ಈಕಡೆ ಚೆಲ್ಲಬಾರದು. ಅವುಗಳಿಂದ ಈ ಉಪಾಯವನ್ನು ಮಾಡಿದರೆ ನೀವು ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು. ಶುಭದಿನ.

Leave a Reply

Your email address will not be published. Required fields are marked *