ನಮಸ್ತೆ ಪ್ರಿಯ ಓದುಗರೇ ಹೆಣ್ಣಿನ ಶೃಂಗಾರ ವಸ್ತುಗಳಲ್ಲಿ ಕಾಲುಂಗುರ ಒಂದು ಕೂಡ ಶೃಂಗಾರ ವಸ್ತುವೇ ಸರಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಆದ ಹೆಣ್ಣು ಮಕ್ಕಳು ಕಾಲುಂಗುರವನ್ನೂ ಧರಿಸುವುದು ತುಂಬಾನೇ ಶುಭ ಅಂತ ನಂಬಲಾಗಿದೆ. ಹಾಗೆಯೇ ಮದುವೆ ಆದ ಹೆಣ್ಣು ಮಗಳು ಕಾಲಿಗೆ ಕಾಲುಂಗುರ ಧರಿಸುವುದರಿಂದ ಆಕೆಯ ಸೌಂದರ್ಯ ಮಾತ್ರ ಹೆಚ್ಚುವುದಲ್ಲದೆ ಆಕೆಯ ಜೀವನದ ಸೌಂದರ್ಯವು ಕೂಡ ವೃದ್ಧಿ ಆಗುತ್ತದೆ. ಆದ್ದರಿಂದ ಮದುವೆ ಆದ ಹೆಣ್ಣು ಮಗಳು ಕಾಲುಂಗುರ ಧರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಇನ್ನೂ ಭಾರತದಲ್ಲಿ ಸ್ತ್ರೀಯರು ಕಾಲುಂಗರ ಧರಿಸಿದರೆ ಅವರನ್ನು ವಿವಾಹಿತರು ಎಂದು ಗುರುತಿಸುತ್ತಾರೆ. ಬಹುತೇಕ ಭಾರತೀಯ ನಾರಿಯರು, ವಿವಾಹವಾದ ಬಳಿಕ ಕಾಲುಂಗುರವನ್ನು ಧರಿಸುತ್ತಾರೆ. ಇದು ಕೇವಲ ಸ್ತ್ರೀಯೋರ್ವಳು ವಿವಾಹಿತೆ ಎಂಬುದರ ಸೂಚಕವಷ್ಟೇ ಅಲ್ಲ, ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಕಾಲುಂಗುರ ಧರಿಸುವ ಇನ್ನೊಂದು ಅದ್ಭುತವಾದ ವಿಶೇಷತೆ ಅಂದರೆ ಸೂರ್ಯ ಮತ್ತು ಚಂದ್ರನ ಕೃಪೆ ಇರುತ್ತದೆ. ಇದು ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವುದಲ್ಲದೆ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿ ಬದುಕಿ ಬಾಳುತ್ತಾರೆ. ಮಿತ್ರರೇ ನೀವು ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿ ಅಂದರೆ ಗಂಡನ ಆರ್ಥಿಕ ಸ್ಥಿತಿ ಮತ್ತು ಆತನ ಆರೋಗ್ಯವೂ ಕೂಡ ಹೆಂಡತಿ ಧರಿಸುವ ಕಾಲುಂಗುರದ ಮೇಲೆ ನಿರ್ಧಾರವಾಗಿರುತ್ತದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಯಾವ ಕಾಲುಂಗುರವನ್ನು ಧರಿಸಬೇಕು ಎಷ್ಟು ಸಂಖ್ಯೆಯಲ್ಲಿ ಧರಿಸಬೇಕು ಯಾವಾಗ ಧರಿಸಬೇಕು ಯಾವ ಥರಣಾಗಿ ಧರಿಸಬೇಕು ಅಂತ ಹಾಗೆಯೇ ಯಾವ ಕಾಲುಂಗುರವನ್ನು ಧರಿಸಬಾರದು ಅಂತ ಕೂಡ ತಿಳಿಸಿಕೊಡುತ್ತೇವೆ ಬನ್ನಿ. ಮದುವೆ ಆದ ಹೆಣ್ಣು ಮಗಳು ಕಾಲಿಗೆ ಕಾಲುಂಗುರ ಧರಿಸುವುದರಿಂದ ಆಕೆಯ ಋತುಚಕ್ರದಲ್ಲಿ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಅಷ್ಟೇ ಅಲ್ಲದೇ ಆಕೆಯ ಗರ್ಭಧಾರಣೆ ಸಮಯದಲ್ಲಿ ಕೂಡ ನೋವು ಬರುವುದಿಲ್ಲ. ಇದು ವೈಜ್ಞಾನಿಕವಾಗಿ ಸಾಬೀತಾಗಿದ್ದು ಮದುವೆ ಆದ ಹೆಣ್ಣು ಮಗಳು ಕಾಲುಂಗುರ ಧರಿಸುವುದು ಅತ್ಯವಶ್ಯಕವಾಗಿದೆ. ಕಾಲುಂಗುರವನ್ನು ಎಂದಿಗೂ ಹೆಬ್ಬೆರಳಿನ ಪಕ್ಕದಲ್ಲಿ ಇರುವ ಬೆರಳಿಗೆ ಅಂದರೆ ತೋರುಬೆರಳಿಗೆ ಹಾಕಿಕೊಳ್ಳಬೇಕು. ಹಾಗೆಯೇ ಮಧ್ಯ ಬೆರಳಿನಲ್ಲಿ ಕೂಡ ನೀವು ಕಾಲುಂಗುರ ಧರಿಸಬಹುದು. ಕಾಲುಂಗುರವನ್ನು ನೀವು ಐದು ಅಥವಾ ಎರಡು ಸಂಖ್ಯೆಯನ್ನು ಧರಿಸಬಹುದು. ಅಂದರೆ ಪಾದದ ಎರಡು ಬೆರಳಿಗೆ ಧರಿಸಬಹುದು ಅಥವಾ ಐದು ಬೆರಳಿಗೆ ಧರಿಸಬಹುದು. ಇನ್ನೂ ಕನ್ಯೆಯರು ಕಾಲುಂಗುರವನ್ನು ಧರಿಸಬಾರದು. ಕೆಲವರು ಫ್ಯಾಷನ್ ಗಾಗಿ ಈ ರೀತಿ ಮಾಡುತ್ತಿದ್ದಾರೆ ಆದರೆ ಇದು ತಪ್ಪು ಕೇವಲ ವಿವಾಹಿತರು ಮಾತ್ರ ಕಾಲುಂಗುರವನ್ನು ಧರಿಸಬೇಕು.
ಇನ್ನೂ ಕಾಲುಂಗುರವನ್ನು ನೀವು ಎಂದಿಗೂ ಚಿನ್ನದ್ದು ಹಾಕಿಕೊಳ್ಳಬಾರದು ಕೇವಲ ಬೆಳ್ಳಿಯ ಕಾಲುಂಗುರವನ್ನು ಮಾತ್ರ ಧರಿಸಬೇಕು. ಹಾಗೆಯೇ ಸರಿಯಾದ ಅಳತೆಯ ಕಾಲುಂಗುರವನ್ನು ಧರಿಸಬೇಕು. ಇಲ್ಲವಾದರೆ ನಿಮ್ಮ ಮೇಲೆ ಮತ್ತು ನಿಮ್ಮ ಗಂಡನ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ. ಅಂದರೆ ಆರೋಗ್ಯದಲ್ಲಿ ತೊಂದರೆಗಳು ಆರ್ಥಿಕವಾಗಿ ತೊಂದರೆಗಳು ಶುರು ಆಗುತ್ತದೆ ಆದ್ದರಿಂದ ಸರಿಯಾದ ಅಳತೆಯ ಕಾಲುಂಗುರ ಧರಿಸುವುದು ಒಳಿತು. ಜೊತೆಗೆ ನೀವು ಉಪಯೋಗಿಸಿದ ಕಾಲುಂಗುರವನ್ನು ಯಾರಿಗೂ ಎಂದಿಗೂ ಉಡುಗೊರೆ ಆಗಿ ಕೊಡಬಾರದು. ಇನ್ನೂ ಕಾಲುಂಗುರದಲ್ಲಿ ಗೆಜ್ಜೆಗಳು ಇದ್ದರೆ ಇನ್ನೂ ಶ್ರೇಷ್ಠ ಅಂತ ನಂಬಲಾಗಿದೆ. ಇದರಿಂದ ತಾಯಿ ಲಕ್ಷ್ಮೀದೇವಿ ತುಂಬಾನೇ ಪ್ರಸನ್ನಳು ಆಗುತ್ತಾಳೆ. ಹೀಗೆ ನಾವು ಕೆಲವು ವಿಷಯಗಳನ್ನು ತಿಳಿದುಕೊಂಡು ಅವುಗಳ ಪಾಲನೆ ಮಾಡಿಕೊಳ್ಳಬೇಕು. ಇಲ್ಲವಾದರೆ ಗೊತ್ತಿಲ್ಲದೆ ಇವುಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ.ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಲ್ಲರಿಗು ಶುಭದಿನ.